ಮೈಸೂರಿನ ಫತಹಿನ್‌ಮಿಸ್ಬಾಗೆ ರಾಷ್ಟ್ರಮಟ್ಟದ ಮಾನ್ಯತೆ
ಜಾಲತಾಣ ಬಳಸಿ ಕೋವಿಡ್ ಸಂತ್ರಸ್ತರ ಸೇವೆ
Team Udayavani, Nov 20, 2021, 6:50 AM IST
ಮೈಸೂರು: ಟ್ವಿಟರ್ ಸಾಮಾಜಿಕ ಜಾಲತಾಣವನ್ನು ಬಳಸಿ ಕೋವಿಡ್ ಸಂತ್ರಸ್ತರು ಹಾಗೂ ಅವರ ಬಂಧುಗಳಿಗೆ ನೆರವಾಗುತ್ತಿರುವ ಮೈಸೂರಿನ ಇನ್ಫೋಸಿಸ್ ಸಂಸ್ಥೆಯ ಸಾಫ್ಟ್ ವೇರ್ ಎಂಜಿನಿಯರ್ 34 ವರ್ಷದ ಫತಹಿನ್ ಮಿಸ್ಬಾ ಅವರು “ಕೋವಿಡ್ ಶಿರೋಸ್’ ಎಂದು ಟ್ವಿಟರ್ ಇಂಡಿಯಾದಿಂದ ಗುರುತಿಸಲ್ಪಟ್ಟಿದ್ದಾರೆ.
ಕೋವಿಡ್ ಶಿರೋಸ್ ಅಭಿಯಾನ ಕಳೆದ ಆಗಸ್ಟ್‌ನಲ್ಲಿ ಆರಂಭವಾಗಿತ್ತು. ಟ್ವಿಟರ್ ಬಳಸಿ ಕೋವಿಡ್ ಸಂತ್ರಸ್ತರಿಗೆ ನೆರವಾದ ಮಹಿಳೆಯರನ್ನು ಗುರುತಿಸು ವಂತೆ ಟ್ವಿಟರ್ ದೇಶದ ಜನರಿಂದ ನಾಮಿನೇಶನ್ ಆಹ್ವಾನಿಸಿತ್ತು.
ಕೋವಿಡ್ ಸಂತ್ರಸ್ತರಿಗೆ ನೆರವು
ಟ್ವಿಟರ್ ಜಾಲತಾಣ ಬಳಸಿ ಕೊರೊನಾ ರೋಗಿಗಳಿಗೆ ರಕ್ತ ಪೂರೈಕೆ, ಪ್ಲಾಸ್ಮಾ ಲಭ್ಯವಾಗಲು ನೆರವಾಗುವುದು, ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ ಮಾಹಿತಿ ಒದಗಿಸುವುದು, ಕೊರೊನಾ ರೋಗಿಗಳಿಗೆ ಔಷಧಗಳನ್ನು ತಲುಪಿಸುವುದು ಮುಂತಾದ ಅನೇಕ ಕಾರ್ಯಗಳನ್ನು ಲಾಕ್‌ಡೌನ್ ಸಂದರ್ಭದಲ್ಲಿ ಫತಹಿನ್ ಮಿಸ್ಬಾ ಮಾಡಿದ್ದರು.
ರಾಷ್ಟ್ರಮಟ್ಟದ ಮಾನ್ಯತೆ
ಕೋವಿಡ್ ರೋಗಿಗಳು ಹಾಗೂ ಅವರ ಬಂಧುಗಳಿಗೆ ನೆರವಾಗಲು ಯಾವ ದಾರಿಯಲ್ಲಿ ಹೋಗಬೇಕು ಎಂದು ಮೊದಲು ಗೊತ್ತಾಗಲಿಲ್ಲ. ಮುಂದೆ ಯಾವುದೋ ದಾರಿ ಹಿಡ್ಕೊಂಡು ಹೋಗಿ ಗಮ್ಯ ತಲುಪಿದೆ. ನನ್ನ ಸೇವೆಗೆ ರಾಷ್ಟ್ರಮಟ್ಟದಲ್ಲಿ ಇಂತಹ ಮಾನ್ಯತೆ ಸಿಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಆವತ್ತು ಅಮೆರಿಕಕ್ಕೆ ವಿಮಾನ ಸಂಚಾರ ಇದ್ದಿದ್ದರೆ ಲಾಕ್‌ಡೌನ್ ವೇಳೆ ಸಾಮಾಜಿಕ ಸೇವೆ ಸಲ್ಲಿಸುವ ಅವಕಾಶ ಸಿಗುತ್ತಿರಲಿಲ್ಲ. ವಿಮಾನ ಸಂಚಾರ ರದ್ದಾಗಿದ್ದೇ ನನ್ನ ಪಾಲಿಗೆ ವರವಾಯಿತು ಎಂದು ಫತಹಿನ್ ಮಿಸ್ಬಾ ಅವರು ಶುಕ್ರವಾರ “ಉದಯವಾಣಿ’ಗೆ ತಿಳಿಸಿದರು.
ಫತಹಿನ್ ಮಿಸ್ಬಾ ಅವರ ತಂದೆ ಮೊಹಮ್ಮದ್ ಖಲೀಲ್ ಅವರು ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ತಾಯಿ ಜಬೀನ್ ಅವರು ಗೃಹಿಣಿ. ಫತಹಿನ್ ಮಿಸ್ಬಾ ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಈಗ ಮೈಸೂರಿನ ಇನ್ಫೋಸಿಸ್‌ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾರೆ.
ಇನ್ಫೋಸಿಸ್ ಫೌಂಡೇಷನ್‌ನ ಡಾ| ಸುಧಾ ಮೂರ್ತಿ ಅವರು ನನ್ನ ಸಾಮಾಜಿಕ ಸೇವೆಗೆ ಸ್ಫೂರ್ತಿಯಾಗಿದ್ದಾರೆ. ಯಾರಿಗೆ ನೆರವಿನ ಅಗತ್ಯ ವಿರುತ್ತದೆಯೋ ಅಂಥವರಿಗೆ ನೆರವಾಗಬೇಕು ಎಂಬುದನ್ನು ಡಾ| ಸುಧಾ ಮೂರ್ತಿ ಅವರಿಂದ ಕಲಿತಿದ್ದೇನೆ. ಸಾಮಾಜಿಕ ಕಾರ್ಯ ನನಗೆ ಆತ್ಮ ತೃಪ್ತಿಯನ್ನು ತಂದು ಕೊಡುತ್ತದೆ.
-ಫತಹಿನ್ ಮಿಸ್ಬಾ, ಸಾಮಾಜಿಕ ಕಾರ್ಯಕರ್ತೆ
– ಕೂಡ್ಲಿ ಗುರುರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.