ಕಳೆದ ಮೂರು ದಿನಗಳಿಂದ ನನ್ನನ್ನು ಖಳನಾಯಕನ್ನಾಗಿ ಬಿಂಬಿಸುತ್ತಿದ್ದಾರೆ : ಸಿ. ಪಿ ಯೋಗೇಶ್ವರ್
Team Udayavani, Jun 1, 2021, 7:45 PM IST
ಮೈಸೂರು : ಸಚಿವ ಸಿ ಪಿ ಯೋಗೇಶ್ವರ್ ಇಂದು(ಮಂಗಳವಾರ, ಜೂನ್ 1) ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಸುತ್ತೂರು ಮಠಕ್ಕೆ ದಿಢೀರ್ ಬೇಟಿ ನೀಡಿದ್ದಾರೆ. ಎಸ್ಕಾರ್ಟ್ ಬಿಟ್ಟು ಖಾಸಗಿ ವಾಹನದಲ್ಲಿ ಮಠಕ್ಕೆ ಆಗಮಿಸಿದ ಸಚಿವ ಯೋಗೇಶ್ವರ್, ಸುತ್ತೂರು ಮಠದ ಶ್ರೀ ಗಳೊಂದಿಗೆ ಕೆಲ ಕಾಲ ಮಾತನಾಡಿದ್ದಾರೆ.
ಶ್ರೀಗಳ ಭೇಟಿ ನಂತರ ಮಾಧ್ಯದಮರಿಗೆ ಪ್ರತಿಕ್ರಿಯಿಸಿದ ಯೋಗೇಶ್ವರ್, ಕಳೆದ ಮೂರು ದಿನಗಳಿಂದ ಮಾಧ್ಯಮಗಳು ಹಾಗೂ ನನ್ನ ಸ್ನೇಹಿತರು ನನ್ನನ್ನು ಖಳನಾಯಕನ್ನಾಗಿ ಬಿಂಬಿಸುತ್ತಿದ್ದಾರೆ. ಇದು ಮನಸ್ಸಿಗೆ ಬಹಳ ನೋವಾಗಿದೆ. ಸ್ವಾಮೀಜಿಗಳ ಮುಂದೆ ಆ ನೋವಾನ್ನು ಹೇಳಿಕೊಂಡರೆ ಹಗುರವಾಗುತ್ತದೆ ಎಂದು ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು 29271 ಜನ ಗುಣಮುಖ; 14304 ಹೊಸ ಪ್ರಕರಣ ಪತ್ತೆ
ಸಿನಿಮಾದಲ್ಲೂ ನಾಯಕ, ರಾಜಕೀಯದಲ್ಲೂ ನಾನು ನಾಯಕನಾಗಿದ್ದೇನೆ. ಆದರೇ, ನನ್ನನ್ನು ಖಳನಾಯನನ್ನಾಗಿ ಮಾಡಲು ಯತ್ನ ನಡೆದಿದೆ. ಇದರ ಹಿಂದೆ ಯಾರದ್ದೋ ಪ್ರಚೋದನೆ ಇರಬಹುದು. ವೈಯುಕ್ತಿಕವಾಗಿ ನಾನು ನೀಡಿದ ಒಂದು ಹೇಳಿಕೆಯಿಂದ ಇಷ್ಟೆಲ್ಲಾ ಚರ್ಚೆ ನಡೆದಿದೆ. ಇದರಿಂದ ನಾನು ಬಹಳ ನೊಂದಿದ್ದೇನೆ ಎಂದು ನೋವನ್ನು ವ್ಯಕ್ತ ಪಡಿಸಿಕೊಂಡಿದ್ದಾರೆ.
ಇನ್ನು, ಎಸ್ಕಾರ್ಟ್ ಇಲ್ಲದೇ ಬಂದಿದ್ದೀರಿ ಯಾಕೆ ಎಂದು ಮವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಕಾರ್ಟ್ ಇಲ್ಲದೆ ಮಠಕ್ಕೆ ಬಂದಿರೋದು ವಿಶೇಷವಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ನಾನು ಎಸ್ಕಾರ್ಟ್ ಬಳಸುತ್ತಿಲ್ಲ. ಎಸ್ಕಾರ್ಟ್ ಇಲ್ಲದೆ ಓಡಾಡಿದರು ನಾನು ಸಚಿವನೆ. ಪೊಲೀಸರಿಗೆ ತೊಂದರೆಯಾಗಬಾರದು ಎಂಬುದು ನನ್ನ ಉದ್ದೇಶ ಎಂದು ಹೇಳಿದ್ದಾರೆ.
ಸಚಿವ ಸಿ ಪಿ ಯೋಗೆಶ್ವರ್ ಭೇಟಿಗೂ ಮುಂಚೆಯಷ್ಟೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯಿಂದಲೂ ಸುತ್ತೂರು ಶ್ರೀಗಳ ಭೇಟಿ ಮಾಡಿದ್ದರು.
ಇದನ್ನೂ ಓದಿ : ಸುಧಾಕರಣ್ಣಾ.. ನೀನು ಮೊದಲು ಔಷಧಿ ಕೊಡಿಸುವ ಕೆಲಸ ಮಾಡು: ಡಿ.ಕೆ. ಶಿವಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.