ಮೈಸೂರಿನ ಪರಂಪರೆ ತಿಳಿಸುವ ನಿಧಿ ಶೋಧ ಆಟ


Team Udayavani, Oct 19, 2018, 12:04 PM IST

m3-mys.png

ಮೈಸೂರು: ಮೈಸೂರು ಅರಸರ ಆಳ್ವಿಕೆಗೆ ಸಾಕ್ಷಿಯಾಗಿರುವ ಮೈಸೂರಿನ ಪರಂಪರೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ನಿಧಿ ಶೋಧ(ಟ್ರಷರ್‌ ಹಂಟ್‌) ಆಟಕ್ಕೆ ಬುಧವಾರ ಚಾಲನೆ ದೊರೆಯಿತು. 

ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ದಸರಾ ಸಮಿತಿ ಹಾಗೂ ದ್ವಿಜ ಕನ್ಸ್‌ರ್ವೇಷನ್‌ ಸೊಸೈಟಿ ಆಫ್ ಆರ್ಟ್ಸ್ ಮತ್ತು ಕಲ್ಚರಲ್‌ ಹೆರಿಟೇಜ್‌ ಸಂಸ್ಥೆ ಸಹಯೋಗದಲ್ಲಿ ಬುಧವಾರ ನಡೆದ ನಿಧಿಶೋಧ ಆಟದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ಮೈಸೂರಿನ ಭವ್ಯ ಪರಂಪರೆ ತಿಳಿದುಕೊಂಡರು. 

ವಿವಿಧ ರಾಜ್ಯದ ಸ್ಪರ್ಧಿಗಳು: ಮೈಸೂರು-ಬೆಂಗಳೂರು ಮಾತ್ರವಲ್ಲದೆ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ವೆಸ್ಟ್‌ ಬೆಂಗಾಲ್‌ ಸೇರಿದಂತೆ 80ಕ್ಕೂ ಹೆಚ್ಚು ಮಂದಿ 15 ತಂಡಗಳಲ್ಲಿ ಆಟವಾಡಿದರು. ಆಟೋಮೊಬೈಲ್ಸ್‌, ಹೋಟೆಲ್‌, ವಿದ್ಯಾರ್ಥಿ, ಮುಕ್ತ ವಿಭಾಗದಲ್ಲಿ ನಡೆದ ನಿಧಿಶೋಧ ಆಟ ನಾಲ್ಕು ಕೀಲೋಮೀಟರ್‌ ವ್ಯಾಪ್ತಿಯಲ್ಲಿ ನಡೆಯಿತು. 

ನಿಧಿಶೋಧ ಆಟದಲ್ಲಿ ಪಾಲ್ಗೊಂಡ ಸ್ಪರ್ಧಿಗಳಿಗೆ ಆರಂಭದಲ್ಲಿ ಅರಮನೆಯ ಬಲರಾಮ ದ್ವಾರದಿಂದ 6 ಕಿ.ಮೀ. ವ್ಯಾಪ್ತಿಯಲ್ಲಿ ನಿಧಿಶೋಧ ನಡೆಯಲಿದೆ ಎಂಬ ಸುಳಿವು ನೀಡಲಾಯಿತು. ಅದರಂತೆ ಸುಳಿವು, ಕಥೆ, ಸಂಗೀತ, ಚಿತ್ರ, ಒಗಟು, ರಹಸ್ಯವಾದ ಸಂಕೇತಗಳನ್ನು ಸ್ಪರ್ಧಿಗಳಿಗೆ ಸುಳಿವಾಗಿ ನೀಡಲಾಯಿತು. ಈ ಸುಳಿವನ್ನು ಅರ್ಥ ಮಾಡಿಕೊಂಡು ಕೋಟೆ ಆಂಜನೇಯಸ್ವಾಮಿ ದ್ವಾರದಿಂದ ನಿಧಿಯ ಪತ್ತೆಕಾರ್ಯ ಆರಂಭಿಸಿ ಸ್ಪರ್ಧಿಗಳು ಹೊರಟರು. ಸುಳಿವಿನ ಜಾಡು ಹಿಡಿದು ಹೊರಟ ಸ್ಪರ್ಧಿಗಳಿಗೆ ಓಪನ್‌ ಜೀಪ್‌ ನೀಡಲಾಗಿತ್ತು. 

ನಿಧಿಶೋಧ ಆಟಕ್ಕೆ ಚಾಲನೆ: ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಚ್‌.ಪಿ.ಜನಾರ್ದನ್‌ ನಿಧಿಶೋಧ ಆಟಕ್ಕೆ ಚಾಲನೆ ನೀಡಿ ಮಾತನಾಡಿ, ಮೈಸೂರಿನ ಪಾರಂಪರಿಕ ಕಟ್ಟಡಗಳ ಮಹತ್ವ ಆಟದ ಮೂಲಕ ತಿಳಿಸಿಕೊಡುವ ಉದ್ದೇಶದಿಂದ ಈ ಆಟ ಹಮ್ಮಿಕೊಳ್ಳಲಾಗಿದೆ. ಮೈಸೂರಿನಲ್ಲಿ 200 ಪಾರಂಪರಿಕೆ ಕಟ್ಟಡಗಳಿದ್ದು, 50 ಪಾರಂಪರಿಕ ಕಟ್ಟಡಗಳನ್ನು ಆಟಕ್ಕೆ ಬಳಸಿಕೊಳ್ಳಲಾಗಿದೆ ಎಂದರು. ದ್ವಿಜ ಕನ್ಸ್‌ರ್ವೇಷನ್‌ ಸೊಸೈಟಿ ಆಫ್ ಆರ್ಟ್ಸ್ ಮತ್ತು ಕಲ್ಚರಲ್‌ ಹೆರಿಟೇಜ್‌ ಸಂಸ್ಥೆ ನಿರ್ದೇಶಕ ಗಿರೀಶ್‌ ಕೋಟಿ ಹಾಜರಿದ್ದರು.

ಎಲ್ಲೆಲ್ಲಿ ಹುಡುಕಾಟ: ನಿಧಿಶೋಧದ ಹುಡುಕಾಟ ನಡೆಸಿದ ಸ್ಪರ್ಧಿಗಳು ಜಗನ್ಮೋಹನ ಅರಮನೆ , ನಂದಿ, ಲಕ್ಷಿದೇವಸ್ಥಾನ, ದೇವರಾಜ ಮಾರುಕಟ್ಟೆ, ನೈಸರ್ಗಿಕ ವಸ್ತು ಸಂಗ್ರಹಾಲಯ, ವಿಶ್ವವಿದ್ಯಾಲಯ ವಸ್ತು ಸಂಗ್ರಹಾಲಯ, ಕುಕ್ಕರಹಳ್ಳಿ ಕೆರೆ‌, ವಸಂತ ಮಹಲ್‌, ಗಡಿಯಾರ ಗೋಪುರ, ಸಂಗ್ರಹಾಲಯ, ದೇವಸ್ಥಾನ, ನಾರಾಯಣ್‌ ಚಾಮುಂಡೇಶ್ವರಿ ದೇವಸ್ಥಾನ, ಜಯಲಕ್ಷಿ ವಿಲಾಸ ಅರಮನೆ,

ಚೆಲುವಾಂಬ ಪ್ಯಾಲೇಸ್‌, ಜಯಚಾಮರಾಜೇಂದ್ರ ಆರ್ಟ್‌ ಮೃಗಾಲಯ, ಫಿಲೋಮಿನಾ ಚಾಮುಂಡೇಶ್ವರಿ ಅತಿಥಿಗೃಹ, ಓರಿಯಂಟಲ್‌ ರಿಸರ್ಚ್‌ ಸಂಸ್ಥೆ, ಮರಿಮಲ್ಲಪ್ಪ ಹೈಸ್ಕೂಲ್‌, ಹಾಡ್ವಿìಕ್‌ ಹೈಸ್ಕೂಲ್‌, ಮಹಾರಾಜ ಕಾಲೇಜ್‌ ಮಹಾರಾಣಿ ಕಾಲೇಜ್‌, ಕಮಿಷನರ್‌ ಆಫೀಸ್‌, ಮೈಸೂರು ಮೆಡಿಕಲ್‌ ಕಾಲೇಜ್‌, ಕೃಷ್ಣರಾಜೇಂದ್ರ ಆಸ್ಪತ್ರೆ, ಟೌನ್‌ಹಾಲ್‌, ಡಿ.ಬನುಮಯ್ನಾಸ್‌ ಕಾಲೇಜು ಇತರೆಡೆಗಳಲ್ಲಿ ನಿಧಿ ಶೋಧನೆ ಮಾಡಿದರು. 

ಟಾಪ್ ನ್ಯೂಸ್

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

hk-patil

Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.