ಖ್ಯಾತ ಕಲಾವಿದರಿಂದ ಸಂಗೀತ ರಸದೌತಣ


Team Udayavani, Sep 12, 2017, 12:14 PM IST

mys1.jpg

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಸೆ.21ರಿಂದ 28ರವರೆಗೆ ಮೈಸೂರು ಅರಮನೆ ಮುಂಭಾಗದ ಮುಖ್ಯ ವೇದಿಕೆ ಸೇರಿದಂತೆ ನಗರದ ಆರು ಪ್ರದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ದಸರಾ ಸಾಂಸ್ಕೃತಿಕ ಉಪ ಸಮಿತಿ ಉಪ ವಿಶೇಷಾಧಿಕಾರಿ ಪಿ.ಶಿವಶಂಕರ್‌ ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಎಲ್ಲ ಸಂಗೀತ ಪ್ರಕಾರಗಳಿಗೂ ಆದ್ಯತೆ ನೀಡಲಾಗುತ್ತಿದೆ. ಅರಮನೆ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ವೈಭವ ನಡೆಯಲಿದೆ. ನಿತ್ಯ ರಾತ್ರಿ 9 ರಿಂದ 10 ಗಂಟೆಯ ಒಂದು ಕಾರ್ಯಕ್ರಮವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಅರಮನೆ ಮುಂಭಾಗದ ವೇದಿಕೆಯಲ್ಲಿ ಖ್ಯಾತ ಕಲಾವಿದರಾದ ಪಂಡಿತ್‌ ರಾಜೀವ್‌ ತಾರಾನಾಥ್‌, ವಿದ್ವಾನ್‌ ಟಿ.ಕೃಷ್ಣ, ಚಿತ್ರ ತಾರೆಯರಾದ ಶೋಭನಾ, ಸುಧಾಚಂದ್ರನ್‌, ಉಸ್ತಾದ್‌ ತಲತ್‌ ಅಜೀಜ್‌, ಉಸ್ತಾದ್‌ ಲಕ್ವಿಂದರ್‌ ವಡಾಲಿ, ವಿದುಷಿ ಶುಭಾ ಮುದ್ಗಲ್‌, ನಾಟ್ಯಗುರು ಡಾ.ವಸುಂಧರಾ ದೊರೆಸ್ವಾಮಿ ಕಾರ್ಯಕ್ರಮ ನೀಡಲಿದ್ದಾರೆ.

ಸೆ.21ರಂದು ಸಂಜೆ 6 ರಿಂದ 6.30ರವರೆಗೆ ಮೈಸೂರಿನ ನಾದಸ್ವರ ಕಲಾವಿದರಾದ ವಿದ್ವಾನ್‌ ಯದುಕುಮಾರ್‌ ಮತ್ತು ತಂಡದಿಂದ ನಾದಸ್ವರ. 6.30 ರಿಂದ 7ಗಂಟೆವರೆಗೆ ಮುಖ್ಯಮಂತ್ರಿಯವರಿಂದ ದಸರಾ ಸಾಂಸ್ಕೃತಿಕ ವೈಭವ ಉದ್ಘಾಟನೆ. 7.30 ರಿಂದ 8.30ರವರೆಗೆ ಬೆಂಗಳೂರಿನ ಪ್ರಭಾತ್‌ ಕಲಾವಿದರಿಂದ ದಸರಾ ವಿಕಾಸ ವೈಭವ ನೃತ್ಯರೂಪಕ. ರಾತ್ರಿ 8.30 ರಿಂದ 10 ಗಂಟೆವರೆಗೆ ಚಿತ್ರ ತಾರೆ ಸುಧಾಚಂದ್ರನ್‌ರಿಂದ ಮಹಿಷ ಮರ್ದಿನಿ ನೃತ್ಯರೂಪಕ.

ಸೆ.22ರಂದು ಸಂಜೆ 6 ರಿಂದ 7 ಗಂಟೆವರೆಗೆ ಸಿತಾರ್‌ ವಾದಕರಾದ ಪಂಡಿತ್‌ ಅಂಕುಶ್‌ ನಾಯಕ್‌, ಉಸ್ತಾದ್‌ ರಫೀಕ್‌ ಖಾನ್‌, ಸಾರಂಗಿ ವಾದಕ ಉಸ್ತಾದ್‌ ಫ‌ಯಾಜ್‌ಖಾನ್‌ ಅವರಿಂದ ಸಿತಾರ್‌- ಸಾರಂಗಿ ಜುಗಲ್‌ಬಂದಿ, ಸಂಜೆ 7 ರಿಂದ 8ರವರೆಗೆ ಧಾರವಾಡದ ಪಂಡಿತ್‌ ಎಂ.ವೆಂಕಟೇಶ್‌ ಕುಮಾರ್‌ರಿಂದ ಹಿಂದೂಸ್ತಾನಿ ಗಾಯನ, ರಾತ್ರಿ 8ರಿಂದ 10 ಗಂಟೆವರೆಗೆ ಚಿತ್ರ ತಾರೆ ವಿ.ಶೋಭನಾರಿಂದ ನೃತ್ಯ ವೈಭವ. 

ಸೆ.23ರಂದು ಸಂಜೆ 6ರಿಂದ 7ರವರೆಗೆ ಬೆಂಗಳೂರಿನ ಭರತನಾಟ್ಯ ಕಲಾವಿದೆ ಯಾಮಿನಿ ಮುತ್ತಣ್ಣ ಅವರಿಂದ ಸಿದ್ಧಿ ನೃತ್ಯ ಯೋಗ ಸಂಗಮ. 7ರಿಂದ 8 ಮೈಸೂರಿನ ಗಾನಭಾರತಿ ಸಂಗೀತ ನೃತ್ಯಶಾಲೆಯವರಿಂದ ಬುದ್ಧಂ ಶರಣಂ ನೃತ್ಯರೂಪಕ. ರಾತ್ರಿ 8.30ರಿಂದ 10ರ ವರೆಗೆ ನವದೆಹಲಿಯ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ಶುಭಾ ಮುದ್ಗಲ್‌ರಿಂದ ಹಿಂದೂಸ್ತಾನಿ ಗಾಯನ. 

ಸೆ.24ರಂದು ಸಂಜೆ 6ರಿಂದ 7ರ ವರೆಗೆ ಮುಂಬೈನ ಖ್ಯಾತ ಒಡಿಸ್ಸಿ ನೃತ್ಯಗಾರ ರುಮಿಂದರ್‌ ಖುರಾನರಿಂದ ಒಡಿಸ್ಸಿ ನೃತ್ಯ. ರಾತ್ರಿ 7ರಿಂದ 8ರವರೆಗೆ ಮೈಸೂರಿನ ಖ್ಯಾತ ಸರೋದ ವಾದಕ ಪಂಡಿತ್‌ ರಾಜೀವ್‌ ತಾರಾನಾಥ್‌ ಅವರಿಂದ ಸರೋದ್‌ ವಾದನ. ರಾತ್ರಿ 8 ರಿಂದ 10 ಅಮೃತಸರದ ಅಂತಾರಾಷ್ಟ್ರೀಯ ಖ್ಯಾತಿಯ ಸೂಫಿ ಗಾಯಕ ಲಕ್ವಿಂದರ್‌ ವಡಾಲಿ ಅವರಿಂದ ಸೂಫಿ ಸಂಗೀತ. 

ಸೆ.25ರಂದು ಸಂಜೆ 6 ರಿಂದ 8 ಪೊಲೀಸ್‌ ಬ್ಯಾಂಡ್‌. ರಾತ್ರಿ 8 ರಿಂದ 8.30ರವರೆಗೆ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದವರಿಂದ ಮೋಹಿನಿ ಅಟ್ಟಂ ಮತ್ತು ಕುಚುಪುಡಿ. ರಾತ್ರಿ 8.30ರಿಂದ 10ರ ವರೆಗೆ ಬೆಂಗಳೂರಿನ ಹಿಂದೂಸ್ತಾನಿ ವಾದ್ಯಗಾರ ಪಂಡಿತ್‌ ಪ್ರಕಾಶ್‌ ಸೊಂಟಕ್ಕಿ ಅವರಿಂದ ಪ್ಯೂಜನ್‌ ಸಂಗೀತ.

ಸೆ.26ರಂದು ಸಂಜೆ 6 ರಿಂದ 7 ಬೆಂಗಳೂರಿನ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದೆ ಶಾಂತಲಾರಿಂದ ಪ್ರಕೃತಿ ನೃತ್ಯ ರೂಪಕ, ರಾತ್ರಿ 7ರಿಂದ 8 ಚೆನ್ನೈನ ವಿದ್ವಾನ್‌ ಟಿ.ಎಂ.ಕೃಷ್ಣರಿಂದ ಕರ್ನಾಟಕ ಸಂಗೀತ ಗಾಯನ.

ಸೆ.26ರಂದು ರಾತ್ರಿ 8 ರಿಂದ 10ರವರೆಗೆ ಬೆಂಗಳೂರಿನ ಧ್ವನಿ ಸುಗಮ ಸಂಗೀತ ಸಂಸ್ಥೆ ವತಿಯಿಂದ ಕನ್ನಡ ಡಿಂಡಿಮ ಸುಗಮ ಸಂಗೀತ ಕಾರ್ಯಕ್ರಮ.
ಸೆ.27ರಂದು ಸಂಜೆ 6 ರಿಂದ 7 ಬೆಂಗಳೂರಿನ ಪಂ. ಆನೂರು ಅನಂತಕೃಷ್ಣರಿಂದ ತಾಳವಾದ್ಯ ಕಚೇರಿ, 7ರಿಂದ 8ರ ವರೆಗೆ ಡಾ.ವಸುಂಧರಾ ದೊರೆಸ್ವಾಮಿರಿಂದ ವಿದ್ಯುನ್ಮದನಿಕಾ ನೃತ್ಯ ರೂಪಕ, ರಾತ್ರಿ 8 ರಿಂದ 10ರವರೆಗೆ ಮುಂಬೈನ ಉಸ್ತಾದ್‌ ತಲತ್‌ ಅಜೀಜ್‌ರಿಂದ ಘಜಲ್‌ ಸಂಗೀತ.

ಸೆ.28ರಂದು ಸಂಜೆ 6 ರಿಂದ 7ಪುಣೆಯ ವಿದ್ವಾನ್‌ ನಂದಿನಿ ರಾವ್‌ ಗುಜಾರ್‌ರಿಂದ ಕರ್ನಾಟಕ ಸಂಗೀತ ಗಾಯನ, ರಾತ್ರಿ 7ರಿಂದ 8 ಬೆಂಗಳೂರಿನ ಖ್ಯಾತ ಹಿಂದೂಸ್ತಾನಿ ಗಾಯಕ ಪಂ.ಜಯತೀರ್ಥ ಮೇವುಂಡಿ ಹಾಗೂ ಖ್ಯಾತ ಪಿಟೀಲು ವಾದಕ ಪಂ.ಪ್ರವೀಣ್‌ ಗೋಡಿRಂಡಿ ಅವರಿಂದ ಹಿಂದೂಸ್ತಾನಿ ಗಾಯನ ಮತ್ತು ಕೊಳಲು ವಾದನ ಜುಗಲ್‌ಬಂದಿ. ರಾತ್ರಿ 8ರಿಂದ 9 ಬೆಂಗಳೂರಿನ ವಿದ್ವಾನ್‌ ಮಧು ನಟರಾಜ್‌ರಿಂದ ಕಥಕ್‌ ನೃತ್ಯ, ರಾತ್ರಿ 9ರಿಂದ 10ರವರೆಗೆ ಪಿಚ್ಚಳ್ಳಿ ಶ್ರೀನಿವಾಸ್‌ ಮತ್ತು ಮಳವಳ್ಳಿ ಮಹದೇವಸ್ವಾಮಿರಿಂದ ಜನಪದ ಸಂಗೀತ ಕಾರ್ಯಕ್ರಮ ನಡೆಯಲಿದೆ.

9 ಗಂಟೆ ನಂತರ ಅರಮನೆ ದೀಪಾಲಂಕಾರ ಇರುತ್ತಿರಲಿಲ್ಲ. ಈ ಬಾರಿ ರಾತ್ರಿ 10 ಗಂಟೆವರೆಗೂ ಅರಮನೆ ದೀಪಾಲಂಕಾರ ಇರಲಿದೆ. ಅರಮನೆ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಳೆದ ಬಾರಿ 50 ಲಕ್ಷ ರೂ. ಪ್ರಾಯೋಜಕತ್ವ ಸಿಕ್ಕಿತ್ತು. ಈ ಬಾರಿ 1 ಕೋಟಿ ರೂ. ಬರುವ ನಿರೀಕ್ಷೆ ಇದೆ.
-ರಂದೀಪ್‌ ಡಿ, ದಸರಾ ವಿಶೇಷಾಧಿಕಾರಿ

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.