ಪೋಷಕರನ್ನು ಎಂದಿಗೂ ಮರೆಯದಿರಿ: ಮೇಯರ್
Team Udayavani, May 16, 2019, 3:00 AM IST
ಮೈಸೂರು: ಇತ್ತೀಚೆಗೆ ಹೆತ್ತ ತಂದೆ, ತಾಯಿಯರನ್ನು ವೃದ್ಧಾಶ್ರಮಕ್ಕೆ ತಳ್ಳುವ ಘಟನೆಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಮೈಸೂರು ನಗರಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಹೇಳಿದರು.
ಪಾತಿ ಫೌಂಡೇಷನ್ ವತಿಯಿಂದ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಕನಕಗಿರಿಯಲ್ಲಿರುವ ಭಾರತಿ ಸೇವಾ ವೃದ್ಧಾಶ್ರಮದಲ್ಲಿ ಆಯೋಜಿಸಿದ್ದ ಜನನಿ ಜನ್ಮಭೂಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಎಷ್ಟೇ ಹುದ್ದೆ, ಜವಾಬ್ದಾರಿ ನಿರ್ವಹಿಸಿದರೂ, ಕೀರ್ತಿಗಳಿಸಿದರೂ ಅದಕ್ಕೆ ಕಾರಣಕರ್ತರು ನಮ್ಮ ತಂದೆ ತಾಯಂದಿರು ಹಾಗೂ ಪೋಷಕರು. ಪ್ರತಿಯೊಬ್ಬರು ಐಷಾರಾಮಿಯಾಗಿ ಜೀವನ ನಡೆಸುವ ಮುನ್ನ ಅಂಬೆಗಾಲಿಡುವುದನ್ನು ಕಲಿಸಿರುವ ಪೋಷಕರನ್ನು ಮರೆಯಬಾರದು.
ತಂದೆ, ತಾಯಂದಿರರನ್ನು ನಾವು ಕಾಪಾಡಿಕೊಳ್ಳದೇ ವೃದ್ಧಾಶ್ರಮಕ್ಕೆ ಸೇರಿಸುವುದು ಸರಿಯಲ್ಲ. ಇಂದಿನ ದಿನದಲ್ಲಿ ವೃದ್ಧಾಶ್ರಮಕ್ಕೆ ಸೇರಿಸುವ ಮಂದಿ ಹೆಚ್ಚಾಗಿದ್ದಾರೆ. ಇದಕ್ಕಾ ಕಾರಣ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರವನ್ನು ನಾವು ಪಾಲಿಸದೇ ಇರುವುದು ಎಂದು ಹೇಳಿದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ತಾಯಂದಿರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾದುದಲ್ಲ, ತಾಯಿ ಮಗುವಿಗೆ ಜನ್ಮ ನೀಡದನ್ನು ಸಂಭ್ರಮಿಸುವ ದಿನ. ಪ್ರಪಂಚದಲ್ಲಿ ಕೆಟ್ಟ ತಂದೆಯಿರಬಹುದು, ಆದರೆ ಕೆಟ್ಟ ತಾಯಿಯಂತು ಇರುವುದಿಲ್ಲ.
ತಂದೆ ತಾಯಂದಿರನ್ನು ಕಡ್ಡಾಯವಾಗಿ ಮಕ್ಕಳು ಕೊನೆಕಾಲದವರೆಗೂ ನೋಡಿಕೊಳ್ಳಬೇಕು ಎನ್ನುವ ವಿದೇಶದಲ್ಲಿರುವ ಕಾನೂನಿನ ಹಾಗೆಯೇ ನಮ್ಮ ಸರ್ಕಾರಗಳು ಕಠಿಣ ಯೋಜನೆಯನ್ನು ಮುಂದಿನ ದಿನದಲ್ಲಿ ರೂಪಿಸಬೇಕಾಗಿದೆ ಎಂದರು.
ಮಕ್ಕಳಲ್ಲಿ ಸಂಸ್ಕಾರ ಬೆಳೆಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದ್ದು, ಪ್ರಾಥಮಿಕ ಹಂತದಲ್ಲಿ ಉತ್ತಮ ಸಂಸ್ಕಾರ ನೀಡಬೇಕು. ತಾಯಿಯ ಸ್ಥಾನವನ್ನು ಜಗತ್ತಿನ ಯಾವ ಸಂಪತ್ತೂ ತುಂಬಿಸಲಾಗದು. ತಾಯಿ ಎಂದರೆ ಮಾತೃ ಸ್ವರೂಪಿ ಕ್ಷೇಮಯಾಧರಿತ್ರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ವೃದ್ಧರಿಗೆ ಸನ್ಮಾನಿಸಲಾಯಿತು. ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ ಪಾರ್ಥಸಾರಥಿ, ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ವೃದ್ಧಾಶ್ರಮ ವ್ಯವಸ್ಥಾಪಕ ಕೃಷ್ಣಮೂರ್ತಿ, ಮಹರ್ಷಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತೇಜಸ್ ಶಂಕರ್,
ಚಕ್ರಪಾಣಿ, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಕಡಕೊಳ ಜಗದೀಶ್, ಜಯಸಿಂಹ, ಶ್ರೀಕಾಂತ್ ಕಶ್ಯಪ್, ರಂಗನಾಥ್, ಹರೀಶ್ ನಾಯ್ಡು, ಮಂಜುನಾಥ್, ನವೀನ್, ಮಹದೇವ್, ಪೇಪರ್ ರವಿ, ಮಂಜುಕವಿ ಭಾರತೀಶಂಕರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.