ರೈತ ಸಂಘ, ದಸಂಸ, ಸ್ವರಾಜ್‌ಗೆ 100ಕ್ಕೂ ಹೆಚ್ಚು ಸ್ಥಾನ
Team Udayavani, Jan 6, 2021, 1:06 PM IST
ಮೈಸೂರು: ಸ್ವರಾಜ್ ಇಂಡಿಯಾ, ದಲಿತ ಸಂಘರ್ಷ ಸಮಿತಿ, ರೈತ ಸಂಘದ ಬೆಂಬಲಹೊಂದಿದ್ದ ನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವುದು ಸ್ವರಾಜ್ ಇಂಡಿಯಾ ಪಕ್ಷದ ಸಮತಾವಾದ,ಮೌಲ್ಯಗಳು, ಸಮಾಜಮುಖೀ ಆಶಯಗಳಿಗೆಸಂದ ಜಯ ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದರು.
ನಗರದ ಕೃಷಿ ಅಧ್ಯಯನ ಸಂಸ್ಥೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಆಯೋಜಿಸಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸ್ವರಾಜ್‌ಇಂಡಿಯಾ, ರೈತ ಸಂಘ ಹಾಗೂ ಹಸಿರುಸೇನೆ ಮತ್ತು ದಲಿತ ಸಂಘರ್ಷ ಸಮಿತಿ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನೆ ಹಾಗೂ “ಗ್ರಾಮ ಅಭಿವೃದ್ಧಿಯ ಸದಸ್ಯರಪಾತ್ರ’ ವಿಷಯದ ಕುರಿತು ವಿಚಾರಮಂಡನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸ್ಥಳೀಯ ಹಿತಾಸಕ್ತಿಯಿಂದ ಜನರಿಗಾಗಿಕೆಲಸ ಮಾಡುತ್ತಿರುವ ಈ ಸಂಸ್ಥೆಗಳಬೆಂಬಲಿತ ಅಭ್ಯರ್ಥಿಗಳು ಗೆಲುವುಸಾಧಿಸಿರುವುದು ಸಂತೋಷದ ಸಂಗತಿ. ಬಿಜೆಪಿಯವರು ಆರಂಭಿಸಿರುವ ಗೆದ್ದವರನ್ನೆಲ್ಲಾ ತಮ್ಮವರೇ ಎಂದು ಹೇಳಿಕೊಂಡು ಓಡಾಡುವ ಕೆಟ್ಟ ಸಂಪ್ರದಾಯವನ್ನು ಬೇರೆ ಪಕ್ಷಗಳೂ ಅನುಸರಿಸುತ್ತಿವೆ. ಆಪರೇಷನ್ ಕಮಲದ ಮೂಲಕ ಬಿಜೆಪಿ ಈ ಸಂಪ್ರದಾಯ ಆರಂಭಿಸಿತು. ಆಪರೇಷನ್‌ಕಮಲದ ಮೂಲಕ ಬಿಜೆಪಿಯವರು ನೈತಿಕರಾಜಕಾರಣವನ್ನು ಅನೈತಿಕ ಮಾಡಿದ್ದಾರೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 10ಹಾಗೂ ರಾಜ್ಯದಲ್ಲಿ 1,800 ಅಭ್ಯರ್ಥಿಗಳು
ಗೆದ್ದಿದ್ದಾರೆ. ನಾವು ಪ್ರತಿಭಟನೆಗಳ ಕಡೆಗಮನ ಕೊಟ್ಟು ಚುನಾವಣೆಯ ಕಡೆಗೆಕಡಿಮೆ ಗಮನ ಕೊಡದಿದ್ದಕ್ಕೆ ಹೀಗಾಗಿದೆ.ಇಲ್ಲವಾದರೆ ಇನ್ನಷ್ಟು ಸ್ಥಾನಗಳು ಸಿಗುತ್ತಿದ್ದವು ಎಂದರು.
ಗ್ರಾಪಂ ಚುನಾವಣೆಯಲ್ಲಿ ವಿಜೇತರಾದಅಭ್ಯರ್ಥಿಗಳಿಗೆ ಸನ್ಮಾನಿಸಲಾಯಿತು. ರೈತಮುಖಂಡರಾದ ಹೊಸಕೋಟೆಬಸವರಾಜು, ಉಗ್ರನರಸಿಂಹೇಗೌಡ,ಮರಂಕಯ್ಯ, ಹೊಸೂರು ಕುಮಾರ್,ಗರುಡಗಂಬ ಸ್ವಾಮಿ, ಪ್ರಸನ್ನ ಎನ್.ಗೌಡ,ಪುನೀತ್, ಆಲಗೂಡು ಶಿವಕುಮಾರ್‌ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಭೈರಪ್ಪಗೆ ಸಂವೇದನೆ ಇಲ್ಲವೇ?: ದೇವನೂರು ಮಹಾದೇವ :
“ರೈತರ ಪ್ರತಿಭಟನೆಯಲ್ಲಿ ಪಂಜಾಬ್‌ನವರು ಮಾತ್ರ ಭಾಗಿಯಾಗುತ್ತಿದ್ದಾರೆ’ ಎಂಬ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾಹಿತಿ ದೇವನೂರು ಮಹಾದೇವ, ಪ್ರತಿಭಟನೆಯಲ್ಲಿ ಪಂಜಾಬ್‌ನವರು ಮಾತ್ರವಲ್ಲದೆ ಉತ್ತರಾಖಂಡ, ಹರಿಯಾಣ ಮುಂತಾದ ರಾಜ್ಯದ ಜನರು ಭಾಗಿಯಾಗಿದ್ದಾರೆ. ಎಲ್ಲಾ ರಾಜ್ಯಗಳಲ್ಲಿಯೂ ಪ್ರತಿಭಟನೆಗಳು ನಡೆಯುತ್ತಲೇಇವೆ. ಈ ಬಗ್ಗೆ ಅವರಿಗೇಕೆ ತಿಳಿದಿಲ್ಲ? ಅವರಿಗೆ ಕಿವಿ ಕೇಳುತ್ತಿಲ್ಲವೇ? ಕಣ್ಣು ಕಾಣುತ್ತಿಲ್ಲವೇ? ಸಂವೇದನೆ ಇಲ್ಲವೇ? ಇದನ್ನೆಲ್ಲಾ ಮಾಧ್ಯಮದವರು ಅವರಿಗೆ ತಿಳಿಸಿ ಹೇಳಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.