ಕರಣಕುಪ್ಪೆ ಗ್ರಾಮ ಪಂಚಾಯತ್ ಗೆ ಶಾಸಕ ಎಚ್. ಪಿ. ಮಂಜುನಾಥ್ ಪ್ರಶಂಸೆ
ಸರ್ವಾಂಗೀಣ ಪ್ರಗತಿಗಾಗಿ ರಾಷ್ಟ್ರಮಟ್ಟದ ಪ್ರಶಸ್ತಿಗಳಿಸಿ ಎಲ್ಲ ಪಂಚಾಯ್ತಿಗಳಿಗೆ ಮಾದರಿಯಾಗಿ ಪ್ರತಿಬಿಂಬಿಸುತ್ತಿರುವುದು ಹೆಮ್ಮೆಯ ಸಂಗತಿ : ಶಾಸಕ ಎಚ್.ಪಿ.ಮಂಜುನಾಥ್
Team Udayavani, Jul 13, 2021, 7:10 PM IST
ಹುಣಸೂರು : ತಾಲೂಕಿನ ಕರಣಕುಪ್ಪೆ ಗ್ರಾಮ ಪಂಚಾಯ್ತಿಯು ಜಲ ಮರು ಹೂರಣ, ಸ್ವಚ್ಚತೆ, ಶಿಕ್ಷಣ ಪ್ರಗತಿ ಸೇರಿದಂತೆ ಸರ್ವಾಂಗೀಣ ಪ್ರಗತಿಗಾಗಿ ರಾಷ್ಟ್ರಮಟ್ಟದ ಪ್ರಶಸ್ತಿಗಳಿಸಿ ಎಲ್ಲ ಪಂಚಾಯ್ತಿಗಳಿಗೆ ಮಾದರಿಯಾಗಿ ಪ್ರತಿಬಿಂಬಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಎಚ್.ಪಿ.ಮಂಜುನಾಥ್ ಪ್ರಶಂಸಿಸಿದರು.
ಗ್ರಾ.ಪಂ.ವತಿಯಿಂದ ಕಣಗಾಲು ಗ್ರಾಮದಲ್ಲಿ ಆಯೋಜಿಸಿದ್ದ ಸುಭದ್ರ ಶಾಲಾ ಯೋಜನೆ, ಹೈಟೆಕ್ ಸ್ಮಶಾನ ಅಭಿವೃದ್ದಿ ಕಾಮಗಾರಿಗೆ, ಮಾಸ್ಕ್ ವಿತರಣೆಗೆ ಚಾಲನೆ ನೀಡಿ, ಐಟಿಸಿ, ಔಟ್ ರಿಚ್ ಸಹಯೋಗದ ಜೀವ ವೈವಿದ್ಯ ವನ ನಿರ್ಮಾಣ ಕಾರ್ಯಕ್ರಮದಡಿ ಎಂ.ಎಲ್.ಸಿ.ಯಾದ ಅಡಗೂರುಎಚ್.ವಿಶ್ವನಾಥರೊಂದಿಗೆ ಸಸಿನೆಟ್ಟು, ಕೆರೆ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಿ ನಂತರ ಶಾಲಾ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ತಾಲೂಕಿನ 41 ಗ್ರಾ.ಪಂ.ಗಳ ಪೈಕಿ ಕರಣಕುಪ್ಪೆ ಪಂಚಾಯ್ತಿಯು ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಎಲ್ಲ ವಿಭಾಗಗಳಲ್ಲೂ ಅತ್ಯುತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಒಳ್ಳೆ ಹೆಸರು ತಂದುಕೊಟ್ಟಿದೆ.
ಇದನ್ನೂ ಓದಿ : ಸುರತ್ಕಲ್ : ಮನೆಗೆ ನುಗ್ಗಿದ ಕಳ್ಳರು, 14 ಲಕ್ಷ ರೂ. ಮೌಲ್ಯದ ಚಿನ್ನ ಕದ್ದು ಪರಾರಿ
ಪಂಚಾಯ್ತಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಕೆರೆಗಳು, ಶಾಲೆ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ದಿಗೊಳಿಸುತ್ತಿದ್ದು. ಇತರೆ ಗ್ರಾ.ಪಂ.ಗಳು ಈ ಮಾದರಿಯನ್ನು ಅನುಸರಿಸಿದಲ್ಲಿ ಗ್ರಾಮಾಭಿವೃದ್ದಿಯಾಗಲು ನೆರವಾಗಲಿದೆ. ಮುಖ್ಯವಾಗಿ ಜಲ ಮರು ಹೂರಣ ಕಾರ್ಯಕ್ರಮಕ್ಕೆ ಮತ್ತಷ್ಟು ಆದ್ಯತೆ ನೀಡಬೇಕೆಂದು ಆಶಿಸಿ. ಐಟಿಸಿ, ಔಟ್ ರೀಚ್ ಸಂಸ್ಥೆಯ ಗ್ರಾಮೀಣಾಭಿವೃದ್ದಿ ಕಾರ್ಯವನ್ನು ಶ್ಲಾಘಿಸಿದರು.
ಎಂ.ಎಲ್.ಸಿ.ವಿಶ್ವನಾಥ್ ಮಾತನಾಡಿ ಈ ಪಂಚಾಯ್ತಿ ಶಿಕ್ಷಣ, ಅಂತರ್ಜಲ ವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಶ್ಲಾಘನೀಯ. ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಪ್ರತಿಯೊಬ್ಬರು ಶಿಕ್ಷಣ ಪಡೆಯುವುದು ಅತ್ಯವಶ್ಯ, ವಿದ್ಯೆಯ ಪ್ರಾಮುಖ್ಯತೆಯನ್ನರಿತು ತಾವು ಶಿಕ್ಷಣ ಮಂತ್ರಿಯಾಗಿದ್ದಾಗ ಶಾಲೆಗಳಿಗೆ ಶುದ್ದ ಕುಡಿಯುವ ನೀರು, ಬಿಸಿಯೂಟ, ಕಟ್ಟಡ, ಕಾಂಪೌಂಡ್, ಶೌಚಾಲಯ ನಿರ್ಮಾಣ ಹೀಗೆ ಹೊಸ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತಂದ ಪರಿಣಾಮ ಉತ್ತರ ಕರ್ನಾಟಕದಲ್ಲಿ 2000ರಲ್ಲಿ ಶೇ.30ರಷ್ಟಿದ್ದ ಅಕ್ಷರಸ್ಥರ ಸಂಖ್ಯೆ ಇಂದು ಶೇ.೮೦ಕ್ಕೇರಿದೆ ಎಂದರು.
ಸ್ತ್ರೀ ಶಕ್ತಿಯ ಮೌನಕ್ರಾಂತಿ: ಎಸ್.ಎಂ.ಕೃಷ್ಣರ ಅವಧಿಯಲ್ಲಿ ಹುಟ್ಟು ಹಾಕಿದ ಸ್ತ್ರೀಶಕ್ತಿ ಸಂಘಗಳು ದೊಡ್ಡ ಮೌನ ಕ್ರಾಂತಿಯನ್ನೇ ನಡೆಸಿವೆ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ರಷ್ಟು ಮೀಸಲಾತಿ ಪಡೆದಿದ್ದಾರೆ. ಎಲ್ಲ ರಂಗಗಳಲ್ಲೂ ಛಾಪು ಮೂಡಿಸಿದ್ದಾರೆ. ಗ್ರಾ.ಪಂ.ಗಳಲ್ಲಿ ಸಮರ್ಥ ಆಡಳಿತ ನೀಡುತ್ತಿದ್ದು, ವಿದ್ಯಾವಂತರಾದಲ್ಲಿ ಹಣಕಾಸು, ಆಡಳಿತ ನಿರ್ವಹಣೆ ಸಾದ್ಯವೆಂದರು.
ಪಿಡಿಓ ರಾಮಣ್ಣ ಮಾತನಾಡಿ ಗ್ರಾ.ಪಂ.ನಲ್ಲಿ ಈ ಬಾರಿ 15 ಕೆರೆಗಳು, ಸ್ಮಶಾನ ಅಭಿವೃದ್ದಿ ಕೈಗೊಳ್ಳಲಾಗುವುದು. 175 ಮಕ್ಕಳಿರುವ ಕಣಗಾಲು ಶಾಲೆಯನ್ನು ಸುಭದ್ರ ಶಾಲೆ ಕಾರ್ಯಕ್ರಮದಡಿ ಸರ್ವಾಂಗೀಣ ಅಭಿವೃದ್ದಿ ಪಡಿಸಲಾಗುವುದು. ದಾನಿಗಳ ನೆರವಿನಿಂದ ಮಾಸ್ಕ್ ಬ್ಯಾಂಕ್ ಮೂಲಕ 2 ಸಾವಿರ ಮಾಸ್ಕ್‌ಗಳನ್ನು ಸಂಗ್ರಹಿಸಲಾಗಿದ್ದು, ಪಂಚಾಯ್ತಿ ವ್ಯಾಪ್ತಿಯ ಎಲ್ಲರಿಗೂ ವಿತರಿಸಲಾಗುವುದೆಂದರು.
ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ ಅಧ್ಯಕ್ಷತೆವಹಿಸಿದ್ದರು, ಉಪಾಧ್ಯಕ್ಷ ಕುಮಾರಸ್ವಾಮಿ, ತಹಸೀಲ್ದಾರ್ ಬಸವರಾಜು, ಇಒ ಗಿರೀಶ್, ಬಿಇಓ ನಾಗರಾಜ್, ಸಿ.ಆರ್.ಪಿ.ಪ್ರಸನ್ನ, ಮುಖ್ಯಶಿಕ್ಷಕ ಕುಬೇರ, ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಸದಸ್ಯರಾದ ಪಾಪಣ್ಣ, ಹರೀಶ್‌ಮಾವುಡು, ಸುಂದರ್, ಮಾದೇಗೌಡ, ಮಂಜುಳ, ರಾಣಿ, ಸುಂದರಮ್ಮ, ಸೋಮಶೇಖರ್, ವೆಂಕಟಯ್ಯ, ಕುಮಾರಸ್ವಾಮಿ, ಮಾಜಿ ಸದಸ್ಯ ರವಿಕುಮಾರ್, ಇಂಜಿನಿಯರ್ ಪವಿತ್ರ, ಔಟ್ ರೀಚ್ ನ ಜಗದೀಶ್, ಮಹದೇವ್, ಡೇರಿ ಅಧ್ಯಕ್ಷ ಮಾದೇಗೌಡ, ಯಜಮಾನರಾದ ಕುಂಟನಾಯ್ಕ, ರಾಮೇಗೌಡ, ಮುಖಂಡರಾದ ರಾಮೇಗೌಡ, ರಾಘವೇಂದ್ರ, ಮಹೇಶ್ ಕುಮಾರ್ ಮತ್ತಿತರರಿದ್ದರು.
ಇದನ್ನೂ ಓದಿ : ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ ಸೆಪ್ಟೆಂಬರ್ ನಿಂದ ಉತ್ಪಾದನೆ ಪ್ರಾರಂಭ : RDIF, SII
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Mangaluru: ‘ಹೆಲಿಟೂರಿಸಂ’ಗೆ ಮುನ್ನುಡಿ ಬರೆದ ‘ಕುಡ್ಲ ಹೈ’ದರ್ಶನ
Mulki: ಉಗುಳಿದರೆ ದಂಡ; ಹಾಕುವವರು ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.