![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Jun 7, 2021, 6:22 PM IST
ಮೈಸೂರು: ಡಿ.ದೇವರಾಜ ಅರಸರಕಾರ್ಯಕ್ರಮ ಗಳು ದನಿಯಿಲ್ಲದವರಿಗೆ ಎಂದಿಗೂಪ್ರೇರಕ ಶಕ್ತಿಯಾಗಿದ್ದವು ಎಂದು ಡಿ.ದೇವರಾಜಅರಸು ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯತಿಳಿಸಿದರು.
ಬೆಂಗಳೂರಿನ ದೇವರಾಜ ಅರಸುನಿಗಮದ ಕೇಂದ್ರ ಕಚೇರಿಯಲ್ಲಿ ನಡೆದ ಮಾಜಿಮುಖ್ಯಮಂತ್ರಿ ದಿವಂಗತ ದೇವರಾಜ ಅರಸು39ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾಮಾಜಿಕ ನ್ಯಾಯ: ದಿವಂಗತ ದೇವರಾಜಅರಸರು 70 – 80ರ ದಶಕದಲ್ಲಿ ಧ್ವನಿ ಇಲ್ಲದಸಮಾಜಗಳಿಗೆ ಕೊಟ್ಟಂತಹ ಕಾರ್ಯಕ್ರಮಗಳು,ಮೀಸಲಾತಿ ಸವಲತ್ತು ಶತಮಾನ ಕಳೆದರೂಹಿಂದುಳಿದ ಸಮಾಜಗಳು ಮರೆಯಲಾರದಂತಹಕಾರ್ಯಕ್ರಮಗಳಾಗಿವೆ.
ಅರಸರಹಾದಿಯಲ್ಲಿಯೇ ಇಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಗುತ್ತಿದ್ದು ಎಲ್ಲಾಸಮಾಜಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಲುಶ್ರಮಿಸುತ್ತಿದ್ದಾರೆಂದರು.ಅಜರಾಮರ: ಡಿ.ದೇವರಾಜ ಅರಸರು ತುಳಿತಕ್ಕೆಒಳಗಾದವರ ಹಾಗೂ “ಉಳುವವನೇ ಭೂಮಿಒಡೆಯ’ ಎಂಬ ಕ್ರಾಂತಿಕಾರಕ ಕಾರ್ಯಕ್ರಮಗಳನ್ನುಜಾರಿಗೆ ತರುವ ಮೂಲಕ ಶೋಷಣೆಗೆ ಒಳಗಾಗಿದ್ದಎಲ್ಲಾ ವರ್ಗಗಳ ಶ್ರಮಿಕರು, ಬಡವರ ಪರವಾಗಿಕಾರ್ಯಕ್ರಮ ರೂಪಿಸಿದರು.
ಕರ್ನಾಟಕದಇತಿಹಾಸ ಇರುವವರೆಗೂ ದೇವರಾಜ ಅರಸರುಅಜರಾಮರ ಎಂದರು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದು ಶ್ರಮಿಕ ಹಾಗೂಹಿಂದುಳಿದ ವರ್ಗಗಳ ಬಗೆಗಿನ ಕಾಳಜಿವರ್ಣನಾತೀತ. ಅದನ್ನು ಈ ಎರಡು ಕೋವಿಡ್‌ಅಲೆಗಳಲ್ಲಿ ರಾಜ್ಯದ ಜನ ಅರಿತಿದ್ದಾರೆಂದರು.
ದೇವರಾಜು ಅರಸರಿಂದ ಅನೇಕ ಕಾರ್ಯಕ್ರಮ:ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳಅಭಿವೃದ್ಧಿ ನಿಗಮದಿಂದ ಕಾಯಕ ಸಮುದಾಯಗಳು ಸೇರಿದಂತೆ ವಿವಿಧ ವರ್ಗಗಳಶ್ರಮಿಕರಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಕೊರೊನಾ ಸಂಕಷ್ಟದಿಂದ ಆದಾಯದ ಮೂಲ ಕಳೆದುಕೊಂಡಿರುವ ವಿವಿಧ ಸಮುದಾಯಗಳ ಕುಟುಂಬಗಳಿಗೆ ಸದ್ಯದಲ್ಲೇ ಕೆಲವು ಯೋಜನೆಗಳನ್ನುಪ್ರಕಟಿಸಲು ನಿಗಮವು ಉದ್ದೇಶಿಸಿದ್ದು ಇದಕ್ಕೆ ಸಿಎಂಒತ್ತಾಸೆಯಾಗಿದ್ದಾರೆಂದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಅಭಿವೃದ್ಧಿನಿಗಮದ ಅಧ್ಯಕ್ಷರಾದ ಬಾಬು ಪತ್ತಾರ್, ಉಪ್ಪಾರಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗಿರೀಶ್‌ಉಪ್ಪಾರ್, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದವಿ.ರವಿ, ಇತರೆ ಅಧಿಕಾರಿಗಳು ಇದ್ದರು.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.