Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
ಚಾಮರಾಜಪೇಟೆ ಕೆಚ್ಚಲು ಕೊಯ್ದ ಪ್ರಕರಣ ಬಳಿಕ ಮತ್ತೊಂದು ಅಮಾನವೀಯ ಕೃತ್ಯ
Team Udayavani, Jan 16, 2025, 9:44 PM IST
ನಂಜನಗೂಡು: ರಾಜ್ಯದ ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಮಾಸುವ ಮುನ್ನವೇ ಧಾರ್ಮಿಕ ಕ್ಷೇತ್ರ ನಂಜನಗೂಡಿನಲ್ಲಿ ಕರುವಿನ ಬಾಲವನ್ನು ಮಾರಕಾಸ್ತ್ರಗಳಿಂದ ಕತ್ತರಿಸಿರುವ ಅಮಾನವೀಯ ಕೃತ್ಯ ನಡೆದಿದೆ.
ಗುರುವಾರ ಮುಂಜಾನೆ ನಗರದ ಹಳ್ಳದಕೇರಿ ಬಡಾವಣೆ ಸರಕಾರಿ ಶಾಲೆಯ ಮುಂಭಾಗದಲ್ಲಿ ಅರ್ಧದಷ್ಟು ಬಾಲ ಕತ್ತರಿಸಲ್ಪಟ್ಟು ರಕ್ತದ ಮಡುವಿನಲ್ಲಿ ಬಿದ್ದಿದ್ದ ಕರುವನ್ನು ಗಮನಿಸಿದ ಭಕ್ತರೊಬ್ಬರು ಕೂಡಲೇ ಪಶು ವೈದ್ಯರನ್ನು ಸಂಪರ್ಕಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಬಾಲದ ಬಹುತೇಕ ಭಾಗ ತುಂಡಾಗಿದ್ದ ಕಾರಣ ವೈದ್ಯರ ಸಲಹೆ ಮೇರೆಗೆ ಸಂಪೂರ್ಣವಾಗಿ ತೆಗೆಯಲಾಗಿದ್ದು, ಅಧಿಕ ರಕ್ತಸ್ರಾವದಿಂದ ಕರು ನಿತ್ರಾಣಗೊಂಡಿದ್ದು, ಗ್ಲುಕೋಸ್ ಮತ್ತು ಔಷಧ ನೀಡಿ ಆರೈಕೆ ಮಾಡಿ ಚಿಕಿತ್ಸೆ ಮುಂದುವರಿಸಲಾಗಿದೆ.
ಭಕ್ತರ ವೃಂದದಿಂದ ಪ್ರತಿಭಟನೆ:
ಪ್ರಕರಣ ಜರುಗಿದ ಕೆಲವೇ ಹೊತ್ತಿನಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ಭಕ್ತರ ವೃಂದದವರು ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿ ಸರಕಾರ ಮತ್ತು ದೇಗುಲ ಆಡಳಿತದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಅನಾದಿಕಾಲದಿಂದಲೂ ಗೋವುಗಳನ್ನು ಶ್ರೀಕಂಠೇಶ್ವರ ಸ್ವಾಮಿಗೆ ಹರಕೆ ಬಿಡುವುದು ರೂಢಿ. ಈ ಹಸುಗಳಿಗೆ ಲಿಂಗಾಕಾರದ ಮುದ್ರೆ ಒತ್ತಲಾಗುತ್ತಿತ್ತು. ಈ ಗೋವುಗಳು ಲಾಲನೆ ಪಾಲನೆ ಇಲ್ಲದೆ ಬೀಡಾಡಿ ದನಗಳಾಗಿ ನಂಜನಗೂಡಿನ ಸುತ್ತ ಸುತ್ತಾಡುತ್ತಿವೆ. ಈಗ ಲಿಂಗಾಕಾರದ ಮುದ್ರೆಯೂ ಒತ್ತುತ್ತಿಲ್ಲ ಈ ಹಸುಗಳ ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಲಪಟಾಯಿಸುವ ಯತ್ನ ಮಾಡುತ್ತಿದ್ದು, ಇದಕ್ಕೆ ಅಧಿಕಾರಿಗಳ ಕುಮ್ಮಕ್ಕು ಇದೆ ಎಂದು ಗಂಭೀರ ಆರೋಪ ಮಾಡಿದರು.
ತನಿಖೆಗೆ 2 ತಂಡ ರಚನೆ
ತನಿಖೆಗಾಗಿ ಡಿವೈಎಸ್‌ಪಿ ರಘು ನೇತೃತ್ವದಲ್ಲಿ 2 ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ತಾಕತ್ತಿದ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ: ರೇಣುಕಾಚಾರ್ಯ
Thirthahalli: ನೇಣಿಗೆ ಶರಣಾದ ಹೋಟೆಲ್ ಉದ್ಯಮಿ… ಕಾರಣ ನಿಗೂಢ
ಬಸ್ಸಿನಲ್ಲಿ ಬಿಟ್ಟು ಹೋದ ಹಣದ ಚೀಲವನ್ನು ಮಹಿಳೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ
Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ
Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.