Nanjangud; ನಂಜುಂಡೇಶ್ವರ ದೇವಾಲಯದ ಮುಂಭಾಗದಲ್ಲಿ ಭಕ್ತರಿಂದ ಬೃಹತ್ ಪ್ರತಿಭಟನೆ
3ನೇ ದಿನಕ್ಕೆ ಕಾಲಿಟ್ಟ ಅಂದಕಾಸುರ ಸಂಹಾರ ಆಚರಣೆ ವಿವಾದ, ಎಂಜಲು ನೀರು ಎರಚಿದವರನ್ನು ಕೂಡಲೆ ಬಂಧಿಸಿ
Team Udayavani, Dec 28, 2023, 9:45 PM IST
ನಂಜನಗೂಡು: ಅಂದಕಾಸುರ ಸಂಹಾರ ಆಚರಣೆ ವಿವಾದ 3ನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ನಂಜುಂಡೇಶ್ವರನ ಭಕ್ತರಿಂದ ದೇವಾಲಯದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ರಾತ್ರಿ ಅಂದಕಾಸುರ ಸಂಹಾರ ವಿಚಾರವಾಗಿ ನಡೆದ ವಿವಾದ ಬುಧವಾರ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಲೇರಿ ಎರಡು ಗುಂಪುಗಳ ಸದಸ್ಯರ ಮೇಲೆ ಪ್ರಕರಣಗಳು ದಾಖಲಾಗಿದ್ದವು.
ಮುಂದುವರೆದು ಗುರುವಾರ ಕಂಠೇಶ್ವರನ ಉತ್ಸವ ಮೂರ್ತಿಗೆ ಅಪವಿತ್ರ ನೀರು ಎರಚಿದವರನ್ನು ಕೂಡಲೇ ಬಂಧಿಸಿ ತಮಗೆ ನ್ಯಾಯ ಕೊಡಿಸಬೇಕೆಂದು ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ದೇವಾಲಯದ ಮುಂಭಾಗ ಪ್ರತಿಭಟನೆ ನಡೆಸಿದರು. ಮೈಕ್ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಭಕ್ತರ ನಡುವೆ ತಳ್ಳಾಟ ನೂಕಾಟ್ಟ ಉಂಟಾಗಿ ಕೆಲ ಸಮಯ ದೇವಾಲಯದ ಆವರಣ ಉದ್ವಿಗ್ನಗೊಂಡಿತು. ಭಕ್ತಾದಿಗಳು ಪೊಲೀಸರ ವಿರುದ್ಧ ಧಿಕ್ಕಾರ ಕೂಗುತ್ತಾ ಕೂಡಲೇ ಡಿಸಿ ಅವರು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು. ದೇವಾಲಯದ ಆಗಮಿಕರನ್ನು ಒಳಗೊಂಡಂತೆ ಪುರೋಹಿತ ವರ್ಗ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದೇವಾಲಯದ ಹಿರಿಯ ಅರ್ಚಕರಾದ ಶ್ರೀಕಂಠ ದೀಕ್ಷಿತ್, ಸಿನಿಮಾಗಳಲ್ಲಿ ನಾವು ನಾವು ನೋಡಿದ್ದೆವು ಧಾರ್ಮಿಕ ಕಾರ್ಯಕ್ರಮಗಳಿಗೆ ಅಸುರರು ತಡೆ ನೀಡುವುದನ್ನ, ನಂಜನಗೂಡಿನಲ್ಲಿ ಮೊನ್ನೆ ಆ ಪ್ರಸಂಗ ನಡೆದೇ ಮೂರ್ತಿಗೆ ಎಂಜಲು ನೀರನ್ನು ಎರಚಿ ಅಪವಿತ್ರ ಗೊಳಿಸಿರುವುದು ಅವಮಾನಕರವಾದ ವಿಷಯ. ಆದರೆ ಇತಿಹಾಸ ಪ್ರಸಿದ್ಧ ನಂಜನಗೂಡಿನಲ್ಲಿ ಇಂತಹ ಘಟನೆ ನಡೆಯುತ್ತದೆ ಎಂದು ನಾನು ಈ ಜನ್ಮದಲ್ಲಿ ಭಾವಿಸಿರಲಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಜಾತ್ರೆ ಹುಣ್ಣಿಮೆ ಪೂಜೆಗಳು ಇತ್ಯಾದಿ ಉತ್ಸವಗಳು ನಡೆಯುತ್ತದೆ.ಇಂತಹ ಘಟನೆ ಮರುಕಳಿಸಿದರೆ ನಿಜಕ್ಕೂ ಅವಮಾನವಾಗುತ್ತದೆ ಎಂದು ಕಣ್ಣೀರಿಟ್ಟರು.
ಪ್ರಧಾನ ಅರ್ಚಕ ನಾಗಚಂದ್ರ ದಿಕ್ಷೀತ್ ಮಾತಾನಾಡಿ, ಅಪವಿತ್ರಗೊಂಡಿರುವ ಶ್ರೀಕಂಠೇಶ್ವರನ ಉತ್ಸವ ಮೂರ್ತಿಯನ್ನು ಪವಿತ್ರಗೊಳಿಸಲು ನಾನ ಪೂಜೆಗಳನ್ನು ಪಂಚಗವ್ಯ ಮತ್ತು ಪುಣ್ಯಾಹಗಳನ್ನು ಮಾಡುತ್ತೇವೆ. ಪ್ರಾಯಶ್ಚಿತ ಪೂಜೆ ಶೋಷಶೋಪಚಾರ ಪೂಜೆ ನಂತರ ಉತ್ಸವ ಮೂರ್ತಿ ಪವಿತ್ರ ಗೊಳ್ಳುತ್ತದೆ ಎಂದರು.
ಪ್ರತಿಭಟನಾಕಾರರು ಎಲ್ಲರೂ ಚರ್ಚಿಸಿ, ಶ್ರೀ ಶ್ರೀಕಂಠೇಶ್ವರ ಭಕ್ತ ಮಂಡಳಿ ವತಿಯಿಂದ ಗಿರೀಶ್ ಮಾತನಾಡಿ ಇನ್ನು ಎರಡು ದಿನದ ಒಳಗಡೆ ಕೃತ್ಯ ಎಸಗಿದವರನ್ನು ಬಂಧಿಸಬೇಕು ನಮ್ಮ ಮೇಲೆ ಆಗಿರೋ ಎಫ್ ಐಆರ್ ಅನ್ನು ತೆರೆವುಗೊಳಿಸಬೇಕು. ಇದು ಸರಕಾರಿ ಕಾರ್ಯಕ್ರಮ. ದೇವರ ಮೇಲೆ ಈ ರೀತಿ ಆಗಿರುವುದು ಅಪರಾಧ. ಮುಂದೆ ದೊಡ್ಡ ಜಾತ್ರೆ ಇದೆ ಲಕ್ಷಾಂತರ ಜನ ಸೇರುತ್ತಾರೆ ಆ ಸಮಯದಲ್ಲಿ ದೇವರಿಗೆ ಚಿನ್ನಾಭರಣ ಧರಿಸುತ್ತಾರೆ ಇಂಥ ಘಟನೆಗಳು ನಡೆಯದತೆ ಎಚ್ಚರಿಕೆ ವಹಿಸಬೇಕುಎಂದರು.
ಪ್ರತಿಭಟನ ಸ್ಥಳಕ್ಕೆ ಆಗಮಿಸಿದ ಎಸಿ ರಕ್ಷಿತ್ ಮತ್ತು ಎಸ್ ಪಿ ಡಾ ನಂದಿನಿ ಮಾತನಾಡಿ ಇದರ ಬಗ್ಗೆ ತನಿಖೆ ನಡೆಸಿ, ಕಾನೂನು ಬದ್ಧವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ತಪ್ಪಿಸ್ಥರಿಗೆ ಖಂಡಿತ ಶಿಕ್ಷೆ ಆಗುತ್ತದೆ ಎಂದು ಪ್ರತಿಭಟನೆಯನ್ನು ಕೈಬಿಡುವಂತೆ ತಿಳಿಸಿದರು.
ಪ್ರತಿಭಟನೆಯ ವೇಳೆ ಉತ್ಸವಮೂರ್ತಿಗೆ ಎಂಜಲು ನೀರು ಎರಚಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಹಿ ಸಂಗ್ರಹಣ ಅಭಿಯಾನ ನಡೆಯಿತು. ದೇವಾಲಯದ ಮುಂಭಾಗದಲ್ಲಿ ಬೃಹದಾಕಾರದಲ್ಲಿ ಬ್ಯಾನರನ್ನು ಅಳವಡಿಸಲಾಗಿತ್ತು ಸಾವಿರಾರು ಭಕ್ತರು ಬ್ಯಾನರ್ ನಲ್ಲಿ ಸಹಿ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರಲ್ಲದೆ ಕೂಡಲೇ ಕೃತ್ಯ ಎಸಗಿದವರನ್ನು ಬಂಧಿಸಬೇಕು ಎಂಬ ಮಾತಿಗೆ ಸಮ್ಮತಿಸಿದರು. ತೇರಿನ ಬೀದಿಯಲ್ಲಿ ವ್ಯಾಪಾರಿಗಳು ಸ್ವಯಂ ಘೋಷಿತ ಬಂದನ್ನು ಮುಂಗಟುಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು
ಗಿರೀಶ್ ಮಾತನಾಡಿ, ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಡುತ್ತಿದ್ದೇವೆ ಇನ್ನು ಎರಡು ದಿನದ ಒಳಗಡೆ ಆರೋಪಿಗಳನ್ನು ಬಂದಿಸದಿದ್ದರೆ ಸ್ವಯಂ ಘೋಷಿತವಾಗಿ ಅಂಗಡಿಗಳನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ ಎಂದರು
ಸ್ಥಳದಲ್ಲಿ ಯಾವುದೇ ರೀತಿಯ ಐತಕರ ಘಟನೆ ನಡೆಯದಂತೆ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು
ಅಪವಿತ್ರ ನೀರು ಎರಚಿದವರನ್ನು ಕೂಡಲೆ ಬಂಧಿಸಿ
ದಲಿತರ ರಾಜ ನಮ್ಮ ಪೂರ್ವಜರಾಗಿರುವ ಮಹಿಷಾಸುರ ರಾಜನನ್ನು ಹೋಲುವ ರಂಗೋಲಿಯಲ್ಲಿ ಬರೆದ ಚಿತ್ರವನ್ನು ಕಾಲಿನಿಂದ ತುಳಿದು ನಮ್ಮ ಭಾವನೆಗಳಿಗೆ ಧಕ್ಕೆ ಮಾಡಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಾವು ಯಾರಿಗೂ ಅವಮಾನ ಮಾಡಿಲ್ಲ. ನಂಜುಂಡೇಶ್ವರ ಅವರಿಗೆ ಮಾತ್ರ ದೇವರಲ್ಲ, ನಮ್ಮಗೂ ದೇವರೆ. ಶ್ರೀ ಕಂಠೇಶ್ವರನ ಉತ್ಸಹ ಮೂರ್ತಿಗೆ ಎಂಜಲು ನೀರು ಎರಚಿದವನ್ನು ಕೂಡಲೇ ಬಂಧಿಸಿ ಎಂದು ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ನಂಜನಗೂಡಿನಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ, ಪ್ರತಿಧ್ವನಿ ಸಂಘಟನೆಯ ಅಧ್ಯಕ್ಷ ತ್ರಿನೇಶ್, ನಮ್ಮ ದಲಿತರ ಮಹಾರಾಜ ನಮ್ಮ ಪೂರ್ವಜರು ಆಗಿರುವ ಮಹಿಷಾಸುರನನ್ನು ಹೋಲುವ ಬೃಹದಾಕಾರದ ರಂಗೋಲಿಯಲ್ಲಿ ಬರೆದ ಭಾವಚಿತ್ರವನ್ನು ಕಾಲಿನಿಂದ ತುಳಿದಿರುವುದು ತೀವ್ರ ಖಂಡನೀಯ. ಅದನ್ನು ನಾವು ವಿರೋಧಿಸುತ್ತೇವೆ ನಮ್ಮ ಸಂಘಟನೆಯಲ್ಲಿ ಯಾರು ಸಹ ಶ್ರೀಕಂಠೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರನ್ನು ಎರಚಿಲ್ಲ. ಅವರನ್ನು ನಮ್ಮ ಸಂಘಟನೆಯ ವತಿಯಿಂದ ಕೂಡಲೇ ಬಂಧಿಸಬೇಕೆಂದು ಆಗ್ರಹಿಸುತ್ತೇವೆ ಎಂದರು.
ಅಂದಕಾಸುರ ಸಂಹಾರದ ಬಗೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಮಹಿಷಾಸುರನನ್ನು ಹೋಲುವ ಬೃಹದಾಕಾರದ ಬ್ಯಾನರನ್ನು ಅಳವಡಿಸಿದ ಕಾರಣ ತಿಳಿಯಬೇಕು ಅಷ್ಟೇ. ಇಲ್ಲದ ಆಚರಣೆ ಎಂದು ಮಾಡಿದ್ದೇಕೆ ಎಂಬುದೇ ನಮ್ಮ ಪ್ರಶ್ನೆ ನಾವು ಪ್ರಶ್ನೆ ಮಾಡಿದ್ದು ಸರಕಾರಿ ಅಧಿಕಾರಿಗಳನ್ನು, ಅದರೆ ಅನಾವಶ್ಯಕ ಮಧ್ಯ ಪ್ರವೇಶ ಮಾಡಿ ಗೊಂದಲ ಸೃಷ್ಟಿ ಮಾಡಿದರು. ಮಹಿಷಾಸುರ ನಮ್ಮ ವಂಶಸ್ಥರು ಅವರನ್ನು ಹೋಲುವ ಬೃಹತ್ ಭಾವ ಚಿತ್ರವನ್ನು ನೆಲಕ್ಕೆ ಉರುಳಿಸಿ, ರಂಗೋಲಿಯನ್ನು ತುಳಿದು ನಮ್ಮಗೆ ಅವಮಾನ ಮಾಡಿದ್ದಾರೆ ನಮ್ಮ ನಂಬಿಕೆಗೆ ಧಕ್ಕೆ ತಂದಿದ್ದಾರೆ ನಮ್ಮ ಮೇಲೆ ಹಾಕಿರುವ ಪ್ರಕರಣವನ್ನು ಹಿಂಪಡೆಯಬೇಕು. ಲೋಕ ಸಭೆ ಚುನಾವಣೆಯನ್ನು ಮುಂದ ಇಟ್ಟುಕೊಂಡು ಕಾಣದ ರಾಜಕೀಯ ವ್ಯಕ್ತಿಗಳು ಪಿತೂರಿ ನಡೆಸುತ್ತಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಚುಂಚನಹಳ್ಳಿ ಮಲ್ಲೇಶ್ ಜಿಲ್ಲಾ ಸಂಚಾಲಕರು ಕರಾದಸಂಸ, ಕಾರ್ಯ ಬಸವಣ್ಣ, ಜಿಲ್ಲಾ ಸಂಯೋಜಕರು ದ ಸಂ ಸ , ಇಮ್ಮಾವು ರಘು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ ನಗರ್ಲೆ ಎಂ. ವಿಜಯ್ ಕುಮಾರ್, ರಾಜ್ಯ ಅಧ್ಯಕ್ಷರು ಜನ ಸಂಗ್ರಾಮ ಪರಿಷತ್, ಸುರೇಶ್ ಶಂಕರಪುರ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಇಲ್ಲಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.