ನಾಗರಹೊಳೆ: ಹುಲಿ ಗಣತಿ ಅಂಕಿ-ಅಂಶ ಸಂಗ್ರಹ
Team Udayavani, Nov 19, 2017, 12:15 PM IST
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಕ್ಯಾಮರಾ ಆಧಾರಿತ ಹುಲಿ ಗಣತಿ ಎಲ್ಲಾ 8 ವಲಯಗಳಲ್ಲೂ ನಡೆಸಲಾಗುತ್ತಿದ್ದು ಅಂಕಿ ಅಂಶಗಳನ್ನು ದಾಖಲಿಸಲಾಗುತ್ತಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಎಲ್ಲಾ 8 ವಲಯಗಳಲ್ಲೂ ಕಳೆದ ಮೂರ್‍ನಾಲ್ಕು ದಿನಗಳಿಂದ ಸಿಬ್ಬಂದಿಗಳು 402 ಕ್ಯಾಮರಾ ಅಳವಡಿಸಿದ್ದು, ಎರಡು ವರ್ಷಕ್ಕಿಂತ ಕಡಿಮೆ ಇರುವ ಚಿಕ್ಕ ಹುಲಿಗಳನ್ನು ಎಣಿಕೆ ವೇಳೆ ಗಣನೆಗೆ ತೆಗೆದುಕೊಳ್ಳದೆ ಉಳಿದಂತೆ ಹುಲಿಗಳನ್ನು ಎಣಿಕೆ ಮಾಡಲಾಗುತ್ತದೆ.
2018ರಲ್ಲಿ ನಡೆಯುವ ಮುಖ್ಯ ಹುಲಿಗಣತಿ ಅಂಗವಾಗಿ ಇದೀಗ ಕ್ಯಾಮರಾ ಟ್ಯಾಪ್ ಬಳಸಿ ನ.15 ರಿಂದ 2 ತಿಂಗಳ ಕಾಲ ನಿರಂತರ ಗಣತಿ ನಡೆಸಿ, ಹುಲಿಗಳ ತಲೆ ಎಣಿಕೆ ಮಾಹಿತಿ ಆಧರಿಸಿ ವೈಜ್ಞಾನಿಕವಾಗಿ ಹುಲಿಗಳ ಸಂಖ್ಯೆ ಗುರುತಿಸುವ ಕಾರ್ಯಾರಂಭಗೊಂಡಿದೆ.
ಅಳವಡಿಸಿರುವ ಕ್ಯಾಮರಾಗಳಿಂದ 2-3 ದಿನಕ್ಕೊಮ್ಮೆ ಕ್ಯಾಮರಾ ಚಿಪ್‌ಗ್ಳಿಂದ ಡಾಟಾ ಸಂಗ್ರಹಿಸಿ, ಕೇಂದ್ರ ಕಚೇರಿಗೆ ಕಳುಹಿಸುವುದು. ಆನಂತರ ಕ್ರೋಡೀಕರಿಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕಳುಹಿಸಿ ಹುಲಿಗಳ ಸಂಖ್ಯೆಯನ್ನು ಅಂತಿಮಗೊಳಿಸಲಾಗುತ್ತದೆ.
ನಾಗರಹೊಳೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಮಣಿಕಂಠನ್, ಎಸಿಎಫ್ಗಳಾದ ಪ್ರಸನ್ನಕುಮಾರ್, ಪೌಲ್‌ಅಂಟೋಣಿ, ಪೂವಯ್ಯ ಮಾರ್ಗದರ್ಶನದಲ್ಲಿ ಕಲ್ಲಹಳ್ಳದ ವಲಯ ಅರಣ್ಯಾಧಿಕಾರಿ ಶಿವರಾಂ, ವೀರನಹೊಸಹಳ್ಳಿ ಮಧುಸೂದನ್, ನಾಗರಹೊಳೆ ಅರವಿಂದ್, ಮತ್ತಿಗೋಡು ವಲಯದ ಕಿರಣ್‌ಕುಮಾರ್, ಹುಣಸೂರು ವಲಯದ ಸುರೇಂದ್ರ,
ಡಿ.ಬಿ.ಕುಪ್ಪೆ ಸುಬ್ರಹ್ಮಣ್ಯ ಸೇರಿ 8 ವಲಯಗಳಲ್ಲಿಯೂ ಆಯಾ ಆರ್‌ಎಫ್ಒಗಳ ನೇತತ್ವದಲ್ಲಿ ತರಬೇತಿ ಪಡೆದ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಕಲ್ಲಹಳ್ಳ ವಲಯದ 28, ವೀರನಹೊಸಹಳ್ಳಿ ವಲಯದ 22 ಕಡೆ ಸೇರಿದಂತೆ ಉದ್ಯಾನವನದ ಎಲ್ಲೆಡೆ 201 ಕಡೆ ಸೇರಿದಂತೆ ತಲಾ ಎರಡು ಅತ್ಯಾಧುನಿಕ ತಂತ್ರಜ್ಞಾನವುಳ್ಳ 402 ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಹುಲಿ ಪತ್ತೆ ಕಾರ್ಯ ಹೇಗೆ: ಪ್ರತಿ ವಲಯದ ಹುಲಿಗಳ ಆವಾಸ ಸ್ಥಾನ-ಓಡಾಟ ಹಾಗೂ ವಿಸ್ತೀರ್ಣ ಗುರುತಿಸಿ ಹುಲಿಗಳು ಓಡಾಡುವ ಮಾರ್ಗದಲ್ಲಿ ಎದುರು-ಬದುರಾಗಿ ಕ್ಯಾಮರ ಅಳವಡಿಸಲಾಗುತ್ತದೆ. ಅಲ್ಲಿ ಆಧುನಿಕ ತಂತ್ರಜ್ಞಾನ ಬಳಸಿದ ಕ್ಯಾಮರಾದಲ್ಲಿ ಎಲ್ಲಾ ಪ್ರಾಣಿಯ ಓಡಾಟದ ನಿಖರ ಸಮಯ ದಾಖಲಾಗಲಿದೆ.
3-4 ದಿನಕ್ಕೊಮ್ಮೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕ್ಯಾಮರಾದಿಂದ ಚಿಪ್ ಹೊರತೆಗೆದು ಸ್ಥಳದಲ್ಲೇ ಇಲಾಖೆ ವತಿಯಿಂದ ನೀಡಿರುವ ಲ್ಯಾಪ್ ಟ್ಯಾಪ್‌ನಲ್ಲೇ ಡಾಟಾ ಸಂಗ್ರಹಿಸಿ, ಅಲ್ಲೇ ಚಿಪ್ ಅಳವಡಿಸುತ್ತಾರೆ. ಒಂದೇ ಹುಲಿ 2-3 ಕಡೆಗಳಲ್ಲಿ ಕ್ಯಾಮರಾ ಟ್ರ್ಯಾಪ್ ಆಗಿದ್ದಲ್ಲಿ ಅದನ್ನೂ ಗುರುತಿಸುತ್ತಾರೆ.
ಈ ಹಿಂದೆ ಹಲವು ಎನ್‌ಜಿಒ ಸೇರಿದಂತೆ ಇತರರ ಸಹಕಾರದಿಂದ ಹುಲಿ ಗಣತಿ ಕಾರ್ಯ ನಡೆಯುತ್ತಿತ್ತು. ಕಳೆದ 3 ವರ್ಷಗಳಿಂದ ರಾಷ್ಟ್ರೀಯ ಹುಲಿ ಪ್ರಾಧಿಕಾರದ ವತಿಯಿಂದಲೇ ಇಲಾಖೆ ಅಧಿಕಾರಿಗಳು, ಆಯ್ದ ಸಿಬ್ಬಂದಿಗೆ ತರಬೇತಿ ನೀಡಿ ಕ್ಯಾಮರಾ ಟ್ರಾಪಿಂಗ್ ಗಣತಿ ನಡೆಸಲಾಗುತ್ತಿದೆ.
* ಸಂಪತ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.