ಸಮರ್ಪಕವಾಗಿ ನೀರು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ
Team Udayavani, Apr 23, 2022, 2:21 PM IST
ಮೈಸೂರು: ನಗರದಲ್ಲಿ ಸಮರ್ಪಕವಾಗಿ ಕುಡಿ ಯುವ ನೀರು ಸರಬರಾಜು, ಸೂಕ್ತ ಕಸ ವಿಲೇ ವಾರಿ, ಸ್ವಚ್ಛತೆಯ ಸಮರ್ಪಕ ನಿರ್ವಹಣೆಗೆ ಮಹಾನಗರ ಪಾಲಿಕೆ ಬಜೆಟ್‌ನಲ್ಲಿ ಮೊದಲ ಆದ್ಯತೆ ನೀಡಬೇಕು ಎನ್ನುವ ಸಲಹೆಗಳು ಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕೇಳಿಬಂದವು.
ಮೈಸೂರು ಮಹಾನಗರ ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಪಿ.ಲಿಂಗರಾಜು, ಹೋಟೆಲ್ ಉದ್ದಿಮೆಗಳ ಸಂಘದ ಅಧ್ಯಕ್ಷ ನಾರಾ ಯಣಗೌಡ, ಮಾಜಿ ಮೇಯರ್‌ಗಳಾದ ಸಂದೇಶ್ ಸ್ವಾಮಿ, ಲಿಂಗಪ್ಪ ಪಾಲ್ಗೊಂಡು ಅಭಿಪ್ರಾಯಗಳನ್ನು ತಿಳಿಸಿದರು.
ಬೇರೆ ಕೆಲಸವೇ ಆಗಿಲ್ಲ: ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಪಾಲಿಕೆ ಬಜೆಟ್ 800 ಕೋಟಿ ರೂಪಾಯಿ ದಾಟಿದೆ. ಆದರೆ ನಗ ರದ ನಿರ್ವಹಣೆ ಮಾತ್ರ ಸಮರ್ಪಕವಾಗಿ ಇಲ್ಲ. ಸ್ವಚ್ಛ
ಮಾಡುವುದಕ್ಕೆ ಗುತ್ತಿಗೆ ನೀಡಿದ್ದರೂ ಆ ಕೆಲಸ ಸರಿಯಾಗಿ ಆಗುತ್ತಿಲ್ಲ. ತ್ಯಾಜ್ಯ ವಿಲೇವಾರಿಯ ಸಮಸ್ಯೆ ಬಗೆ ಹರಿದಿಲ್ಲ. ವಿಲೇವಾರಿ ಘಟಕಗಳಿಗೆ ಜಾಗ ಗುರುತು ಮಾಡಿರುವುದನ್ನು ಹೊರತು ಪಡಿಸಿ ಬೇರೆ ಕೆಲಸವೇ ಆಗಿಲ್ಲ ಎಂದರು.
ಯಾವುದೇ ಅನುದಾನ ಬರುವುದಿಲ್ಲ: ಪಾಲಿಕೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಯಾವುದೇ ಅನುದಾನ ಬರುವುದಿಲ್ಲ. ಇಲ್ಲಿ ಏನಿದ್ದರೂ ತೆರಿಗೆ ಸಂಗ್ರಹ ಮಾಡಿ ಮೂಲಭೂತ ಸೌಕರ್ಯಗಳನ್ನು ನಿರ್ವಹಣೆ ಮಾಡುವುದು ಅಷ್ಟೆ. ಆದ್ದರಿಂದ ತೆರಿಗೆ ಸಂಗ್ರಹ ವಿಚಾರದಲ್ಲಿ ಸರಿಯಾದ ಕ್ರಮಗಳನ್ನು ಅನುಸರಿಸಬೇಕು. ನೀರಿನ ಕರ ಪಾವತಿ ಮಾಡ ದವರಿಗೆ ಒಂದು ವಾರದೊಳಗೆ ಸಂಪರ್ಕ ಸ್ಥಗಿತ ಗೊಳಿಸಬೇಕು. ಅದನ್ನು ಬಿಟ್ಟು ನಾಲ್ಕೆçದು ವರ್ಷ ಗಳಿಂದ ಕರ ಸಂಗ್ರಹ ಮಾಡದೇ ಈಗ ಏಕಾಎಕಿ ನೀರು ಸರಬರಾಜು ಸ್ಥಗಿತಗೊಳಿಸುವುದು ಸರಿ ಯಲ್ಲ. ಏಕೆಂದರೆ ಮೊದಲು ಬಾಡಿಗೆಗೆ ಇದ್ದವರು ಕರ ಪಾವತಿ ಮಾಡದೇ ಹೋಗಿದ್ದಾರೆ. ಈಗ ಇರುವವರು ಅನುಭವಿಸುವಂತಾಗಿದೆ ಎಂದರು.
ವ್ಯಾಪಾರಸ್ಥರಿಗೆ ಮಳಿಗೆಗಳನ್ನು ನೀಡಬೇಕು: ಮಾಜಿ ಮೇಯರ್ ಕೆ.ಆರ್.ಲಿಂಗಪ್ಪ ಮಾತನಾಡಿ, ಲ್ಯಾನ್ಸ್‌ಡೌನ್ ಬಿಲ್ಡಿಂಗ್ ಚಟುವಟಿಕೆ ಸ್ಥಗಿತಗೊಳಿಸಿ ಬಹಳಷ್ಟು ವರ್ಷವೇ ಆಗಿದೆ. ಪಾಲಿಕೆಯು ಅಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿ ಅಥವಾ ಇರುವ ಕಟ್ಟಡವನ್ನೇ ಪುನರುಜ್ಜೀವನಗೊಳಿಸಿ ವ್ಯಾಪಾರಸ್ಥ ರಿಗೆ ಬಾಡಿಗೆಗೆ ನೀಡಿದ್ದರೆ ಆದಾಯ ಬರುತ್ತಿತ್ತು. ಇದೇ ರೀತಿ ದೇವರಾಜ ಮಾರುಕಟ್ಟೆಯನ್ನು ಕೂಡಾ ಒಂದೇ ಸಲ ನೆಲಸಮ ಮಾಡದೇ ಅರ್ಧ ಭಾಗ ಕೆಡವಿ, ಅಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ನೀಡ ಬೇಕು. ಬಳಿಕ ಇನ್ನರ್ಧ ಭಾಗದಲ್ಲಿ ಕಾಮಗಾರಿ ಪ್ರಾರಂಭಿಸಬೇಕು. ಇದರಿಂದ ವ್ಯಾಪಾರಸ್ಥರಿಗೂ ತೊಂದರೆಯಾಗುವು ದಿಲ್ಲ ಎಂದು ಸಲಹೆ ನೀಡಿದರು.
ಪೇ ಅಂಡ್ ಪಾರ್ಕಿಂಗ್ ಜಾರಿಗೊಳಿಸಿ: ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಕೆ.ಪಿ. ಲಿಂಗರಾಜು ಮಾತನಾಡಿ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಟ್ರೇಡ್ ಲೈಸನ್ಸ್ ಸೆಕ್ಟರ್ ನಿಂದ ಮುಕ್ತಗೊಳಿಸಬೇಕು. ಡಿ.ದೇವರಾಜ ಅರಸ್ ರಸ್ತೆ, ಅಶೋಕ ರಸ್ತೆ, ಸಯ್ನಾಜಿರಾವ್ ರಸ್ತೆಯಲ್ಲಿ ಪೇ ಅಂಡ್ ಪಾರ್ಕಿಂಗ್’ ಜಾರಿಗೊಳಿಸ ಬೇಕು. ಬಹುಮಹಡಿ ಪಾರ್ಕಿಂಗ್ ಅನುಷ್ಠಾನ ಗೊಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೋಭಾ, ಹೆಚ್ಚುವರಿ ಆಯುಕ್ತರಾದ ರೂಪ, ಸವಿತಾ, ಪಾಲಿಕೆ ಸದಸ್ಯರಾದ ಅಶ್ವಿನಿ ಅನಂತ್, ಸತ್ಯ ರಾಜು, ರಮಣಿ, ಎಸ್ಪಿಎಂ ಮಂಜು, ಆಯೂಬ್‌ಖಾನ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗ ರಾಜು, ಅಧೀಕ್ಷಕ ಎಂಜಿನಿಯರ್ ಮಹೇಶ್ ಇತರರು ಇದ್ದರು.
ಲೈಸನ್ಸ್ ನೀಡುವ ಪ್ರಕ್ರಿಯೆ ವಿಭಿನ್ನ: ಹೋಟೆಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಟ್ರೇಡ್ ಲೈಸನ್ಸ್ ಪ್ರಕ್ರಿಯೆಯನ್ನು ಸರಳೀಕರಣಗೊಳಿಸ ಬೇಕು. ಲೈಸನ್ಸ್ ಪಡೆದುಕೊಂಡವರಿಗೆ ಸರ್ಟಿಫಿಕೆಟ್ ನೀಡಬೇಕು. ಏಕೆಂದರೆ ಪಾಲಿಕೆ ಯಿಂದ ನೀಡುವ ರಶೀದಿಯನ್ನು ಪ್ರವಾ ಸೋದ್ಯಮ ಇಲಾಖೆ ಸೇರಿದಂತೆ ಹಲವಾರು ಕಡೆಯಲ್ಲಿ ರಿಯಾಯ್ತಿ ಸೌಲಭ್ಯ ನೀಡುವಾಗ ಮಾನ್ಯ ಮಾಡುವುದಿಲ್ಲ. ಅಲ್ಲದೇ ಒಂದೊಂದು ವಲಯದಲ್ಲಿ ಲೈಸನ್ಸ್ ನೀಡುವ ಪ್ರಕ್ರಿಯೆ ವಿಭಿನ್ನವಾಗಿದೆ ಎಂದು ತಿಳಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.