Mysuru Dasara: ಕಣ್ಮನ ಸೆಳೆದ ವಿಂಟೇಜ್ ಕಾರುಗಳ ವಯ್ಯಾರ
Team Udayavani, Oct 21, 2023, 3:17 PM IST
ಮೈಸೂರು: ನಾಡಹಬ್ಬ ಮೈಸೂರು ದಸರಾದ ಆರನೇ ದಿನವಾದ ಶುಕ್ರವಾರ ಎಂಜಿಎಸ್‌ನಿಂದ ನಡೆದ ದಿ ಮೈಸೂರು ದಸರಾ ವಿಂಟೇಜ್ ಕಾರು ಹಾಗೂ ಬೈಕ್‌ಗಳ ಪ್ರದರ್ಶನ, ರ್ಯಾಲಿ ಎಲ್ಲರ ಕಣ್ಮನ ಸೆಳೆಯಿತು. ಮೈಸೂರಿನ ಹೆಬ್ಟಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದ ಈ ಪ್ರದರ್ಶನ ಹಾಗೂ ರ್ಯಾಲಿಯಲ್ಲಿ ನೂರಿನ್ನೂರು ವರ್ಷ ಪೂರೈಸಿದ ವಿಭಿನ್ನ, ವಿಶೇಷ ವಾದರಿಯ ಕಾರುಗಳು, ದ್ವಿಚಕ್ರ ವಾಹನಗಳನ್ನು ಜನರು ಕಣ್ತುಂಬಿಕೊಂಡರು.
ಪ್ರದರ್ಶನದ ಜೊತೆ ರ್ಯಾಲಿ: ಹಳೆಯ ಮಾಡೆಲ್ ಕಾರುಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದರ ಜತೆಗೆ ಅವುಗಳ ಬಣ್ಣವೂ ಮಾಸದಂತೆ ಜೋಪಾನ ಮಾಡಿಕೊಂಡು ಬಂದಿರುವ ಎಂ.ಜಿ.ಎಸ್‌ನವರು ನಾಡ ಹಬ್ಬ ದಸರಾ ಪ್ರಯುಕ್ತ ತಮ್ಮ ಸಂಗ್ರಹದಲ್ಲಿರುವ ವಿಂಟೇಜ್ ಕಾರ್‌ಗಳು, ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸಿದರಲ್ಲದೆ, ಅವುಗಳ ರ್ಯಾಲಿ ಕೂಡ ನಡೆಸಿದರು.
ರ್ಯಾಲಿಯಲ್ಲಿ 1909ರಲ್ಲಿ ತಯಾರಾದ ಫೋರ್ಡ್ ಕಾರು, 1935ರಲ್ಲಿ ಬ್ರಿಟಿಷರು ತಯಾರಿಸಿ ಬಳಸುತ್ತಿದ್ದ ಮಾಸ್ಟರ್ ಪೀಸ್ ಕಾರು ಎಂದು ಕರೆಯುವ ರೋಲ್ಸ್ ರಾಯ್, 1948ರ ಹಿಂದೂಸ್ತಾನ್-10, ಅಂಬಾಸೀಡರ್, 1932ರ ತಯಾರಾದ ಬುಲ್ಕ್ ರೋಡ್ ಮಾಸ್ಟರ್ ಕಾರು, 1960ರಲ್ಲಿ ರೋಡಿಗಿಳಿದಿದ್ದ ವಿಲ್ಲಿ ಜೀಪ್, 1930ರಲ್ಲಿ ತಯಾರಾಗಿದ್ದ ಕಾಡ್ಲಿಕ್, 1964ರ ಕಿಂಗ್ಸೆ ಕಾರು, 1955ರ ಮಿರರ್ ಮೈನರ್, 1930ರ ಡಿಸ್ಟೋ ಕಾರು ಹೀಗೆ ಹಲವು ಗತಕಾಲದ ಕಾರುಗಳು ಕಣ್ಮನ ಸೆಳೆದವು. ಇವುಗಳ ಜತೆಗೆ ಹಳೇ ಕಾಲದ ಅಪರೂಪದ ದ್ವಿಚಕ್ರ ವಾಹನಗಳು ನೋಡುಗರನ್ನು ಆಕರ್ಷಿಸಿದವು.
ಮೈಸೂರಿನ ಹೆಬ್ಟಾಳ ಕೈಗಾರಿಕಾ ಪ್ರದೇಶದಲ್ಲಿ ದಿ ಮೈಸೂರು ದಸರಾ ವಿಂಟೇಜ್ ಕಾರು ಹಾಗೂ ಬೈಕುಗಳ ಪ್ರದರ್ಶನ, ರ್ಯಾಲಿಯಲ್ಲಿ ಸಂಸದ ಪ್ರತಾಪ್‌ಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು. ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Waqf Issue: ಶ್ರೀರಂಗಪಟ್ಟಣದ ಸರಕಾರಿ ಶಾಲೆ ಮೇಲೂ ವಕ್ಫ್ ವಕ್ರದೃಷ್ಟಿ!
MUST WATCH
ಹೊಸ ಸೇರ್ಪಡೆ
JPC ಅಧ್ಯಕ್ಷ ಪಾಲ್ ಕರ್ನಾಟಕ ಪ್ರವಾಸ ಏಕಪಕ್ಷೀಯ: ಅಸಾಸುದ್ದೀನ್ ಒವೈಸಿ
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Puttur: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Mangalore: ವಂಚನೆ ಪ್ರಕರಣದಲ್ಲಿ ಭಾಗಿ ಆರೋಪಿಸಿ 30.65 ಲಕ್ಷ ರೂ. ಹಣ ವರ್ಗಾಯಿಸಿ ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.