ಮೈಸೂರು: ಅಪ್ಪು ಚಿತ್ರೋತ್ಸವಕ್ಕೆ ಅಶ್ವಿನಿ ಚಾಲನೆ
ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಅಪ್ಪುವಿಗೆ ಜೈಕಾರ ಹಾಕಿದರು.
Team Udayavani, Sep 29, 2022, 6:14 PM IST
ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿರುವ ದಸರಾ ಚಲನಚಿತ್ರೋತ್ಸವ ದಲ್ಲಿ ಅಪ್ಪು ಚಿತ್ರೋತ್ಸವದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾಗಿಯಾಗುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು. ನಗರದ ಐನೆಕ್ಸ್ ಚಿತ್ರ ಮಂದಿರದಲ್ಲಿ ಪುನೀತ್ ರಾಜಕುಮಾರ್ ನೆನಪಿನಲ್ಲಿ ನಡೆದ ಅಪ್ಪು ಚಿತ್ರೋತ್ಸವ ಕಾರ್ಯಕ್ರಮವನ್ನು ಚಿತ್ರಮಂದಿರ ಆವರಣದಲ್ಲಿ ಕಾರ್ಯಕ್ರಮದ ಉದ್ಘಾಟನೆಗಾಗಿ ಇಡಲಾಗಿದ್ದ ಕುರ್ಚಿಯಲ್ಲಿ ಆಸೀನರಾಗಿರುವ ಭಂಗಿಯಲ್ಲಿ ಇರುವ ಪುನೀತ್ ಅವರ ಭಾವಚಿತ್ರಕ್ಕೆ ಅಶ್ವಿನಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
2ನೇ ಸ್ಕ್ರೀನ್‌ಗೆ ಅಶ್ವಿನಿ ಅವರು ಪ್ರವೇಶಿಸುತ್ತಿದ್ದಂತೆ, ಅಲ್ಲಿ ಕುಳಿತ್ತಿದ್ದ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಅಪ್ಪುವಿಗೆ ಜೈಕಾರ ಹಾಕಿದರು. ಅಶ್ವಿನಿ ಅವರು ಅವರತ್ತ ಕೈ ಬೀಸಿದರು. ಆಮೇಲೆ ರಾಜಕುಮಾರ’ ಚಿತ್ರ ತೆರೆಯ ಮೇಲೆ ಮೂಡಿ ಬರಲು ಶುರುವಾಯಿತು. ಒಂದೆರಡು ಕ್ಷಣವಿದ್ದು ಬಳಿಕ ಗಣ್ಯರ ಜತೆಗೂಡಿ ಚಿತ್ರ ಮಂದಿರದಿಂದ ಹೊರಗೆ ನಿರ್ಗಮಿಸಿದರು.
ಉದ್ಘಾಟನಾ ಪ್ರದರ್ಶನವಾಗಿ ರಾಜಕುಮಾರ: ಬುಧವಾರ ಬೆಳ್ಳಿಗ್ಗೆ 10 ಗಂಟೆಗೆ ಬೆಟ್ಟದ ಹೂವು’ ಪ್ರದರ್ಶನದ ಮೂಲಕ ಅಪ್ಪು ಚಿತ್ರ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಯೋಜನೆ ಮಾಡಲಾಗಿತ್ತು. ಆದರೆ ಸಮಯ ಬದಲಾವಣೆ ಯಾಗಿ ಉದ್ಘಾಟನಾ ಕಾರ್ಯಕ್ರಮವನ್ನು ಮಧ್ಯಾಹ್ನ 12.30ಕ್ಕೆ ನಿಗದಿಗೊಳಿಸಲಾಯಿತು.
ಇದರಿಂದಾಗಿ ಉದ್ಘಾಟನಾ ಸಮಯದಲ್ಲಿ ರಾಜಕುಮಾರ’ ಚಲನಚಿತ್ರವು ಪ್ರದರ್ಶನ ವಾಯಿತು. ನಿಗದಿಯಾದಂತೆ ಬೆಟ್ಟದ ಹೂವು 10ಕ್ಕೆ ಪ್ರದರ್ಶನಗೊಂಡು, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಲ್ .ನಾಗೇಂದ್ರ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪ ಯೋಗೇಶ್, ಚಲನಚಿತ್ರೋತ್ಸವ ಉಪ ಸಮಿತಿ ಅಧ್ಯಕ್ಷ ಹೊಸಳ್ಳಿ ವೆಂಕಟೇಶ್, ಉಪಾಧ್ಯಕ್ಷರಾದ ಸಿ.ಎಂ.ಮಹದೇವಯ್ಯ, ಪ್ರಕಾಶ್ ಪಾಟೀಲ, ಕಿರಣ್ ಜಯರಾಮೇ ಗೌಡ, ಸದಸ್ಯರಾದ ಉದಿತ್‌ಗೌಡ, ಉಪ ವಿಶೇಷಾಧಿಕಾರಿ ಆರ್. ಶೇಷ, ಕಾರ್ಯದರ್ಶಿ ಟಿ.ಕೆ.ಹರೀಶ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.