ನಂಜನಗೂಡಿಗೆ ಜಾತಿ ರಾಜಕಾರಣಿಗಳ ದಂಡು


Team Udayavani, Mar 22, 2017, 1:10 PM IST

mys1.jpg

ನಂಜನಗೂಡು: ರಾಜ್ಯದ ಕೆಲವೇ ಕೆಲವು ಕ್ಷೇತ್ರಗಳಗಳಲ್ಲಿ ನಡೆಯಬೇಕಾದ ಉಪ ಚುನಾವಣೆ ಈಗ ನಂಜನಗೂಡಿ ನಲ್ಲೂ ನಡೆಯುವಂತಾಗಿದ್ದು ಈ ಮೂಲಕ ಜಾತಿ ರಾಜಕಾರಣಿಗಳ ದಂಡು ಕಾಣಿಸಿಕೊಂಡಿದೆ. ಕಳೆದ ನಾಲ್ಕು ವರ್ಷಗಳಿಂದ ನೆನಪಾಗದಿದ್ದ ಜಾತಿ ಈಗ ಇಲ್ಲಿ ಎದ್ದು ತಾಂಡವ ನರ್ತನ ಮಾಡತೊಡಗಿದ್ದು, ಜಾತ್ಯತೀತ ರಾಷ್ಟ್ರಕ್ಕೆ ಸೆಡ್ಡು ಹೊಡೆಯುವಂತಿವೆ.

ಬಾಯಲ್ಲಿ ಜಾತ್ಯತೀತರು ಎಂದು  ಹಸಿ ಸುಳ್ಳು ಹೇಳವ ರಾಜಕಾರಣಿಗಳು ಈ ಉಪ ಚುನಾವಣೆಯ ಗೆಲುವಿಗಾಗಿ ಒಳಗೊಳಗೆ ಜಾತಿ ನಾಯಕರ ಪಟ್ಟಿ ಸಿದ್ಧಪಡಿಸಿ ಅವರನ್ನು ನಂಜನಗೂಡಿಗೆ ಕರೆತಂದು ಇಲ್ಲಿನ ಜನತೆ ಮರೆತು ಹೋಗಿದ್ದ ಜಾತಿ ಎಂಬ ಜಾÌಲೆಗೆ ತುಪ್ಪ ಸುರಿದು ಪ್ರಜ್ವಲಿಸುವ ಅನಾಹುತಕ್ಕೇ ಕಾರಣರಾಗುತ್ತಿದ್ದಾರೆ.

ಯಾವ ಪಕ್ಷವೂ ಇನ್ನೊಂದಕ್ಕೆ ಕಡಿಮೆ ಇಲ್ಲ ಎಂಬಂತೆ ವರ್ತಿಸುತ್ತಾ ಆಯಾ ಜಾತಿಯ ಮತಗಳ ಪಟ್ಟಿ ಮಾಡಿ ನಾಯಕರನ್ನು ಆಯಾ ಪಂಗಡದ ಬೀದಿಗೆ ಸಿಮಿತ ಗೊಳಿಸುತ್ತ ನಿಜವಾದ ಪ್ರಜಾಪ್ರಭುತ್ವಕ್ಕೆ ಅಪಚಾರ ವೆಸಗಲಾರಂಭಿಸಿದ್ದಾರೆ.

ಒಟ್ಟಾರೆ ಜನತೆಯ ಅಭಿವೃದ್ಧಿ ಸಾಮಾಜಿಕ ಕಳಕಳಿಯ ಮೇಲೆ ಪ್ರಾಮಾಣಿಕತೆ ಎಂಬ ದೀಪ ಬೆಳಗಿಸಿ ಮತ ಯಾಚಿಸಬೇಕಾಗಿದ್ದ ನಮ್ಮ ಜನ ಪ್ರತಿನಿಧಿಗಳು ಜಾತಿಯ ವಿಷಬೀಜವನ್ನು ತಾವೇ ಬಿತ್ತಿ  ಬೆಳದು ಅದರ ನಂಜನ್ನು ಜನತೆಗೆ ಕುಡಿಸುತ್ತ ತಾವು ಮಾತ್ರ ಗೆಲುವೆಂಬ ಅಮೃತ ಸವಿಯುವ ಕನಸು ಕಾಣುತ್ತಿದ್ದಾರೆ.

ಈಗ ಕ್ಷೇತ್ರದಲ್ಲಿ ಜಾತಿ ರಾಜಕಾರಣಿಗಳ ದಂಡು  ಕಾಣುವಂತಾಗಿದೆ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ಮಾಜಿ ಸಚಿವರಾದ ಸೋಮಣ್ಣ, ಶೋಭಾ ಕರಂದ್ಲಾಜೆ, ರಾಮದಾಸ್‌, ವಿಜಯ ಶಂಕರ, ಹರತಾಳು ಹಾಲಪ್ಪ, ಕೋಟೆ ಶಿವಣ್ಣ , ಅರವಿಂದ ಲಿಂಬಾವಳಿ, ಬಿ.ಜೆ ಪುಟ್ಟಸ್ವಾಮಿ.

ಕಾಂಗ್ರೆಸ್‌ನಿಂದ ಅಭ್ಯರ್ಥಿ ಕೇಶವ ಮೂರ್ತಿ ಪರವಾಗಿ ಈಗಾಗಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ,ರಾಜಾÂಧ್ಯಕ್ಷ ಪರಮೇಶ್ವರ, ಕಾರ್ಯಾಧ್ಯಕ್ಷ ದಿನೇಶ ಗುಂಡುರಾವ್‌, ಸಚಿವರಾದ ಎಚ್‌.ಸಿ ಮಹದೇವಪ್ಪ, ಸತೀಶ ಜಾರಕಿ ಹೊಳಿ, ಬಿ.ಕೆ ಚಂದ್ರಶೇಖರ ಇತರರು ನಂಜನಗೂಡಿನಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದು ಮುಂದಿನ ದಿಗಳಲ್ಲಿ ಇನ್ನಷ್ಟು ಜಾತಿ ನಾಯಕರ ದಂಡು ಇಲ್ಲಿ ಕಾಣಸಿಗಲಿದೆ ಎಂದು ಹೇಳಲಾಗುತ್ತಿದೆ.

ಟಾಪ್ ನ್ಯೂಸ್

Pakshikere-1

Kinnigoli: ಶೌಚಾಲಯದ ಕಮೋಡ್‌ನ‌ಲ್ಲಿ ಮೊಬೈಲ್‌ ಪತ್ತೆ!, ಅಡವಿಟ್ಟ ಚಿನ್ನಾಭರಣ ಎಲ್ಲಿ ಹೋಯಿತು?

Mangaluru-VV

Mangalore University: ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಹೊರೆ!

Loka-raid

Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

1-aaa

US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

BJP-JDS-congress-Party

Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ

Chalavadi-Ashok

Controversy: ಅಂಬೇಡ್ಕರ್‌ ಇಸ್ಲಾಂ ಸ್ವೀಕಾರ ವಿಚಾರ: ಖಾದ್ರಿ ಹೇಳಿಕೆಗೆ ಬಿಜೆಪಿ ಆಕ್ರೋಶ

By-election: ರಾಹುಲ್‌ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?

By-election: ರಾಹುಲ್‌ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Waqf Board Election: ಸಚಿವ ಜಮೀರ್‌ ನೇತೃತ್ವದಲ್ಲಿ ಸಭೆ

Waqf Board Election: ಸಚಿವ ಜಮೀರ್‌ ನೇತೃತ್ವದಲ್ಲಿ ಸಭೆ

ಮುಡಾಗೆ ದೇಸಾಯಿ ಆಯೋಗ ಭೇಟಿ, ದಾಖಲೆಗಳ ಪರಿಶೀಲನೆ: 4 ತಿಂಗಳ ಬಳಿಕ ಮುಡಾ ಕಚೇರಿಗೆ ಆಗಮನಮುಡಾಗೆ ದೇಸಾಯಿ ಆಯೋಗ ಭೇಟಿ, ದಾಖಲೆಗಳ ಪರಿಶೀಲನೆ: 4 ತಿಂಗಳ ಬಳಿಕ ಮುಡಾ ಕಚೇರಿಗೆ ಆಗಮನ

ಮುಡಾಗೆ ದೇಸಾಯಿ ಆಯೋಗ ಭೇಟಿ, ದಾಖಲೆಗಳ ಪರಿಶೀಲನೆ: 4 ತಿಂಗಳ ಬಳಿಕ ಮುಡಾ ಕಚೇರಿಗೆ ಆಗಮನ

Yathindra Siddaramaiah: ನಾವು ಯಾವ ತನಿಖೆಗೂ ಹೆದರಲ್ಲ

Yathindra Siddaramaiah: ನಾವು ಯಾವ ತನಿಖೆಗೂ ಹೆದರಲ್ಲ

15-

Hunsur: ಹಾಡಹಗಲೇ ಹಸುವಿನ ಮೇಲೆ ದಾಳಿ ಮಾಡಿದ ಹುಲಿ; ಭಯಭೀತರಾದ ಕೃಷಿಕರು

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Pakshikere-1

Kinnigoli: ಶೌಚಾಲಯದ ಕಮೋಡ್‌ನ‌ಲ್ಲಿ ಮೊಬೈಲ್‌ ಪತ್ತೆ!, ಅಡವಿಟ್ಟ ಚಿನ್ನಾಭರಣ ಎಲ್ಲಿ ಹೋಯಿತು?

Mangaluru-VV

Mangalore University: ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಹೊರೆ!

Loka-raid

Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

1-aaa

US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

BJP-JDS-congress-Party

Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.