ಕೋವಿಡ್ ನೆರವು ಇತರೆ ಹಿಂದುಳಿದ ವರ್ಗಕ್ಕೂ ವಿಸ್ತರಿಸಿ ಶಾಸಕ ಮಂಜುನಾಥ್‌ ಆಗ್ರಹ

ಕಾರ್ಮಿಕ ಇಲಾಖೆ ನೊಂದಾಯಿತ ಕಾರ್ಮಿಕರಿಗೆ ಪಡಿತರ ಕಿಟ್ ವಿತರಣೆಗೆ ಚಾಲನೆ

Team Udayavani, Jul 6, 2021, 9:26 PM IST

Mysore News, Hunusuru

ಹುಣಸೂರು : ಕೋವಿಡ್ ಮಹಾಮಾರಿಯಿಂದಾಗಿ ಅನ್ ಲಾಕ್ ಚಾರಿಗೊಂಡಿದ್ದರೂ ಸಹ ಅಸಂಘಟಿತ ಕಾರ್ಮಿಕ ವಲಯಕ್ಕೆ ಸಂಕಷ್ಟ ಎದುರಾಗಿದ್ದು, ಕಾರ್ಮಿಕ ಇಲಾಖೆಯು ಕಾರ್ಮಿಕರಿಗೆ  ಅಗತ್ಯ ಆಹಾರದ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ ಅದೇರೀತಿ ದರ್ಜಿಗಳು ಮತ್ತಿತರ ಅಸಂಘಟಿತ ಕಾರ್ಮಿಕರಿಗೂ ಸರಕಾರದ ನೆರವು ನೀಡಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಆಗ್ರಹಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರದಂದು ಕಾರ್ಮಿಕ ಇಲಾಖೆವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಹಾರ ಪದಾರ್ಥಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿ ತಾಲೂಕಿನಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ ನೊಂದಾಯಿಸಿಕೊಂಡಿದ್ದಾರೆ, ಈ ಪೈಕಿ 5 ಸಾವಿರ ಮಂದಿಗೆ ಮಾತ್ರ ಪಡಿತರ ಕಿಟ್ ನೀಡಲಾಗುತ್ತಿದೆ. ಗುಣಮಟ್ಟ ಕಾಪಾಡಲು ತಾಲೂಕು ಆಡಳಿತಕ್ಕೆ ಜವಾಬ್ದಾರಿವಹಿಸಿ ತಪಾಸಣೆ ನಡೆಸಿದ ನಂತರವಷ್ಟೆ ವಿಕಿಟ್ ಸಿದ್ದಪಡಿಸಲಾಗಿದೆ.

ನೊಂದಾಯಿತ ಕುಟುಂಬದ ಒಬ್ಬರಿಗಷ್ಟೆ ಕಿಟ್ ನೀಡಲಾಗುತ್ತಿದೆ. ಹೊಸಬರಿಗೂ ಕಿಟ್ ನೀಡಲು ಹಾಗೂ ಹೋಟೆಲ್ ಕಾರ್ಮಿಕರು, ದರ್ಜಿಗಳು, ಸೆಲ್ಯೂನ್ ಸೇರಿದಂತೆ ಅಸಂಘಟಿತವಲಯದ ಕಾರ್ಮಿಕವರ್ಗಕ್ಕೂ ಕಿಟ್ ನೀಡಲು  ಒತ್ತಡ ಹಾಕಲಾಗುವುದೆಂದರು.

ಜಿಲ್ಲಾ ಕಾರ್ಮಿಕ ಆಯುಕ್ತ ರಾಜೀವ್ ಕೆ.ಜಾದವ್ ಮಾತನಾಡಿ ಜಿಲ್ಲೆಯಲ್ಲಿ 1.4 ಲಕ್ಷದಷ್ಟು ಮಂದಿ ನೊಂದಾಯಿಸಿಕೊಂಡಿದ್ದಾರೆ. ತಾಲೂಕಿನ ೮ ಸಾವಿರಕ್ಕೂ ಹೆಚ್ಚು ಮಂದಿಗೆ ಕಿಟ್ ವಿತರಿಸಲು ಸಿದ್ದತೆ ನಡೆದಿದೆ. ಮೊದಲ ಹಂತದಲ್ಲಿ ೫ ಸಾವಿರ ಮಂದಿಗೆ ಉಳಿದವರಿಗೆ ಹಂತಹಂತವಾಗಿ ವಿತರಿಸಲಾಗುವುದು.

7500 ಮಂದಿಯ ಖಾತೆಗೆ 33.5 ಕೋಟಿ ಜಮೆ:

ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಡ್ ಅಲೆಯಲ್ಲಿ ಕಟ್ಟಡ ಕಾರ್ಮಿಕರ ಖಾತೆಗೆ ನೇರವಾಗಿ ತಲಾ 5 ಸಾವಿರ ರೂನಂತೆ 4 ಸಾವಿರ ಮಂದಿ ಖಾತೆಗೆ ನೇರಹಣ ವರ್ಗಾವಣೆ ಮಾಡಲಾಗಿದೆ, ಎರಡನೇ ಅಲೆಯಲ್ಲೂ ಸಹ ತಲಾ ೩ ಸಾವಿರದಂತೆ 4500ಮಂದಿ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ಮಾಹಿತಿ ನೀಡಿದರು. 756 ಮಂದಿಗೆ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಸವರಾಜು, ನಗರಸಭೆ ಅಧ್ಯಕ್ಷೆ ಅನುಷಾ, ಉಪಾಧ್ಯಕ್ಷ ದೇವನಾಯ್ಕ, ಇನ್ಸ್‌ಪೆಕ್ಟರ್ ರವಿ, ಎಸ್.ಐ.ಪಂಚಾಕ್ಷರಿ ಕಾರ್ಮಿಕ ಇಲಾಖೆ ನಿರೀಕ್ಷಕ ಲಕ್ಷ್ಮೀಶ್, ಕಾರ್ಮಿಕ ಇಲಾಖೆ ಸಿಬ್ಬಂದಿಗಳು, ಕಲಟ್ಟಡ ಮತ್ತು ಇತರೆ ಕಾರ್ಮಿಕರ ಯೂನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿಶ್ರೀನಿವಾಸ್, ಕಾರ್ಮಿಕ ಬಂಧು ಪ್ರಸಾದ್,ಮಂಜುನಾಥ್, ಶಿವರಾಮು ಸೇರಿದಂತೆ ಅನೇಕರು ಇದ್ದರು.

ಎಲ್ರಪ್ಪಾ ಹೋಂಗಾಡ್ಸ್ ಎಂದ ಶಾಸಕ:

ಪಡಿತರಕಿಟ್ ವಿತರಣೆ ಮಾಡುವ ಬಗ್ಗೆ ಮಾಹಿತಿ ಪಡೆದ ಕಾರ್ಮಿಕರು ಬೆಳಗ್ಗೆಯಿಂದಲೇ ಅಂಬೇಡ್ಕರ್ ಭವನದ ಬಳಿಯಲ್ಲಿ ಜಮಾಯಿಸಿದ್ದರಿಂದ ಜನಜಂಗುಳಿ ಉಂಟಾಗಿತ್ತು, ಕಾರ್ಯಕ್ರಮಕ್ಕಾಗಮಿಸಿದ ಶಾಸಕರು ಜನರನ್ನು ಕಂಡು ಹೌಹಾರಿ ಎಲ್ರಪ್ಪಾ ಹೋಂಗಾಡ್ಸ್‌ಗಳು ನಿನ್ನೆವರೆಗೆ ಲ್ಲೇ ಇದ್ರಲ್ಲ ಎಲ್ಲಿಗೆ ಹೋದರು ಎಂದಿದ್ದಕ್ಕೆ ಜು.5ರವರೆಗೆ ಡ್ಯೂಟಿ ಮಾಡಿ ಜಿಲ್ಲಾಡಳಿತದ ಸೂಚನೆಯಂತೆ ವಾಪಾಸ್ಸಾಗಿದ್ದಾರೆಂಬ ಅಧಿಕಾರಿಗಳ ಮಾಹಿತಿಗೆ ತಾವೇ ಮುಂದೆ ನಿಂತು ಎಲ್ಲರನ್ನು ಮೈದಾನದತ್ತ ಕಳುಹಿಸಿ,ಎಲ್ಲರಿಗೂ ಕಿಟ್ ವಿತರಿಸಲಾಗುವುದು. ಸಾಮಾಜಿಕ ಅಂತರ ಕಾಪಾಡುವಂತೆ ಮೈಕ್ ಮೂಲಕ ಮನವಿ ಮಾಡಿದರು. ಇನ್ಸ್‌ಪೆಕ್ಟರ್ ರವಿ, ಎಸ್.ಐ.ಪಂಚಾಕ್ಷರಿ ಹಾಗೂ  ಸಿಬ್ಬಂದಿಗಳು ಭವನದ ಸುತ್ತ ಬ್ಯಾರಿಕೇಡ್ ಹಾಕಿ ಜನರನ್ನು ನಿಯಂತ್ರಿಸಿದರು.

ಇತರೆ ನಿಗಮಕ್ಕೂ ವಿಸ್ತರಣೆಯಾಗಲಿ:

ಸರಕಾರ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳ ಆರ್ಥಕ ಸಬಲೀಕರಣಕ್ಕಾಗಿ  ಅಂಬೇಡ್ಕರ್ ಮತ್ತು ವಾಲ್ಮಿಕಿ ನಿಗಮಗಳ ಮೂಲಕ ಎಸ್.ಸಿ ಮತ್ತು ಎಸ್.ಟಿ.ಸಮುದಾಯಕ್ಕೆ  ಒಂದು ಲಕ್ಷ ಸಹಾಯಧನದೊಂದಿಗೆ 5 ಲಕ್ಷದವರೆಗೆ ವೈಯಕ್ತಿ ಸಾಲ ನೀಡುವ ಯೋಜನೆ ಜಾರಿಗೊಳಿಸಿದ್ದು, ಇದೇ ಮಾದರಿಯಲ್ಲಿ ಇತರೆ ಹಿಂದುಳಿದ ನಿಗಮಗಳವತಿಯಿಂದಲೂ ವಿತರಣೆಗೆ ಸರಕಾರ ಮುಂದಾಗಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಒತ್ತಾಯಿಸಿದರು.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.