ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಗಂಡು ಹುಲಿ ಶವ ಪತ್ತೆ
Team Udayavani, Mar 10, 2022, 9:11 PM IST
ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆ ಚೌಕೂರು ವನ್ಯಜೀವಿ ವಲಯದಲ್ಲಿ 6-7 ವರ್ಷದ ಗಂಡು ಹುಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.
ವಲಯದ ಮತ್ತಿಗೋಡು ಶಾಖೆಯ ಮರಪಾಲ ಚೇಣಿ ಹಡ್ಲು ಹಿಂಬಾಗದ ಆನೆ ಕಂದಕದಲ್ಲಿ ಹುಲಿ ಶವ ಪತ್ತೆಯಾಗಿದೆ. ಇದು ಸ್ವಾಭಾವಿಕವಾಗಿ ಸುಮಾರು ಎರಡು ದಿನಗಳ ಹಿಂದಷ್ಟೆ ಸ್ವಾಭಾವಿಕವಾಗಿ ಮರಣ ಹೊಂದಿದೆ ಎಂದು ಹುಲಿ ಯೋಜನೆ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದ್ದಾರೆ.
ಮರಪಾಲ ಗಸ್ತಿನಲ್ಲಿ ಅರಣ್ಯ ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದ ವೇಳೆ ಹುಲಿ ಸಾವನ್ನಪ್ಪಿರುವುದು ಪತ್ತೆಯಾಗಿದ್ದು, ಮಾಹಿತಿ ಮೇರೆಗೆ ಸ್ಥಳಕ್ಕೆ ಡಿಸಿಎಫ್ ಮಹೇಶ್ ಕುಮಾರ್, ಎಸಿಎಫ್ ಸತೀಶ್, ಆರ್.ಎಫ್.ಓ.ಕಿರಣ್ ಕುಮಾರ್ ಭೇಟಿ ಇತ್ತು ಸ್ಥಳ ಪರಿಶೀಲನೆ ನಡೆಸಿದರು.
ರಾಷ್ಟ್ರೀಯ ಹುಲಿ ಸಂರಕ್ಷಣಾ ನಾಮ ನಿರ್ದೇಶಕ ಬೋಸ್ ಮಾದಪ್ಪ, ಮುಖ್ಯವನ್ಯಜೀವಿ ಪರಿಪಾಲಕರಾದ ಸರಿನ್ ಸುಬ್ಬಯ್ಯರ ಸಮ್ಮುಖದಲ್ಲಿ ಪಶುವೈದ್ಯರಾದ ಡಾ. ರಮೇಶ್, ಡಾ.ಭವಿಷ್ಯಕುಮಾರ್ ಹುಲಿ ಶವಪರೀಕ್ಷೆ ನಡೆಸಿ, ದೇಹದ ಮಾದರಿಗಳನ್ನು ಸಂಗ್ರಹಿಸಿದ ನಂತರ ಸ್ಥಳದಲ್ಲೇ ಹುಲಿಯ ಶವವನ್ನು ಸುಟ್ಟು ಹಾಕಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.