ಕೋವಿಡ್ ಸಾವು ಹೆಚ್ಚಳ: ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ
Team Udayavani, Apr 13, 2021, 4:17 PM IST
ಮೈಸೂರು: ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸಾ ಶಿಷ್ಟಾಚಾರ ಪಾಲಿಸದೇ, ಸೋಂಕಿತರು ಮೃತಪಟ್ಟರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದರು.
ಕೋವಿಡ್ ಸಾವಿನ ಸಂಖ್ಯೆ ಹೆಚ್ಚುತ್ತಿ ರುವ ಹಿನ್ನೆಲೆಯಲ್ಲಿ ಸೋಮವಾರ ಎಲ್ಲ ಖಾಸಗಿ ಆಸ್ಪತ್ರೆಗಳ ಸಭೆ ನಡೆಸಿ ಮಾತ ನಾಡಿದ ಅವರು, ಕಳೆದ ಫೆಬ್ರವರಿಯಲ್ಲಿ4 ಸಾವು, ಮಾರ್ಚ್‌ನಲ್ಲಿ 25 ಸಾವುಸಂಭವಿಸಿದೆ. ಏಪ್ರಿಲ್‌ನಲ್ಲಿ ಈವರೆಗೆ 30 ಸಾವು ಸಂಭವಿಸಿದ್ದು, ಆತಂಕ ಮೂಡಿಸಿದೆ. ಒಂದೇ ದಿನಕ್ಕೆ ಸುಮಾರು 10ಸಾವು ಸಂಭವಿಸಿದೆ. ಸುಯೋಗ್ ಆಸ್ಪತ್ರೆ, ಭಾನವಿ ಹಾಗೂ ಡಿ.ಆರ್.ಎಂ. ಮುಂತಾದ ಖಾಸಗಿ ಆಸ್ಪತ್ರೆಗಳು ಗಂತಿಯಲ್ಲಿದ್ದ ರೋಗಿಗಳನ್ನು ಆ ಸ್ಥಿತಿಯಲ್ಲಿ ಬೇರೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈಸ್ಥಳಾಂತರದಿಂದ ಹೆಚ್ಚಿನ ಸಾವು ಸಂಭವಿಸಿದೆ ಎಂದು ಡೆತ್ ಆಡಿಟ್‌ನಲ್ಲಿ ಗೊತ್ತಾಗಿದೆ ಎಂದು ತಿಳಿಸಿದರು.
ಕ್ರಿಟಿಕಲ್ ಸಂದರ್ಭದ ರೋಗಿಗಳಿಗೆಚಿಕಿತ್ಸೆ ನೀಡುವ ಸೌಲಭ್ಯ ಇಲ್ಲದಿದ್ದರೆ ದಯ ಮಾಡಿ ರೋಗಿಗಳನ್ನು ಸೇರಿಸಿಕೊಳ್ಳಬೇಡಿ. ಆದಾಗ್ಯೂ ಸೇರಿಸಿಕೊಂಡಿದ್ದರೆ ಪರಿಸ್ಥಿತಿ ಗಂಭೀರವಾಗುವ ಮುನ್ನವೇಇತರೆ ಖಾಸಗಿ ಆಸ್ಪತ್ರೆಗೆ ಅಥವಾ ಕೆ.ಆರ್. ಆಸ್ಪತ್ರೆಗೆ ಶಿಫಾರಸು ಮಾಡಿ. ಕೊನೆಯಹಂತದಲ್ಲಿ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಬೇಡಿ ಎಂದು ಸೂಚಿಸಿದರು.
ರೋಗಿಯನ್ನು ಬೇರೆ ಆಸ್ಪತ್ರೆಗೆ ಕಳು ಹಿಸುವಾಗ ಹಿಂದಿನ ಚಿಕಿತ್ಸಾ ವಿಧಾನ, ಪರೀಕ್ಷಾ ಇತಿಹಾಸ ಹಾಗೂ ಸೂಕ್ತ ಶಿಫಾರಸುನೊಂದಿಗೆ ಕಳುಹಿಸಬೇಕು. ಬೇರೆಆಸ್ಪತ್ರೆಯಿಂದ ಬಂದ ಗಂಭೀರ ಸ್ಥಿತಿಯರೋಗಿಯನ್ನು ಸೇರಿಸಿಕೊಂಡ ಆಸ್ಪತ್ರೆಗೆ ಯಾವ ಚಿಕಿತ್ಸೆ ನೀಡಬೇಕು ಎಂದು ನಿರ್ಧಾರ ಕೈಗೊಳ್ಳಲು ಸಮಯ ಬೇಕಾಗು ತ್ತದೆ. ಆ ವೇಳೆಗೆ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಈ ರೀತಿ ಆಗಬಾರದು ಎಂದರು.
ಸಾವು ಸಂಭವಿಸಿದರೆ ಅದೇ ದಿನವೇ ಮಾಹಿತಿ ನೀಡಬೇಕು. ಸಾವುಸಂಭವಿಸಿದ 48 ಗಂಟೆಯ ಒಳಗೆ ಡೆತ್‌ಆಡಿಟ್ ಆಗಬೇಕು. ಆಗ ಮಾತ್ರ ವಾಸ್ತವ ಅಂಶ ಗಳ ಬಗ್ಗೆ ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಸಾವು ಕೋವಿಡ್ ನಿಂದಾಗಿರಬಹುದು ಅಥವಾ ಕೊಮಾರ್ಬಿಡಿಟೀಸ್‌ನಿಂದ ಆಗಿರ ಬಹುದು. ಸರಿಯಾದ ಮಾಹಿತಿ ನೀಡಿದರೆ ಡೆತ್ ಆಡಿಟ್‌ನಲ್ಲಿ ಪರಿಶೀಲಿಸಲು ಸಾಧ್ಯವಾಗುತ್ತದೆ. ರೋಗಿಯನ್ನು ಸೇರಿಸಿ ಕೊಳ್ಳುವಾಗ ಕೋವಿಡ್ ಲಸಿಕೆ ಪಡೆದಿದ್ದರೆ ಎಂಬುದನ್ನು ಸಹ ದಾಖಲಿಸಿಕೊಳ್ಳಬೇಕು ಎಂದು ಹೇಳಿದರು. ರೋಗಿಯು ಗಂಭೀರ ಸ್ಥಿತಿಯಲ್ಲಿರುವ ಪರಿಸ್ಥಿತಿಯಲ್ಲಿ ಸುಯೋಗ್ ಆಸ್ಪತ್ರೆ ಸರಿ ಯಾದ ರೆಫರಲ್ ಇಲ್ಲದೆ ಬೇರೆ ಆಸ್ಪತ್ರೆಗೆ ಕಳುಹಿಸಿರುವುದನ್ನು ಗಮನಿಸಿ ದ್ದೇವೆ. ಈಸಭೆಗೂ ಸಹ ಸುಯೋಗ್ ಆಸ್ಪತ್ರೆ ಪ್ರತಿ ನಿಧಿ ಗಳು ಬಂದಿಲ್ಲ. ಈ ನಿರ್ಲಕ್ಷ್ಯವನ್ನುಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಡಾ.ಉದಯ್ ಕುಮಾರ್, ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಅಧಿಕಾರಿಡಾ. ಟಿ. ಅಮರನಾಥ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಪ್ರಸಾದ್, ಜಿಲ್ಲಾಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸಿರಾಜ್ ಅಹ್ಮದ್, ಜಿಲ್ಲಾ ಕುಟುಂಬಕಲ್ಯಾ ಣಾಧಿಕಾರಿ ಡಾ. ಪಿ. ರವಿ, ಕೋವಿಡ್ ಲಸಿಕೆ ನೋಡಲ್ ಅಧಿಕಾರಿ ಡಾ. ಎಲ್.ರವಿ, ಜಿಲ್ಲಾ ಸರ್ಜನ್ ಡಾ. ರಾಜೇಶ್ವರಿ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.