ಅರಣ್ಯ ಭವನದಲ್ಲಿ ಭೀಮಾರ್ಜುನರ ಮೌನ ಸಂಭಾಷಣೆ


Team Udayavani, Aug 9, 2022, 3:24 PM IST

ಅರಣ್ಯ ಭವನದಲ್ಲಿ ಭೀಮಾರ್ಜುನರ ಮೌನ ಸಂಭಾಷಣೆ

ಮೈಸೂರು: ದೂರದ ಯಾವುದೋ ಶಿಬಿರದಿಂದ ಹೊಸದಾಗಿ ಬಂದ ಎಳೆ ವಯಸ್ಸಿನ ಭೀಮನನ್ನು ಕಂಡ ಅರ್ಜುನ ಸೋಂಡಿಲಿನಿಂದ ತನ್ನತ್ತ ಬರಸೆಳೆದು ಮುದ್ದಿಸುತ್ತ ತನ್ನದೇ ಹಾವಾಭಾವದ ಮೂಲಕ ಕುಶಲೋಪರಿ ವಿಚಾರಿಸಿದ ಶೈಲಿ ನೋಡುಗರನ್ನು ಚಕಿತಗೊಳಿಸಿತು.

2022ರ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಭಾನುವಾರ ಮೈಸೂರಿಗೆ ಆಗಮಿಸಿ ನಗರದ ಅರಣ್ಯ ಭವನದಲ್ಲಿ ಬೀಡುಬಿಟ್ಟಿರುವ ಗಜಪಡೆ ಸೋಮವಾರ ಮಾವುತ, ಕಾವಾಡಿಗರ ಜೊತೆಗೆ ವಿಶ್ರಾಂತಿಯಲ್ಲಿದ್ದವು. ಈ ಸಂದರ್ಭ ಮತ್ತಿಗೋಡು ಆನೆ ಶಿಬಿರದಿಂದ ಆಗಮಿಸಿದ್ದ ಅತಿ ಚಿಕ್ಕ ವಯಸ್ಸಿನ ಭೀಮ(22) ಆನೆಯನ್ನು ಕಂಡ ಬಳ್ಳೆ ಆನೆ ಶಿಬಿರದ ಅರ್ಜುನ (63) ಭೀಮನ ಬಳಿ ತೆರಳಿ ತನ್ನ ಸೊಂಡಿಲಿನಿಂದ ಸ್ಪರ್ಶಿಸಿ, ಅಲ್ಲಿಯೇ ಪಕ್ಕದಲ್ಲಿದ್ದ ಆಲದ ಸೊಪ್ಪನ್ನು ತಿನ್ನಿಸುವ ದೃಶ್ಯ ನೋಡುಗರನ್ನು ಆಕರ್ಷಿಸಿತು.

ಇತ್ತ ಭೀಮನೂ ತನ್ನ ಸೋಂಡಿಲಿನ ಮೂಲಕ ಅರ್ಜುನನ ಸೊಂಡಿಲನ್ನು ಬಂಧಿಯಾಗಿಸಿ ಮುತ್ತಿಕ್ಕುವ ಮೂಲಕ ಹಿರಿಯಜ್ಜನ ಪ್ರೀತಿಗೆ ಪಾತ್ರನಾದ. ಹೀಗೆ ಆರೇಳು ನಿಮಿಷಗಳ ಕಾಲ ಎರಡೂ ಆನೆಗಳು ತಮ್ಮದೇ ಹಾವಾಭಾವದ ಮೂಲಕ ಮೌನ ಸಂಭಾಷಣೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.

ರಿಲ್ಯಾಕ್ಸ್‌ ಮೋಡ್‌ನ‌ಲ್ಲಿ ಗಜಪಡೆ: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆ ಭಾನುವಾರ ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ್ದು, ಅರಣ್ಯ ಭವನದಲ್ಲಿ ಮಾವುತ, ಕಾವಾಡಿ ಗಳೊಂದಿಗೆ ಬೀಡುಬಿಟ್ಟಿವೆ. ಮೊದಲ ತಂಡದಲ್ಲಿ ಅಂಬಾರಿ ಆನೆ ಸೇರಿದಂತೆ ಒಂಭತ್ತು ಆನೆಗಳು ಆಗಮಿಸಿದ್ದು, ಮಾವುತ, ಕಾವಾಡಿ ಹಾಗೂ ಇಲಾಖೆ ಅಧಿಕಾರಿಗಳ ವಿಶೇಷ ಆರೈಕೆಯಲ್ಲಿ ವಿಶ್ರಾಂತಿಗೆ ಜಾರಿದ್ದವು. ಇತ್ತ ಕೂಬಿಂಗ್‌ ಸ್ಪೆಷಲಿಸ್ಟ್‌ ಎಂದೇ ಹೆಸರು ಮಾಡಿರುವ ಅಂಬಾರಿ ಆನೆ ಅಭಿಮನ್ಯು ಲಕ್ಷ್ಮೀ ಮತ್ತು ಚೈತ್ರ ಹೆಸರಿನ ಹಣ್ಣಾನೆಗಳೊಂದಿಗೆ ಪ್ರತ್ಯೇಕ ಸ್ಥಳದಲ್ಲಿ ವಿಶ್ರಾಂತಿಗೆ ಜಾರಿದ್ದ.

ಕುತೂಹಲ ತಣಿಸಿಕೊಂಡ ಜನತೆ: ಆನೆ, ಅವುಗಳ ಗಾತ್ರ ಮತ್ತು ವರ್ತನೆಯ ಬಗ್ಗೆ ಕುತೂಹಲ ಇರಿಸಿಕೊಂಡಿದ್ದ ನಗರದ ವಿವಿಧ ಬಡಾವಣೆಯ ಜನರು, ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಅರಣ್ಯ ಭವನಕ್ಕೆ ತೆರಳಿ ದಸರಾ ಆನೆಗಳನ್ನು ವೀಕ್ಷಿಸಿ ತಮ್ಮ ಕುತೂಹಲ ತಣಿಸಿಕೊಂಡರು. ಹಾಗೆಯೇ ತಮ್ಮ ಮೊಬೈಲ್‌ಗ‌ಳಲ್ಲಿ ಆನೆಗಳ ಚಿತ್ರ ಸೆರೆ ಹಿಡಿಯುವ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ನಾಳೆ ಅರಮನೆ ಪ್ರವೇಶ : ನಾಳೆ (ಆ.10) ಗಜಪಡೆ ಅರಮನೆ ಪ್ರವೇಶಿಸಲಿದ್ದು, ಬೆಳಗ್ಗೆ 7ಗಂಟೆಗೆ ಎಲ್ಲಾ ಆನೆಗಳು ಅರಣ್ಯ ಭ ವನದಿಂದ ಹೊರಟು ಕಾಲ್ನಡಿಗೆ ಮೂಲಕ ಅರಮನೆ ಜಯಮಾರ್ತಾಂಡ ದ್ವಾರದ ಬಳಿ ತೆರಲಿವೆ. ಬಳಿಕ 9.20ರಿಂದ 10ಗಂಟೆಯ ಒಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅರಮನೆ ಆವರಣಕ್ಕೆ ಸ್ವಾಗತಿಸಲಾಗುತ್ತದೆ. ನಂತರ ನಿತ್ಯ ಆನೆಗಳಿಗೆ ಅರಮನೆಯಿಂದ ಬನ್ನಿಮಂಟಪದ ವರೆಗೆ ಕಾಲ್ನಡಿಗೆ ಮೂಲಕ ತಾಲೀಮು, ಒಣ ತಾಲೀಮು ಹಾಗೂ ಭಾರ ಹೊರುವ ತಾಲೀಮು ನಡೆಸಲಾಗುತ್ತದೆ.

ಟಾಪ್ ನ್ಯೂಸ್

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Priyank-Kharghe

ನಾವು ಬೀದಿಗಿಳಿದರೆ ಬಿಜೆಪಿಯವರು ಮನೆ ಖಾಲಿ ಮಾಡಬೇಕು: ಸಚಿವ ಪ್ರಿಯಾಂಕ್‌

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

yoga-nara

Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ

Untitled-1

Mysuru: ಕೆಆರ್‌ಎಸ್‌ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kejiriwal

Delhi Election: ಆಪ್‌ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್‌ ಮೈತ್ರಿ: ಕೇಜ್ರಿವಾಲ್‌

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.