ಕಾಂಗ್ರೆಸ್ಸೇತರ ಮೊದಲ ಸಿಎಂ ರಾಮಕೃಷ್ಣ ಹೆಗಡೆ
Team Udayavani, Aug 30, 2021, 8:00 PM IST
ಮೈಸೂರು: ಮೈಸೂರು ಯುವ ಬಳಗ ವತಿಯಿಂದಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಜನ್ಮದಿನೋತ್ಸವದ ಅಂಗವಾಗಿ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸ್ವತಂತ್ರ ಹೋರಾಟಗಾರರ ಉದ್ಯಾನದಲ್ಲಿವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಅಧಿಕಾರ ವಿಕೇಂದ್ರೀಕರಣದವ್ಯವಸ್ಥೆಯ ಮೂಲಕ ನಾಡಿನ ಗ್ರಾಮೀಣ ಭಾಗದ ಜನರಹೊಸ ಚರಿತ್ರೆಯನ್ನು ಬರೆದವರು ರಾಮಕೃಷ್ಣ ಹೆಗಡೆ.
ರಾಜ್ಯದಮೌಲ್ಯಾಧಾರಿತರಾಜಕಾರಣಿಎಂದೆಜನಪ್ರಿಯತೆಗಳಿಸಿದ್ದ ಅವರು, ರಾಜ್ಯದಲ್ಲಿ ಮೊದಲ ಬಾರಿಗೆಕಾಂಗ್ರೆಸ್ಸೇತರ ಸರ್ಕಾರ ರಚಿಸಿದ್ದಲ್ಲದೇ ರಾಜ್ಯದ ಮೊದಲಕಾಂಗ್ರೆಸ್ಸೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆಪಾತ್ರರಾದವರು ಎಂದು ಸ್ಮರಿಸಿದರು.
1957ರಲ್ಲಿ ಮೊದಲ ಬಾರಿಗೆ ವಿಧಾನಸಭೆಪ್ರವೇಶಿಸಿದ ಇವರು, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ ಮೇಲೆ ಹೇರಿದತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ಜೈಲುಸೇರಿಹೊರಬಂದ ನಂತರ ಜನತಾ ಪಾರ್ಟಿ ಸೇರಿಕೊಂಡರು.
1985ರಲ್ಲಿನಡೆದ ರಾಜ್ಯವಿಧಾನಸಭೆಚುನಾವಣೆಯಲ್ಲಿಪೂರ್ಣ ಬಹುಮತ ದೊಂದಿಗೆ ಗೆಲುವು ಸಾಧಿಸುವಮೂಲಕ ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿಯಾದ ಇವರು ರಾಜ್ಯದಲ್ಲಿ ಪಂಚಾಯತ್ ರಾಜ್ ಕಾನೂನು,ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತವ್ಯವಸ್ಥೆಯನ್ನು ದೇಶದಲ್ಲಿಯೇ ಮೊದಲು ಬಾರಿಗೆಜಾರಿಗೆ ತಂದರು. ಜನಕಲ್ಯಾಣ ಯೋಜನೆಗಳನ್ನುಜಾರಿಗೆ ತರುವ ಮೂಲಕ ಜನರ ಮನದಾಳದಲ್ಲಿಹೆಗಡೆ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
ಈ ವೇಳೆ ಬಿಜೆಪಿ ಮುಖಂಡ ಕೇಬಲ್ ಮಹೇಶ್,ಮೈಸೂರು ಯುವ ಬಳಗದ ಅಧ್ಯಕ್ಷ ನವೀನ್, ವಿಕ್ರಂಅಯ್ಯಂಗಾರ್, ವಿಘ್ನೇಶ್ವರ ವಿ. ಭಟ್, ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ, ಹರೀಶ್, ಮಹಾದೇವಿ,ಜಾನಪ, ಸನಂತ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.