Mysuru: ದೀಪಾಲಂಕಾರ ವಿಸ್ತರಣೆ: ವಾಹನ ಸಂಚಾರ ನಿರ್ಬಂಧವೂ ಮುಂದುವರಿಕೆ
ದಸರಾ ನಂತರವೂ ವಿದ್ಯುತ್ ದೀಪಾಲಂಕಾರ ವೀಕ್ಷಿಸುವವರ ಸಂಖ್ಯೆ ಹೆಚ್ಚಳ
Team Udayavani, Oct 16, 2024, 6:30 AM IST
ಮೈಸೂರು: ದಸರಾ ವಿದ್ಯುತ್ ದೀಪಾಲಂಕಾರವನ್ನು ಅ.23ರವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಅಂದಿನವರೆಗೂ ನಗರದಲ್ಲಿನ ವಾಹನ ಸಂಚಾರ ಹಾಗೂ ನಿಲುಗಡೆಗೆ ವಿಧಿಸಿದ್ದ ನಿರ್ಬಂಧಗಳು ಹಾಗೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿನ ಮಾರ್ಪಾಡುಗಳು ಮುಂದುವರೆಯಲಿವೆ.
ದಸರಾ ನಂತರವೂ ವಿದ್ಯುತ್ ದೀಪಾಲಂಕಾರ ವೀಕ್ಷಿಸುವವರ ಸಂಖ್ಯೆ ಹೆಚ್ಚಾಗಿದ್ದು, ಸಂಚಾರ ಹಾಗೂ ವಾಹನ ದಟ್ಟಣೆ ನಿರ್ವಹಣೆ ದೃಷ್ಟಿಯಿಂದ ಸಂಜೆ 4ರಿಂದ ರಾತ್ರಿ 12ರವರೆಗೆ ಜಯಚಾಮರಾಜ ಒಡೆಯರ್ ವೃತ್ತ(ಹಾರ್ಡಿಂಜ್ ಸರ್ಕಲ್)ದಿಂದ ಚಾಮರಾಜ ಒಡೆಯರ್ ವೃತ್ತ-ಕೆ.ಆರ್.ವೃತ್ತ ಮಾರ್ಗವಾಗಿ ಅರಮನೆ ಸುತ್ತಲಿನ ರಸ್ತೆಗಳಲ್ಲಿ, ಕೆ.ಆರ್.ವೃತ್ತದಿಂದ ಆಯುರ್ವೇದ ಆಸ್ಪತ್ರೆ ವೃತ್ತ-ನೆಹರೂ ವೃತ್ತ ಮಾರ್ಗವಾಗಿ ಚಾಮರಾಜ ಒಡೆಯರ್ ವೃತ್ತಕ್ಕೆ ಏಕಮುಖ ಸಂಚಾರ ಸೇರಿದಂತೆ ದಸರಾ ವೇಳೆಯ ಎಲ್ಲಾ ನಿರ್ಬಂಧಗಳೂ ಇರಲಿವೆ.
ಮೈಸೂರು ಸಬ್ ಅರ್ಬನ್ ಬಸ್ ನಿಲ್ದಾಣದಿಂದ ಬೆಂಗಳೂರು, ಹಾಸನ, ಮಡಿಕೇರಿ, ಹೆಚ್.ಡಿ.ಕೋಟೆ, ನಂಜನಗೂಡು ಸೇರಿದಂತೆ ವಿವಿಧೆಡೆಗೆ ಸಂಚರಿಸುವ ಹಾಗೂ ಹೊರಗಿನಿಂದ ಆಗಮಿಸುವ ಬಸ್ಸುಗಳು ಹಾಗೂ ನಗರ ಸಾರಿಗೆ ಬಸ್‌ಗಳ ಸಂಚಾರ ಮಾರ್ಗದಲ್ಲಿನ ತಾತ್ಕಾಲಿಕ ಮಾರ್ಪಾಡುಗಳು ಮತ್ತು ತಾತ್ಕಾಲಿಕ ನಿಲ್ದಾಣಗಳ ಕಾರ್ಯಾಚರಣೆ ಅ.23ರವರೆಗೂ ಮುಂದುವರೆಯಲಿದೆ.
ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚರಿಸುವ ಮಾರ್ಗ ಮತ್ತು ತಾತ್ಕಾಲಿಕ ನಿಲುಗಡೆ:
ಅ.13 ರಿಂದ 23ರವರೆಗೆ ಪ್ರತಿದಿನ ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 11ರವರೆಗೆ ನಗರದ ಹೊರ ಭಾಗಗಳಿಂದ ಆಗಮಿಸುವ ಹಾಗೂ ನಗರದಿಂದ ನಿರ್ಗಮಿಸುವ ಬಸ್‌ಗಳು ಮಾರ್ಗನಿಗದಿಗೊಳಿಸಲಾಗಿದೆ.
ಮೈಸೂರು-ಬೆಂಗಳೂರು ರಸ್ತೆ ಮೂಲಕ ನಗರಕ್ಕೆ ಆಗಮಿಸುವ ಬಸ್ಸುಗಳು ಬೆಂಗಳೂರು ರಸ್ತೆ- ನಾಡಪ್ರಭು ಕೆಂಪೇಗೌಡ ವೃತ್ತ- ಎಡ ತಿರುವು- ರಿಂಗ್ ರಸ್ತೆ ಮೂಲಕ ಮಹದೇವಪುರ ರಿಂಗ್ ರಸ್ತೆ ಜಂಕ್ಷನ್ (ಸಾತಗಳ್ಳಿ ಬಸ್ ಡಿಪೋ)- ಮಹದೇವಪುರ ರಸ್ತೆ- ನೆಕ್ಸಸ್ ಮಾಲ್ ಜಂಕ್ಷನ್- ಕಾಳಿಕಾಂಬ ದೇವಸ್ಥಾನ ರಸ್ತೆ ಜಂಕ್ಷನ್- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ಸರ್ಕಲ್) – ಬಿಎನ್ ರಸ್ತೆ- ಕೆ.ಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುವುದು.
ಇಲ್ಲಿಂದ ನಿರ್ಗಮಿಸುವ ಬಸ್ಸುಗಳು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ಸರ್ಕಲ್ )- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ಡಾ. ಬಿ.ಆರ್.ಅಂಬೇಡ್ಕì ವೃತ್ತ (ಎಫ್.ಟಿ.ಎಸ್)- ಡಾ. ರಾಜಕುಮಾರ್ ವೃತ್ತ (ಫೌಂಟೆನ್ ಸರ್ಕಲ್ )- ಟಿ.ಎನ್.ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ) – ಬನ್ನಿಮಂಟಪ ರಸ್ತೆ- ನಂದಿ ಬಸಪ್ಪ ಗೋರಿ ಜಂಕ್ಷನ್- ಟೋಲ್ ಗೇಟ್- ನಾಡಪ್ರಭು ಕೆಂಪೇಗೌಡ ವೃತ್ತ- ಬೆಂಗಳೂರು ರಸ್ತೆ ಮೂಲಕ ಮುಂದೆ ಸಾಗುವುದು.
ಮಡಿಕೇರಿ, ಹಾಸನ ಕಡೆಯಿಂದ ಹುಣಸೂರು ರಸ್ತೆ ಮೂಲಕ ಮೈಸೂರು ನಗರಕ್ಕೆ ಆಗಮಿಸುವ ಬಸ್ಸುಗಳು ಹುಣಸೂರು ರಸ್ತೆ- ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ (ಮೆಟ್ರೋಪೋಲ್ ವೃತ್ತ)- ದಾಸಪ್ಪ ವೃತ್ತ- ಬಾಬು ಜಗಜೀವನರಾಂ ವೃತ್ತ (ರೈಲ್ವೇ ನಿಲ್ದಾಣ ವೃತ್ತ) -ಪುಟ್ಟು ಗೋಪಾಲಕೃಷ್ಣ ಶೆಟ್ಟಿ ವೃತ್ತ (ಜೆ.ಕೆ.ಗ್ರೌಂಡ್)- ಶೇಷಾದ್ರಿ ಅಯ್ಯರ್ ರಸ್ತೆ- ಸುಭಾಷ್ ಚಂದ್ರ ಬೋಸ್ ವೃತ್ತ(ಆರ್‌ಎಂಸಿ) ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ಸರ್ಕಲ್ )- ನೆಲ್ಸನ್ ಮಂಡೇಲಾ ರಸ್ತೆ- ಟಿ.ಎನ್.ನರಸಿಂಹಮೂರ್ತಿ ವೃತ್ತ(ಎಲ್‌ಐಸಿ ವೃತ್ತ)- ಟಿಪ್ಪು ವೃತ್ತ- ಡಾ.ರಾಜಕುಮಾರ್ ವೃತ್ತ (ಫೌಂಟೆನ್ ವೃತ್ತ)- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ನವಾಬ್ ಹೈದರಾಲಿ ಖಾನ್ ವೃತ್ತ(ಫೈವ್ ಲೈಟ್ ವೃತ್ತ) – ಬಿ.ಎನ್.ರಸ್ತೆ ಮೂಲಕ ಬಸ್ ನಿಲ್ದಾಣ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ನಿರ್ಗಮಿಸುವ ಬಸ್ಸುಗಳು ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ಸರ್ಕಲ್ )- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ಡಾ.ಬಿ.ಆರ್.ಅಂಬೇಡ್ಕರ್ ವೃತ್ತ (ಎಫ್.ಟಿ.ಎಸ್)- ಡಾ.ರಾಜಕುಮಾರ್ ವೃತ್ತ (ಫೌಂಟೆನ್ ಸರ್ಕಲ್ )- ಟಿ.ಎನ್.ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ) -ನೆಲ್ಸನ್ ಮಂಡೇಲಾ ರಸ್ತೆ- ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ಸರ್ಕಲ್ )- ಸುಭಾಷcಂದ್ರ ಬೋಸ್ ವೃತ್ತ(ಆರ್‌ಎಂಸಿ)- ಶೇಷಾದ್ರಿ ಅಯ್ಯರ್ ರಸ್ತೆ- ಪುಟ್ಟು ಗೋಪಾಲಕೃಷ್ಣ ಶೆಟ್ಟಿ ವೃತ್ತ (ಜೆ.ಕೆ.ಗ್ರೌಂಡ್)- ಬಾಬು ಜಗಜೀವನರಾಂ ವೃತ್ತ (ರೈಲ್ವೇ ನಿಲ್ದಾಣ ವೃತ್ತ)- ದಾಸಪ್ಪ ವೃತ್ತ- ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ (ಮೆಟ್ರೋಪೋಲ್ ವೃತ್ತ)- ಹುಣಸೂರು ರಸ್ತೆ ಮೂಲಕ ಮುಂದೆ ಸಾಗುವುದು.
ಬಸ್ ನಿಲ್ದಾಣದಿಂದ ನಿರ್ಗಮಿಸುವ ಬಸ್‌ಗಳು ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ವೃತ್ತ)- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ಕಾಳಿಕಾಂಬ ದೇವಸ್ಥಾನದ ಜಂಕ್ಷನ್- ಹರಿಕೃಷ್ಣ ವೃತ್ತ (ಡಿಪಿಓ ವೃತ್ತ)- ಶಾಂತವೇರಿ ಗೋಪಾಲಗೌಡ ವೃತ್ತ (ನಜರ್‌ಬಾದ್)- ಟ್ಯಾಂಕ್ ಬಂಡ್ ರಸ್ತೆ- ಮಹಾರಾಣ ಪ್ರತಾಪ ಸಿಂಹ ವೃತ್ತ- ಮಹಾರಾಣ ಪ್ರತಾಪ ಸಿಂಹ ರಸ್ತೆ- ಸಿ.ಎ.ಆರ್ ಕೇಂದ್ರ ಸ್ಥಾನ “”ವೈ”ಜಂಕ್ಷನ್- ಚಾಮಪ್ಪಾಜಿ ರಸ್ತೆ (ರೇಸ್ ಕೋರ್ಸ್ ಹಿಂಭಾಗದ ರಸ್ತೆ)- ಟ್ರಕ್ ಟರ್ಮಿನಲ್ ರಸ್ತೆ ಜಂಕ್ಷನ್- ಸತ್ಯ ಹರಿಶ್ಚಂದ್ರ ರಸ್ತೆ- ಗಣಪತಿ ಸಚ್ಚಿದಾನಂದ ವೃತ್ತ (ಎಲೆ ತೋಟ)- ಎಡ ತಿರುವು- ನಂಜನಗೂಡು ರಸ್ತೆ- ಜೆ.ಪಿ.ನಗರ ಲಿಂಕ್ ರಸ್ತೆ- ಮಾನಂದವಾಡಿ ರಸ್ತೆ ಮೂಲಕ ಮುಂದೆ ಸಾಗುವುದು ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಾಮರಾಜನಗರ ಕಡೆ ಸಂಚರಿಸುವ ಮಾರ್ಗ
ನಂಜನಗೂಡು, ಚಾಮರಾಜನಗರ ಮತ್ತು ಗುಂಡ್ಲುಪೇಟೆ ಹಾಗೂ ಎಚ್.ಡಿ. ಕೋಟೆ ರಸ್ತೆ ಮೂಲಕ ನಗರಕ್ಕೆ ಆಗಮಿಸುವ ಬಸ್ಸುಗಳು ಶ್ರೀರಾಂಪುರ ರಿಂಗ್ ರಸ್ತೆ ಜಂಕ್ಷನ್- ಮಾನಂದವಾಡಿ ರಸ್ತೆ- ಶ್ರೀನಿವಾಸ ವೃತ್ತ- ಜೆಎಲ್‌ಬಿ ರಸ್ತೆ- ಕಂಸಾಳೆ ಮಹದೇವಯ್ಯ ವೃತ್ತ- ಗಣಪತಿ ಸಚ್ಚಿದಾನಂದ ವೃತ್ತ (ಎಲೆ ತೋಟ) – ರಾಜಹಂಸ ಜಂಕ್ಷನ್- ಟ್ರಕ್ ಟರ್ಮಿನಲ್- ಸೋಮಸುಂದರಂ ವೃತ್ತ (ಎಂ.ಆರ್.ಸಿ)- ಮಹಾರಾಣ ಪ್ರತಾಪ ಸಿಂಹ ವೃತ್ತ- ಟ್ಯಾಂಕ್ ಬಂಡ್ ರಸ್ತೆ- ಸರ್ಕಸ್ ಮೈದಾನ ಜಂಕ್ಷನ್- ಲೋಕರಂಜನ್ ರಸ್ತೆ- ಎಸ್.ಲಿಂಗಣ್ಣ ವೃತ್ತ (ಚಿರಾಗ್)- ಜಯಚಾಮರಾಜೇಂದ್ರ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)- ಬಿ.ಎನ್.ರಸ್ತೆ- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬರುವುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.