ಕೆಲಸ ಮಾಡುತ್ತಿದ್ದ ಅಂಗಡಿಯಿಂದಲೇ ಚಿನ್ನ ಕದ್ದು ಅಡವಿಟ್ಟ ಖದೀಮ ಈಗ ಪೊಲೀಸರ ಅತಿಥಿ
Team Udayavani, Aug 6, 2021, 11:38 AM IST
ಹುಣಸೂರು: ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದ ಯುವಕನೊರ್ವ ಕೆಲಸ ಮಾಡತ್ತಿದ್ದ ಚಿನ್ನಾಭರಣದ ಅಂಗಡಿಯಲ್ಲೇ ಚಿನ್ನಾಭರಣ ಕದ್ದು,ಅಡವಿಟ್ಟಿದ್ದ ಘಟನೆಯನ್ನು ಹುಣಸೂರು ನಗರ ಠಾಣೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಣಸೂರು ನಗರದ ಜೆಎಲ್ ಬಿ ರಸ್ತೆಯ ಪೃಥ್ವಿ ಜ್ಯುವಲರ್‍ಸ್ ಅಂಗಡಿಯಲ್ಲಿ ನಡೆದಿದ್ದು, ತಾಲೂಕಿನ ರತ್ನಪುರಿಯ ಶಿವರಾಮ್ ಎಂಬಾತನೇ ಅನ್ನ ಹಾಕಿದ ಮನೆಗೆ ಕನ್ನ ಹಾಕಿ ಬಂಧನಕ್ಕೊಳಗಾದಾತ. ಈತನಿಂದ ಸುಮಾರು 25 ಲಕ್ಷರೂ ಬೆಲೆ ಬಾಳುವ 503 ಗ್ರಾಂ.ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಮುಂದಿನ ನಾಲ್ಕು ತಿಂಗಳಲ್ಲಿ 136 ಕೋಟಿ ಡೋಸ್ ಭಾರತದಲ್ಲಿ ಲಭ್ಯ : ಕೇಂದ್ರ ಸರ್ಕಾರ
ಹುಣಸೂರು ತಾಲೂಕಿನ ರತ್ನಪುರಿ ನಿವಾಸಿ ಶಿವರಾಮ್ ಕಳೆದ 9 ವರ್ಷಗಳಿಂದ ನಗರದ ಜೆಎಲ್‌ಬಿ ರಸ್ತೆಯ ಪೃಥ್ವಿ ಜ್ಯುವೆಲರ್‍ಸ್‌ನಲ್ಲಿ ಕೆಲಸ ಮಾಡುತ್ತಿದ್ದ, ಅಂಗಡಿಗೆ ಕಾರುಗಳಲ್ಲಿ ಬರುತ್ತಿದ್ದ ಗಿರಾಕಿಗಳು, ತನ್ನ ಸ್ನೇಹಿತರು ಕಾರುಗಳಲ್ಲಿ ಓಡಾಡುತ್ತಿದ್ದುದ್ದನ್ನು ಕಂಡ ಶಿವರಾಮ್ ತಾನು ಸಹ ಕಾರು ತೆಗೆದುಕೊಳ್ಳಲು ತೀರ್ಮಾನಿಸಿ, ಕೆಲಸ ಮಾಡುತ್ತಿದ್ದ ಚಿನ್ನಾಭರಣದ ಅಂಗಡಿಯಲ್ಲಿ 2019 ರಿಂದ ಆಗಾಗ್ಗೆ ಒಂದೊಂದೇ ಚಿನ್ನಾಭರಣಗಳನ್ನು ಕದಿಯಲಾರಂಭಿಸಿದ. ಕದ್ದ ಚಿನ್ನವನ್ನು ನಗರದ ಗಿರವಿ ಅಂಗಡಿಗಳಲ್ಲೇ ಗಿರವಿ ಇಡುತ್ತಿದ್ದ, ಇತ್ತೀಚೆಗೆ ಶಿವರಾಮ್‌ನನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿತ್ತು, ಈ ವೇಳೆ ಚಿನ್ನಾಭರಣ ಕಡಿಮೆಯಾಗಿರುವುದು ಪತ್ತೆಯಾಗಿತ್ತು. ನಗರ ಠಾಣೆಯಲ್ಲಿ ವ್ಯವಸ್ಥಾಪಕ ಸಂತೋಷ್ ರಾಜೇ ಅರಸ್ ಅ.2 ರಂದು ದೂರು ನೀಡಿದ್ದರು.
ಎಸ್.ಪಿ. ಆರ್.ಚೇತನ್, ಅಡಿಷನಲ್ ಎಸ್.ಪಿ. ಶಿವಕುಮಾರ್, ಡಿವೈಎಸ್ ಪಿ ರವಿಪ್ರಸಾದ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಸಿ.ವಿ.ರವಿ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ಚಿನ್ನಾಭರಣ ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸ್.ಐ.ಗಳಾದ ಲತೇಶ್ ಕುಮಾರ್, ಪಂಚಾಕ್ಷರಿ ಸ್ವಾಮಿ ಸಿಬ್ಬಂದಿಗಳಾದ ಪ್ರಭಾಕರ್, ಶ್ರೀನಿವಾಸ ಪ್ರಸಾದ್, ಶೇಖರ್, ಕುಮಾರ್, ಜಗದೀಶ, ಇರ್ಫಾನ್ ಭಾಗವಹಿಸಿದ್ದರು.
ಇದನ್ನೂ ಓದಿ : ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜೀನಾಮೆಗೆ ರೆವಲ್ಯೂಶನ್ ಗೋವನ್ಸ್ ಒತ್ತಾಯ..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.