ಬಿಲ್ ಕಟ್ಟದಿದ್ದರೆ ನಗರದಲ್ಲಿನ ಸರ್ಕಾರಿ ಶಾಲೆಗಳ ಕರೆಂಟ್ ಕಟ್
Team Udayavani, Jun 20, 2023, 1:11 PM IST
ನಂಜನಗೂಡು: ಅತ್ತ ಶಿಕ್ಷಣ ಇಲಾಖೆಯೂ ಹಣ ನೀಡಿಲ್ಲ, ಇತ್ತ ಸ್ಥಳೀಯ ಸಂಸ್ಥೆಗಳು ಪಾವತಿಸುತ್ತಿಲ್ಲ, ಇನ್ನೂ ವಿದ್ಯಾರ್ಥಿಗಳಿಂದಲೂ ವಸೂಲಿ ಮಾಡುವಂತಿಲ್ಲ, ಹೀಗಾದ್ರೆ ಸರ್ಕಾರಿ ಶಾಲೆಗಳ ವಿದ್ಯುತ್ ಬಿಲ್ ಕಟ್ಟುವುದು ಹೇಗೆ?, ಬಿಲ್ ಬಾಕಿ ಕಟ್ಟದಿದ್ದರೆ ಸೆಸ್ಕ್ ನವರು ಸಂಪರ್ಕ ಕಡಿತ ಮಾಡುವುದಾಗಿ ಎಚ್ಚರಿಕೆ ನೀಡಿದ್ದು, ಮಕ್ಕಳಿಗೆ ಕಂಪ್ಯೂಟರ್, ಲ್ಯಾಬ್, ಪಾಠ ಪ್ರವಚನ ಹೇಗೆ ಮಾಡುವುದು ಎಂಬ ಚಿಂತೆ ಸರ್ಕಾರಿ ಶಾಲಾ ಶಿಕ್ಷಕರನ್ನು ಕಾಡುತ್ತಿದೆ.
ನಂಜನಗೂಡು ಸರ್ಕಾರಿ ಬಾಲಕಿಯರ ಶಾಲೆಯ ವಿದ್ಯುತ್ ಬಿಲ್ ಬಾಕಿ 15,000 ರೂ., ಬಾಲಕರ ಪ್ರೌಢಶಾಲೆಯ ಬಿಲ್ ಬಾಕಿ 19,000 ರೂ. ಇದ್ದು, ನಗರ ವ್ಯಾಪ್ತಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳ ಬಿಲ್ ತಲಾ 10 ಸಾವಿರ ರೂ. ದಾಟಿದೆ ಎನ್ನಲಾಗಿದೆ. ಈ ಹಣವನ್ನು 30 ದಿನದಲ್ಲಿ ಪಾವತಿಸದೇ ಇದ್ದಲ್ಲಿ ಮಕ್ಕಳ ಲ್ಯಾಬ್, ಕಂಪ್ಯೂಟರ್ ಶಿಕ್ಷಣ ಕೊನೆಗೆ ಶೌಚಾಲಯಗಳ ನಿರ್ವಹಣೆ ಹೇಗೆ ಎಂಬ ಆತಂಕ ಶಾಲಾ ಮುಖ್ಯಸ್ಥರನ್ನು ಕಾಡತೊಡಗಿದೆ.
ಯಾವುದೇ ಆದಾಯ ಇಲ್ಲ: ಮಕ್ಕಳಿಂದ ಪ್ರವೇಶ ಶುಲ್ಕ ಹೊರತುಪಡಿಸಿ, ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ, ಇನ್ನು ಶಾಲೆಗಳಿಗೆ ಬೇರೆ ರೂಪದ ಆದಾಯಗಳು ಇಲ್ಲ, ಹೀಗಿರುವಾಗ ವಿದ್ಯುತ್ ಹಣ ಪಾವತಿ ಹೇಗೆ ಎಂಬ ಚಿಂತೆ ಬಹುತೇಕ ಸರ್ಕಾರಿ ಶಾಲೆಯನ್ನು ಕಾಡತೊಡಗಿದೆ. ಈ ಸಮಸ್ಯೆ ನಗರದಲ್ಲಿನ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳನ್ನು ಆವರಿಸಿದೆ.
ಸಂಪರ್ಕ ಕಡಿತದ ಎಚ್ಚರಿಕೆ: ಸೆಸ್ಕ್ನಿಂದ ವಿದ್ಯುತ್ ಬಿಲ್ ಬಾಕಿ ವಸೂಲಾತಿಗೆ ಟಾರ್ಗೆಟ್ ನೀಡಿರುವುದರಿಂದ ಅಲ್ಲಿನ ಸಿಬ್ಬಂದಿ, ಬೀಲ್ ನೀಡಿ, 15 ದಿನದಲ್ಲಿ ಬಾಕಿ ಸಹಿತ ಹಣ ಪಾವತಿಸದಿದ್ದರೆ ಬಡ್ಡಿ ಹಾಕಲಾಗುತ್ತೆ, 30 ದಿನದಲ್ಲಿ ಪಾವತಿಯಾಗದಿದ್ದರೆ ಕಟ್ಟಡದ ವಿದ್ಯುತ್ ಸಂಪರ್ಕ ಸ್ಥಗಿತ ಮಾಡಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಶಿಕ್ಷಣ ಸಂಸ್ಥೆಯಲ್ಲಿ ವಿದ್ಯುತ್ ನಿರ್ವಹಣೆಗಾಗಿ ಯಾವುದೇ ಹಣ ಇಲ್ಲ. ಅದನ್ನು ಸ್ಥಳೀಯ ಸಂಸ್ಥೆಗಳೇ ಭರ್ತಿ ಮಾಡಿದರೆ ಮಕ್ಕಳ ಶಿಕ್ಷಣಕ್ಕೆ ಅನುಕೂಲ. ●ಶಿವಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ.
ನಗರಸಭಾ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಈ ಬಾಬ್ತು ಹಣ ನೀಡಲು ಅವಕಾಶ ಇದೆ. ಈ ಕುರಿತು 21-12 -22ರಂದು ನಗರ ವ್ಯಾಪ್ತಿಯ 16 ಶಾಲೆಗಳು ಅಧಿಕೃತವಾಗಿ ನಗರಸಭೆಗೆ ಮನವಿ ಮಾಡಿವೆ. ಅವರ ಉತ್ತರವನ್ನು ಕಾಯಲಾಗುತ್ತಿದೆ. ● ಶಾಲಾ ಮುಖ್ಯಸ್ಥರು.
ಸರ್ಕಾರಿ ಶಾಲೆಗಳಲ್ಲಿನ ವಿದ್ಯುತ್ ಬಿಲ್ ಸಮಸ್ಯೆ ಇದೀಗ ತಮ್ಮ ಗಮನಕ್ಕೆ ಬಂದಿದೆ. ತಕ್ಷಣ ವಿದ್ಯುತ್ ಸ್ಥಗಿತ ಮಾಡದಂತೆ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪಾವತಿಗೆ ಶಿಕ್ಷಣ ಇಲಾಖೆಯಲ್ಲಿ ಹಣ ಇಲ್ಲವಾದ್ದರಿಂದ ಬದಲಿ ವ್ಯವಸ್ಥೆಯತ್ತ ಯೋಚಿಸಬೇಕಿದೆ. ●ದರ್ಶನ್ ಧ್ರುವನಾರಾಯಣ, ಶಾಸಕ.
ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಬಿಲ್ ಪಾವತಿಗಾಗಿ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಸೆಸ್ಕ್ ನಮಗೆ ಬಾಕಿ ವಸೂಲಿಗಾಗಿ ಟಾರ್ಗೆಟ್ ನೀಡಿದೆ. ನಾವೀಗ ವಸೂಲಿ ಮಾಡಲು ಕಠಿಣ ಕ್ರಮಕ್ಕೆ ಮುಂದಾಗುವುದು ಅನಿವಾರ್ಯ. ●ಕಿರಣ, ನಂಜನಗೂಡು ಸೆಸ್ಕ್ ಅಧಿಕಾರಿ.
ಪ್ರಸಕ್ತ ಸಾಲಿನ ನಗರಸಭೆ ಮುಂಗಡ ಪತ್ರದಲ್ಲಿ 16 ಸರ್ಕಾರಿ ಶಾಲೆಗಳ ವಿದ್ಯುತ್ ಬಿಲ್ ಪಾವತಿಗಾಗಿ 10 ಲಕ್ಷ ರೂ. ಕಾಯ್ದಿರಿಸಲಾಗಿದೆ. ●ಕಪೀಲೇಶ, ನಗರಸಭಾ ಸದಸ್ಯ
ಸರ್ಕಾರಿ ಶಾಲೆಗಳ ವಿದ್ಯುತ್ ಶುಲ್ಕ ಪಾವತಿಗೆ ನಗರಸಭೆಯಲ್ಲಿ ಅವಕಾಶ ಇಲ್ಲ. ●ಶ್ರೀನಿವಾಸ್, ನಗರಸಭೆ ಇಇ
-ಶ್ರೀಧರ್ ಆರ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.