ಬೀದಿಯಲ್ಲಿ ನಿಂತು ನಮಗೆ ಪಾಠ ಮಾಡಬೇಡಿ: ಪ್ರತಾಪ ಸಿಂಹಗೆ ಬಿಜೆಪಿ ಶಾಸಕ ನಾಗೇಂದ್ರ ತಿರುಗೇಟು
Team Udayavani, Jan 30, 2022, 3:40 PM IST
ಮೈಸೂರು: ಗ್ಯಾಸ್ ಪೈಪ್ ಲೈನ್ ವಿಚಾರದಲ್ಲಿ ಆರಂಭವಾದ ಮೈಸೂರು ಬಿಜೆಪಿ ಶಾಸಕರು ಹಾಗು ಸಂಸದರ ನಡುವಿನ ವಾಕ್ಸಮರ ಇನ್ನೂ ಮುಂದುವರಿದದೆ. ಸಂಸದ ಪ್ರತಾಪ್ ಸಿಂಹ ಆರೋಪಗಳಿಗೆ ಶಾಸಕ ಎಲ್ ನಾಗೇಂದ್ರ ತಿರುಗೇಟು ನೀಡಿದ್ದು, “ಬೀದಿಯಲ್ಲಿ ನಿಂತು ನಮಗೆ ಪಾಠ ಮಾಡಬೇಡಿ” ಎಂದಿದ್ದಾರೆ.
ಶಾಸಕ ನಾಗೇಂದ್ರಗೆ ತನ್ನ ಹುಟ್ಟೂರಲ್ಲೇ ಮುನ್ನಡೆ ಸಿಕ್ಕಿಲ್ಲವೆಂಬ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ನಾಗೇಂದ್ರ, “ಸಂಸದರು ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯರನ್ನು ಗೆಲ್ಲಿಸಿದ್ದಾರೆ. 7 ವರ್ಷದಿಂದ ನೀವೇ ಸಂಸದರಾಗಿದ್ದೀರಾ, ಮೊದಲು ಅದನ್ನು ಹೇಳಿ. ನಾನು ನನ್ನ ಹುಟ್ಟೂರಿನಲ್ಲಿ ಪಾಲಿಕೆ ಸದಸ್ಯನಾಗಿದ್ದೆ. ನೀವು ನಮ್ಮ ಊರಲ್ಲಿ ಜಿಲ್ಲಾ ಪಂಚಾಯ್ತಿ ಗೆದ್ದು ಬಂದಿದ್ದರೆ ನಿಮಗೆ ಶರಣಾಗುತ್ತೇನೆ. ನಾನು ನಿಮ್ಮ ರೀತಿ ದಿಢೀರ್ ಅಂತಾ ಬಂದು ಪದವಿ ಪಡೆದವನಲ್ಲ. 25 ವರ್ಷದಿಂದ ಜನಪ್ರತಿನಿಧಿಯಾಗಿದ್ದೇನೆ” ಎಂದರು.
ನನ್ನ ಲೀಡ್ ಕಡಿಮೆಯಾಗಲು ಒಂದೇ ಊರಿನ ಇಬ್ಬರು ಅಭ್ಯರ್ಥಿಗಳು ಕಾರಣ. ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಲೀಡ್ ಪಡೆಯುತ್ತೇನೆ. ನಿಮ್ಮ ಚುನಾವಣೆಯಲ್ಲಿ ನನ್ನ ಮುಖ, ನನ್ನ ಅಭಿವೃದ್ಧಿ ನೋಡಿ ನಿಮಗೆ ಲೀಡ್ ಕೊಟ್ಟಿದ್ದು ಎಂದು ತಿರುಗೇಟು ನೀಡಿದರು.
ನನ್ನ ಕ್ಷೇತ್ರದಲ್ಲಿ ಪಾಲಿಕೆ ಸದಸ್ಯರು ಸೋಲಲು ಕಾರಣ ನೀವು. ನೀವೇ ಅದರ ಜವಾಬ್ದಾರಿ ಪಡೆದು ಟಿಕೆಟ್ ನೀಡಿದ್ದೀರಿ. ಅದರಲ್ಲಿ ಎಷ್ಟು ಜನರನ್ನು ಗೆಲ್ಲಿಸಿದ್ದೀರಾ? ಎಂ.ಎಲ್.ಸಿ ಚುನಾವಣೆಯ ಉಸ್ತುವಾರಿಯನ್ನು ನೀವೇ ವಹಿಸಿದ್ದಿರಿ. ಅದನ್ನು ಗೆಲ್ಲಿಸಿದ್ದೀರಾ? ನಾನು ನಿಮ್ಮಷ್ಟು ವಿದ್ಯಾವಂತ ಬುದ್ದಿವಂತ ಅಲ್ಲ. ಆದರೆ ಬೀದಿಯಲ್ಲಿ ನಿಂತು ನಮಗೆ ಪಾಠ ಮಾಡಬೇಡಿ ಎಂದು ಶಾಸಕ ಎಲ್ ನಾಗೇಂದ್ರ ಗುಡುಗಿದರು.
ಇದನ್ನೂ ಓದಿ:ರಸ್ತೆ ಅಗಲೀಕರಣ, ಪೊಲೀಸ್ ಬಿಗಿ ಬಂದೋಬಸ್ತ್ : ಜೆಸಿಬಿಯಿಂದ 60 ಅಕ್ರಮ ಕಟ್ಟಡಗಳ ತೆರವು
ಗ್ಯಾಸ್ ಪೈಪ್ ಲೈನ್ ಅಳವಡಿಕೆ ವಿಚಾರದಲ್ಲಿ ಕಂಪನಿಯವರು ವೈಯಕ್ತಿಕವಾಗಿ ಭೇಟಿ ಮಾಡಿಲ್ಲದಿರಬಹುದು. ಅದಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿರಬಹುದು. ಸಂಸದ ಪ್ರತಾಪಸಿಂಹ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ನಾಗೇಂದ್ರ, “ ಚಾಮುಂಡೇಶ್ವರಿಯ ಆಣೆಯಾಗಿಯೂ ಇದು ಕಮಿಷನ್ ಗಾಗಿ ಅಲ್ಲ. ಜನರ ಹಿತದೃಷ್ಟಿಯಿಂದಾಗಿ ನಾನು ಮಾತನಾಡುತ್ತಿದ್ದೇನೆ. ನನಗೆ ಕಮಿಷನ್ ವಿಚಾರ ಗೊತ್ತಿಲ್ಲ. ಇದು ನನ್ನೂರು, ಇಲ್ಲಿನ ಸಮಸ್ಯೆಗಳು ನನಗೆ ಚೆನ್ನಾಗಿ ಗೊತ್ತಿವೆ. ಗ್ಯಾಸ್ ಪೈಪ್ ಲೈನ್ ಅಳವಡಿಕೆ ಯೋಜನೆ ಕಾಮಗಾರಿ ವೇಳೆ ಅನಾಹುತವಾದರೆ ಯಾರು ಜವಾಬ್ದಾರಿ? ಬೇರೆ ಬೇರೆ ಕಡೆ ಅನಾಹುತಗಳಾಗಿವೆ. ಆಗುವ ಅನಾಹುತಕ್ಕೆ ಯಾರು ಹೊಣೆ ಎಂದು ಕೇಳಿದರೆ ತಪ್ಪಾ? ಸಂಸದ ಪ್ರತಾಪ ಸಿಂಹಗೆ ಯಾಕೆ ಆ ಕಂಪನಿಯ ಮೇಲೆ ಒಲವು? ಕಂಪನಿಯವರು ನೇರವಾಗಿ ನಗರಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysore: ಹಾಡಹಗಲೇ ಕಾರು ಅಡ್ಡಗಟ್ಟಿ ರಾಬರಿ; ಹಣದೊಂದಿಗೆ ಕಾರು ಕೂಡಾ ದೋಚಿದರು!
Hunasur: ಪ್ರೇಯಸಿಗೆ ಚಿನ್ನ ಖರೀದಿಸಲು ಎಟಿಎಂ ಗೆ ತುಂಬಬೇಕಿದ್ದ ಹಣ ಎಗರಿಸಿದ ಯುವಕ
Mysuru ಮುಟ್ಟುಗೋಲು: 142 ನಿವೇಶನ ಮಾಹಿತಿ ಬಹಿರಂಗಕ್ಕೆ ಸ್ನೇಹಮಯಿ ಕೃಷ್ಣ ಒತ್ತಾಯ
ತ್ರಿವೇಣಿ ಸಂಗಮ ಕುಂಭಮೇಳಕ್ಕೆ 10 ಕೋಟಿ ರೂ. ಪ್ರಸ್ತಾವನೆ: ಸಚಿವ ಮಹದೇವಪ್ಪ
Mysuru: ಸಿದ್ದರಾಮಯ್ಯ ಹೆಸರು ದುರ್ಬಳಕೆಗೆ ಇ.ಡಿ. ಮೂಲಕ ಯತ್ನ; ಯತೀಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.