ನಂಜನಗೂಡಿಗಿಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಪರಮೇಶ್ವರ್ ಭೇಟಿ
Team Udayavani, Mar 18, 2017, 12:53 PM IST
ನಂಜನಗೂಡು: ಶನಿವಾರ ಮಧ್ಯಾಹ್ನ ನಂಜನಗೂಡಿಗೆ ಕಾಂಗ್ರೆಸ್ ಪಕ್ಷದ ರಾಜ್ಯಾದ್ಯಕ್ಷ ಪರಮೇಶ್ವರ ಭೇಟಿ ನಿಡಲಿದ್ದಾರೆ ಎಂದು ಸಂಸದ ಆರ್ ಧ್ರುವನಾರಾಯಣ ತಿಳಿಸಿದರು.
ಶುಕ್ರವಾರ ನಂಜನಗೂಡಿಗೆ ಆಗಮಿಸಿದ ಅವರು ಪಕ್ಷದ ಅಭ್ಯರ್ಥಿ ಕಳಲೆ ಕೇಶವ ಮುರ್ತಿಯವರೊಂದಿಗೆ ನಗರದಲ್ಲಿ ಸಿದ್ದಗೊಳ್ಳುತ್ತಿರುವ ಕಾಂಗ್ರೆಸ್ ಪ್ರಚಾರ ಕಾರ್ಯಾಲಯದ ಸಿದ್ಧತೆಗಳನ್ನು ಪರಿಶಿಲಿಸಿದ ನಂತರ ಹೆಡತಲೆ ಜಾತ್ರೆಗೆ ಬೇಟಿ ನೀಡಿ ಅಲ್ಲಿನ ಜನರೊಂದಿಗೆ ಚುನಾವಣೆ ಕುರುತು ಮಾತುಕತೆ ನಡೆಸಿದ ನಂತರ ನಂಜನಗೂಡಿಗೆ ಆಗಮಿಸಿ ಮಾತನಾಡಿದರು.
ಪಟ್ಟಣಕ್ಕೆ ಆಗಮಿಸುವ ಪûಾಧ್ಯಕ್ಷರು ತಾಲೂಕು ಕಾಂಗ್ರೆಸ್ ಪ್ರಮುಖರೊಂದಿಗೆ ಉಪ ಚುನಾವಣೆಯ ಕಾರ್ಯ ತಂತ್ರದ ಕುರಿತು ಮಹತ್ವದ ಮಾತುಕತೆ ನಡೆಸಿ ಸಲಹೆ ಸೂಚನೆ ನೀಡಲಿದ್ದಾರೆ ಎಂದು ಸಂಸದರು ಹೇಳಿದರು.
ನಾಲ್ಕು ದಿನ ಮುಖ್ಯಮಂತ್ರಿಗಳ ಪ್ರಚಾರ- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಚುನಾವಣಾ ಪ್ರಚಾರಕ್ಕೆ ಇದೇ ತಿಂಗಳ 31 ರಂದು ಇಲ್ಲಿಗೆ ಆಗಮಿಸಲಿದ್ದು ನಾಲ್ಕು ದಿನಗಳ ಕಾಲ ನಂಜನಗೂಡು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಅವರು ಇದೇ ಸಮಯದಲ್ಲಿ ಹೇಳಿದರು.
ಕಾಂಗ್ರೆಸ್ ಈ ಕ್ಷೇತ್ರವನ್ನು ಈ ಬಾರಿ ಉಳಿಸಿಕೊಳ್ಳಲಿದೆ ಎಂದ ಅವರು ಸಮರ್ಥ ಅಭ್ಯರ್ಥಿ, ಮುಖ್ಯ ಮಂತ್ರಿಗಳು ರಾಜ್ಯ ಹಾಗೂ ಈ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳು ಕೇಶವ ಮೂರ್ತಿಯವರಿಗೆ ವಿಜಯ ಮಾಲೆಯಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು
ಕೇಶವಮೂರ್ತಿ ತಮ್ಮ ನಾಮಪತ್ರವನ್ನು ಸೋಮವಾರ ಸಲ್ಲಿಸಲಿದ್ದು, ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಚಾರ ಬಿರುಸಾಗಲಿದೆ ಎಂದು ಸ್ವತಃ ಈ ಉಪ ಚುನಾವಣೆಯ ಕೈ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ ತಿಳಿಸಿದರು.
ಹಲವಾರು ಚುನಾವಣಾ ಸಿದ್ಧತೆಗಳನ್ನು ಮಾಡಿ ಅನುಭವ ಹೊಂದಿರುವ ತಾವು ಈಗ ಚುನಾವಣಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಸೋಮವಾರದ ನಂತರ ರಾಜ್ಯದ ಸಚಿವರು ಸಂಸದರು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಸಹ ಚುನಾವಣಾ ರಂಗಕ್ಕೆ ದುಮುಕಲಿದ್ದಾರೆ. ತಾಲೂಕಿನ ಜನತೆ ಈ ಬಾರಿ ಆಶೀರ್ವದಿಸುವುದು ನಿಶ್ಚಿತ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.