ಈಜು ಕೊಳದಿಂದ ಪಾರಂಪರಿಕತೆಗೆ ಧಕ್ಕೆಯಾಗಿಲ್ಲ: ರೋಹಿಣಿ ಸಿಂಧೂರಿ
Team Udayavani, Jun 7, 2021, 5:55 PM IST
ಮೈಸೂರು: ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿನಿರ್ಮಾಣವಾಗಿರುವ ಈಜುಕೊಳದಿಂದ ಪಾರಂಪರಿಕತೆಹಾಗೂ ಕಟ್ಟಡಕ್ಕೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ ಎಂದುನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ನಿರ್ಮಿತಿ ಕೇಂದ್ರದಲ್ಲಿ ಜಾಗ ಇಲ್ಲ: ಈಜುಕೊಳ ನಿರ್ಮಾಣದಸಂಬಂಧ ಉಂಟಾಗಿರುವ ವಿವಾದ ಬಗ್ಗೆ ಪ್ರಾದೇಶಿಕಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಈ ವಿಷಯ ತಿಳಿಸಿರುವಅವರು, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಈಜುಕೊಳನಿರ್ಮಿಸುವ ಪ್ರಸ್ತಾವನೆ ಇದೆ. ಈ ರೀತಿ ಕಾಮಗಾರಿ ಕೈಗೊಳ್ಳಲುಪ್ರತಿ ಜಿಲ್ಲೆಯಲ್ಲೂ ನಿರ್ಮಿತಿ ಕೇಂದ್ರಗಳಿವೆ. ಇವು ಸ್ಥಳೀಯವಾಗಿ ದೊರೆಯುವ ಸಂಪನ್ಮೂಲ ಬಳಸಿ, ಕಡಿಮೆವೆಚ್ಚದಲ್ಲಿ ಯಾವ ರೀತಿ ಕಾಮಗಾರಿ ನಡೆಸಬಹುದು ಎಂಬ ಬಗ್ಗೆ ಪೈಲಟ್ ಯೋಜನೆ ಮಾಡುತ್ತಿರುತ್ತಾರೆ.
ಅದೇ ರೀತಿ ಮೈಸೂರಿನ ನಿರ್ಮಿತಿಕೇಂದ್ರದವರು ಕಡಿಮೆ ವೆಚ್ಚದ ತಂತ್ರಜ್ಞಾನಬಳಕೆ ಬಗ್ಗೆ ಪೈಲಟ್ ಯೋಜನೆಯಾಗಿಕಳೆದ ಜನವರಿಯಲ್ಲಿ 28.72 ಲಕ್ಷ ರೂ.ವೆಚ್ಚದಲ್ಲಿ ಈಜುಕೊಳ ನಿರ್ಮಿಸಿದ್ದಾರೆ.ನಿರ್ಮಿತಿ ಕೇಂದ್ರದಲ್ಲಿ ಜಾಗ ಇಲ್ಲದಿದ್ದರಿಂದ ತಮ್ಮ ನಿವಾಸದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಆಧಾರ ರಹಿತ: ಜಿಲ್ಲಾಧಿಕಾರಿ ನಿವಾಸ 5.15 ಎಕರೆಪ್ರದೇಶದಲ್ಲಿದೆ. ಪಾರಂಪರಿಕ ಕಟ್ಟಡಕ್ಕೂ ಈಜುಕೊಳನಿರ್ಮಿಸಿರುವ ಸ್ಥಳ ದೂರದಲ್ಲಿವೆ. ಹೀಗಾಗಿ ಈ ಸಂಬಂಧಮಾಡಿರುವ ಆರೋಪ ಆಧಾರರಹಿತ ಎಂದಿದ್ದಾರೆ.ಇದೇ ರೀತಿ ಕಟ್ಟಡಗಳಲ್ಲಿ ಅಂದರೆ ನಗರ ಪಾಲಿಕೆಯಲ್ಲಿಚುನಾವಣಾ ಶಾಖೆ, ವಸಂತಮಹಲ್ ಒಳಾವರಣದಲ್ಲಿ,ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಚಾಮುಂಡಿಸಭಾಂಗಣ, ಜಲದರ್ಶಿನಿ ಆವರಣದಲ್ಲಿ ಪಿಡಬ್ಲ್ಯುಡಿಅತಿಥಿಗೃಹ ನಿರ್ಮಿಸಲಾಗಿದೆ. ಆದರೆ, ಎಲ್ಲಿಯೂಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗಿಲ್ಲ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.