Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ


Team Udayavani, Sep 21, 2024, 6:20 AM IST

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

ಮೈಸೂರು: ಮೈಸೂರು ದಸರಾ ಉದ್ಘಾಟಕರನ್ನಾಗಿ ಹಿರಿಯ ಸಾಹಿತಿ ಪ್ರೊ| ಹಂ.ಪ. ನಾಗರಾಜಯ್ಯ ಅವರನ್ನು ಆಹ್ವಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಘೋಷಿಸಿದರು. ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಹಂಪನಾ ಕೊಡುಗೆ ಅನನ್ಯ. ಇದನ್ನು ಪರಿಗಣಿಸಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ಸಾಂಸ್ಕೃತಿಕ ಮುನ್ನೋಟ; ಚಿಂತನಾ ಸಮಾವೇಶದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರೊ| ಹಂಪನಾ ಕೂಡ ಭಾಗವಹಿಸಿದ್ದರು. ಅವರನ್ನು ವೇದಿಕೆ ಮೇಲೆ ಆಹ್ವಾನಿಸಿದ ಸಿದ್ದರಾಮಯ್ಯ ಹೂಗುಚ್ಛ ನೀಡಿ ಶುಭ ಕೋರಿ ತಮ್ಮ ಆಸನದ ಪಕ್ಕದಲ್ಲಿಯೇ ಕೂರಿಸಿ ಗೌರವ ತೋರಿದರು.

ಭಾಷಾ ಶಾಸ್ತ್ರಜ್ಞರು, ಸಂಶೋಧಕರು,
ಪ್ರಾಧ್ಯಾಪಕರು…
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಹಂಪಸಂದ್ರದ ಹಂ.ಪ. ನಾಗರಾಜಯ್ಯ (ಹಂಪನಾ), ಅಧ್ಯಾಪಕರಾಗಿ, ಬೆಂಗಳೂರು ವಿ.ವಿ.ಯಲ್ಲಿ ಕಲಾ ವಿಭಾಗದ ಮುಖ್ಯಸ್ಥರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕನ್ನಡ-ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. 1978ರಿಂದ 1986ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂಪನಾ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಲೇಖಕರ ಸುಮಾರು 300 ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ಮತ್ತು ಜೈನ ಪರಂಪರೆ ಕುರಿತು ಅಪಾರ ವಿದ್ವತ್‌ ಹೊಂದಿರುವ ಹಂಪನಾ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಸಾಹಿತ್ಯ ಸೇವೆ ಪರಿಗಣಿಸಿ ಹಂಪಿಯ ಕನ್ನಡ ವಿ.ವಿ. 2006ರಲ್ಲಿ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ.

ಉದಯವಾಣಿ ಸಂದರ್ಶನ:
ನನಗಿಂದು ಸಂತೋಷಾಘಾತ…
1. ದಸರಾ ಉದ್ಘಾಟಕರಾಗಿ ಆಯ್ಕೆ ಆಗುವ ನಿರೀಕ್ಷೆ ಇತ್ತಾ?
ನನಗೆ ಅನಿರೀಕ್ಷಿತವಾಗಿ ದೊರೆತ ಅಪೂರ್ವ, ಅವಿಸ್ಮರಣೀಯ ಸಂದರ್ಭ ಇದು. ಸಾಮಾನ್ಯವಾಗಿ ವಿದ್ಯುತ್‌ ಆಘಾತ ಎಂದು ಕರೆಯುತ್ತಾರೆ. ಅದೇ ರೀತಿ ನನಗಿಂದು ಸಂತೋಷಾ
ಘಾತವಾಗಿದೆ.
2. ನಿಮ್ಮ ಮೈಸೂರಿನ ನಂಟು ಹೇಗಿದೆ?
ನನ್ನ ಮೈಸೂರು ನಂಟು ತುಂಬಾ ಹಳೆಯದು. ವಿದ್ಯಾರ್ಥಿ ಜೀವನ ಇÇÉೇ ಕಳೆದಿದ್ದು ಮಹಾರಾಜ ಕಾಲೇಜಿನಲ್ಲಿ ಬಿಎ ಆನರ್ಸ್‌ ಪದವಿ, ಮೈಸೂರು ವಿ.ವಿ.ಯಲ್ಲಿ ಎಂಎ ಪದವಿ ಪಡೆದುಕೊಂಡಿ¨ªೆ. ಯಾವ ಊರಿನಲ್ಲಿ ಬದುಕಿನ ಜ್ಞಾನ ಉಂಟಾಯಿತೋ, ಅಕ್ಷರ ಲೋಕಕ್ಕೆ ಬಾಗಿಲು ತೆರೆದು ಸರಸ್ವತಿ ನನ್ನನ್ನು ಒಳಗೆ ಕರೆದುಕೊಂಡಲೋ ಇದೀಗ ಅದೇ ಊರಿನ ದಸರೆ ಉತ್ಸವವನ್ನು ಉದ್ಘಾಟಿಸುವ ಅವಕಾಶ ಒಲಿದು ಬಂದಿದೆ.
3. ದಸರಾ ನೋಡಿದ್ದೀರಾ? ನಿಮ್ಮ ಅನುಭವ ಏನು?
ಸುಮಾರು 50 ಬಾರಿ ನೋಡಿರಬಹುದು. ಆ ಸಂಭ್ರಮವನ್ನು ಅನುಭವಿಸಿ ರೋಮಾಚನಗೊಂಡಿದ್ದೇನೆ. ಇದು ಪ್ರಜಾಪ್ರಭುತ್ವ. ನಾನು ಕರ್ನಾಟಕದ ಒಬ್ಬ ಪ್ರಜೆ. ಇಡೀ ಕರ್ನಾಟಕದ ಕನ್ನಡಿಗರ ಪರ ನಾನು ದಸರಾ ಮಹೋತ್ಸವವನ್ನು ಉದ್ಘಾಟಿಸ ಬಯಸುತ್ತೇನೆ.
4. ಇವತ್ತಿನ ಕಾಲಕ್ಕೆ ದಸರಾ ಮಹೋತ್ಸವ ಬಗ್ಗೆ ಏನು ಹೇಳಬಯಸುತ್ತೀರಾ?
ಬಹಳ ಸ್ಥಿತ್ಯಂತರದ ಕಾಲಘಟ್ಟದಲ್ಲಿ ನಾವಿದ್ದೇವೆ. ಹಬ್ಬದ ಮಹತ್ವ ಏನು? ಈ ಕಾಲಕ್ಕೆ ಅವುಗಳನ್ನು ಉಳಿಸಿಕೊಳ್ಳುವ ಬಗ್ಗೆ ಆಲೋಚಿಸಬೇಕಿದೆ.

ಟಾಪ್ ನ್ಯೂಸ್

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?

1-ausi

Australia; ‘ವನ್‌ ಡೇ ಕಪ್‌’ಗೆ ಡೀನ್‌ ಜೋನ್ಸ್‌  ಹೆಸರು

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

Ramalinga-reddy

Distribution: ಕೆಎಸ್ಸಾರ್ಟಿಸಿ ನಿವೃತ್ತ ಸಿಬಂದಿಗೆ 224 ಕೋಟಿ ರೂ. ಪಾವತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

11

KR Nagar: ಸೂಕ್ತ ನಿರ್ವಹಣೆ ಇಲ್ಲದ ಚುಂಚನಕಟ್ಟೆ ನಿಲ್ದಾಣ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?

1-ausi

Australia; ‘ವನ್‌ ಡೇ ಕಪ್‌’ಗೆ ಡೀನ್‌ ಜೋನ್ಸ್‌  ಹೆಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.