ಸಮಸ್ಯೆ ಪತ್ತೆ ಹಚ್ಚುವಲ್ಲಿ ನಗರಸಭೆ ವಿಫಲ
Team Udayavani, Nov 4, 2019, 3:00 AM IST
ಹುಣಸೂರು: ನಗರಸಭೆಯಿಂದ ಸರಬರಾಜು ಮಾಡುವ ಶುದ್ಧ ಕುಡಿಯುವ ನೀರಿಗೆ ಕಲ್ಮಶ ನೀರು ಮಿಶ್ರಣಗೊಳ್ಳುತ್ತಿರುವುದು ಎಲ್ಲಿ ಎಂಬುದನ್ನು ಪತ್ತೆ ಹಚ್ಚುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ಜತೆಗೆ ದುರಸ್ತಿ ನೆಪದಲ್ಲಿ ರಸ್ತೆಯಲ್ಲಿ ತೋಡಿರುವ ಗುಂಡಿಗಳಲ್ಲಿ ಕಸ ಸಂಗ್ರಹವಾಗುತ್ತಿದ್ದು, ದುರ್ನಾತ ಬೀರುತ್ತಿದೆ. ಶೀಘ್ರ ನಗರಸಭೆ ಅಧಿಕಾರಿಗಳು ಕ್ರಮಕೈಗೊಳ್ಳ ಸಮಸ್ಯೆ ಪರಿಹರಿಸಬೇಕು ಎಂದು ನಗರವಾಸಿಗಳು ಆಗ್ರಹಿಸಿದ್ದಾರೆ.
ಟ್ಯಾಂಕರ್‌ನಿಂದ ನೀರು ಪೂರೈಕೆ ಅಸಮರ್ಪಕ: ನಗರಕ್ಕೆ ಈ ಹಿಂದೆ ಪಂಪ್ ಹೌಸ್‌ನಿಂದ ಪೂರೈಕೆಯಾಗುತ್ತಿದ್ದ ಲಕ್ಷ್ಮಣತೀರ್ಥ ನದಿ ನೀರು ಕುಡಿಯಲು ಯೋಗ್ಯವಿಲ್ಲವೆಂದು ಸ್ಥಗಿತಗೊಳಿಸಿ, ಕಾವೇರಿಯ ಶುದ್ಧೀಕರಿಸಿದ ನೀರು ಸರಬರಾಜು ಮಾಡಲಾಗುತ್ತಿದೆ. ಆದರೂ ಎಲ್ಲಿಯೋ ನಲ್ಲಿ ನೀರಿನ ಪೈಪಿಗೆ ಒಳಚರಂಡಿ ನೀರು ಸೇರುತ್ತಿರುವುದರಿಂದ ಪೂರೈಕೆಯಾಗುವ ನೀರಿನಲ್ಲಿ ಕಲ್ಲು, ಪಾಚಿ, ದುರ್ವಾಸನೆ ಭರಿತ ಗಲೀಜು ನೀರು ಸರಬರಾಜಾಗುತ್ತಿದ್ದರಿಂದ ಸ್ಥಗಿತಗೊಳಿಸಲಾಗಿತ್ತು.
ಈ ನೀರು ನಗರದ 8ನೇ ವಾರ್ಡ್‌ನ ವ್ಯಾಪ್ತಿಯ ಬ್ರಾಹ್ಮಣರ ಬೀದಿ, ರಾಘವೇಂದ್ರ ಸ್ವಾಮಿ ಮಠದ ರಸ್ತೆ, ಕಾಫಿ ವರ್ಕ್ಸ್ ರಸ್ತೆ, ಗಣೇಶಗುಡಿ ರಸ್ತೆ, ಹಾಗೂ ಸ್ಟೋರ್ ಬೀದಿಗಳಿಗೆ ಪೂರೈಕೆಯಾಗುತ್ತಿತ್ತು. ಗಲೀಜು ನೀರು ಮಿಶ್ರಣಗೊಳ್ಳುತ್ತಿದ್ದರಿಂದ ನೀರು ಸರಬರಾಜು ಪೂರೈಕೆ ನಿಲ್ಲಿಸಿ, ಟ್ಯಾಂಕರ್‌ನಿಂದ ನೀರು ಪೂರೈಸಲಾಗುತ್ತಿದೆ. ಆದರೆ ಟ್ಯಾಂಕರ್‌ನಿಂದ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಅಗೆದಿರುವ ಗುಂಡಿಗಳಲ್ಲಿ ಕಸ ಸಂಗ್ರಹ: ಪತ್ರಿಕೆ ಪ್ರಕಟಿಸಿದ್ದ ವಿಶೇಷ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಒಳಚರಂಡಿಯ ಅಶುದ್ಧ ನೀರು ಸೇರುತ್ತಿರುವುದನ್ನು ಪತ್ತೆ ಹಚ್ಚಲು ಅಲ್ಲಲ್ಲಿ ಗುಂಡಿಗಳನ್ನು ತೋಡಿದ್ದರು. ಆದರೆ ತೋಡಿದ್ದ ಗುಂಡಿಗಳನ್ನು ಮುಚ್ಚದೆ ಹಾಗೆ, ಬಿಟ್ಟಿದ್ದು, ರಸ್ತೆಗಳಲ್ಲಿ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಆ ಗುಂಡಿಗಳಲ್ಲೂ ಸಹ ಕಸ ತುಂಬಿ ಸುತ್ತಲಿನ ನಿವಾಸಿಗಳಿಗೆ ದುರ್ವಾಸನೆ ಬೀರುತ್ತಿದೆ ಎಂದು ಸಾರ್ವಜನಿಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಅಗತ್ಯ ಟ್ಯಾಂಕರ್ ನೀರು ಪೂರೈಸುತ್ತಿಲ್ಲ: ಬಡಾವಣೆಗಳಿಗೆ ನಲ್ಲಿ ನೀರೂ ಇಲ್ಲ, ಟ್ಯಾಂಕರ್ ನೀರೂ ಇಲ್ಲದಂತಾಗಿದೆ. ಇದರಿಂದಾಗಿ ಬಡಾವಣೆಯ ಕುಟುಂಬಗಳು ನೀರಿಗಾಗಿ ಪರದಾಡುತ್ತಿವೆ. ಇನ್ನು ಸಮಾಜ ಸೇವಕರು ತಮ್ಮ ಟ್ಯಾಂಕರ್‌ಗಳ ಮೂಲಕ ಉಚಿತವಾಗಿ ಪೂರೈಸಲು ಮುಂದಾದರೂ ಟ್ಯಾಂಕರ್‌ಗೆ ಶುದ್ಧೀಕರಿಸಿದ ನೀರನ್ನು ನಗರಸಭೆ ನೀಡುತ್ತಿಲ್ಲ ಎಂಬ ಆರೋಪ ಕೇಳಿದೆ. ಹೀಗಾಗಿ ಬಡಾವಣೆ ನಿವಾಸಿಗಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಆರೋಗ್ಯ ಇಲಾಖೆ ಪರಿಶೀಲನೆ, ಸೂಚನೆ: ಅಶುದ್ಧ ನೀರು ಪೂರೈಕೆಯಾಗುತ್ತಿದ್ದ ಬಡಾವಣೆ ಅನೇಕ ಮಂದಿಗೆ ಕಾಯಿಲೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗಳಿಗೆ ಭೇಟಿ ಇತ್ತು ಪರಿಶೀಲಿಸಿದ ವೇಳೆ ಇಲ್ಲಿಗೆ ಪೂರೈಕೆಯಾಗುತ್ತಿರುವ ನೀರಿನ ಮಾದರಿ ಸಂಗ್ರಹಿಸಿದ್ದು, ಪ್ರಯೋಗಾಲಯದ ವರದಿಯಂತೆ ಬಳಸಲು ಯೋಗ್ಯವಿಲ್ಲ, ಓವರ್‌ಹೆಡ್ ಟ್ಯಾಂಕ್‌ಗಳನ್ನು ಕ್ಲೋರಿನೇಷನ್ ಮಾಡಬೇಕು, ವಾಲ್‌ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು, ಸುತ್ತ ಶುಚಿತ್ವ ಕಾಪಾಡಬೇಕು, ಒಡೆದಿರುವ ಪೈಪ್‌ಗ್ಳನ್ನು ದುರಸ್ಥಿಗೊಳಿಸಿದ ನಂತರವೇ ನೀರು ಸರಬರಾಜಿಗೆ ಕ್ರಮವಹಿಸುವಂತೆ ಆರೋಗ್ಯಇಲಾಖೆಯು ಜಿಲ್ಲಾಕಾರಿ ಸೇರಿದಂತೆ ಸಂಬಂ—ತ ಇಲಾಖೆಗಳಿಗೆ ಪತ್ರಬರೆದಿದ್ದಾರೆ.
ನಾಳೆ ಪ್ರತಿಭಟನೆ: ಕಲುಷಿತ ನೀರು ಸರಬರಾಗುತ್ತಿದ್ದರೂ ಪೌರಾಯುಕ್ತರು ಕ್ರಮವಹಿಸದಿರುವ ಬಗ್ಗೆ ಬಡಾವಣೆ ನಿವಾಸಿಗಳು ಬುಧವಾರ ನಗರಸಭೆ ಎದುರು ಖಾಲಿ ಬಿಂದಿಗೆ ಪ್ರದರ್ಶಿಸಿ ಪ್ರತಿಭಟಿಸುವುದಾಗಿ ಬಡಾವಣೆ ಮುಖಂಡರು ತಿಳಿಸಿದ್ದಾರೆ.
ಶುದ್ಧ ಕುಡಿಯುವ ನೀರಿಗೆ ಒಳಚರಂಡಿ ನೀರು ಸೇರುತ್ತಿರವುದನ್ನು ಪತ್ತೆಹಚ್ಚಲು ನಗರಸಭೆ ವಿಫಲವಾಗಿದೆ. ಜತೆಗೆ ಟ್ಯಾಂಕರ್‌ಗಳಿಂದ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪ್ರಶ್ನಿಸಲು ಶಾಸಕರಾಗಲಿ, ನಗರಸಭೆ ಪ್ರತಿನಿಗಳೂ ಇಲ್ಲ. ನಗರಸಭೆ ಆಡಳಿತಾಕಾರಿಯಾದ ಜಿಲ್ಲಾಧಿಕಾರಿಗಳೇ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು.
-ಲಕ್ಷ್ಮಮ್ಮ, ಬ್ರಾಹ್ಮಣ ಬೀದಿ ನಿವಾಸಿ,
ಒಳಚರಂಡಿ ನೀರು ನಲ್ಲಿ ನೀರಿಗೆ ಸೇರುತ್ತಿರುವುದನ್ನು ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಶೀಘ್ರವೇ ಶುದ್ಧ ನೀರು ಪೂರೈಸಲಾಗುವುದು. ಅಲ್ಲಿವರೆಗೂ ಟ್ಯಾಂಕರ್ ನೀರು ಪೂರೈಸಲು ಕ್ರಮವಹಿಸಲಾಗಿದೆ.
-ಶಿವಪ್ಪನಾಯಕ, ಪ್ರಭಾರಪೌರಾಯುಕ್ತ
* ಸಂಪತ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.