ನಿಸಾರ್ ಅಹಮದ್, ಸಿಪಿಕೆ ಸಮನ್ವಯ ಕವಿಗಳು
Team Udayavani, Dec 18, 2017, 1:35 PM IST
ಮೈಸೂರು: ಕನ್ನಡ ಸಾಹಿತ್ಯ ನವೋದಯ ಮತ್ತು ನವ್ಯ ಸಾಹಿತ್ಯದ ಕಾಲಘಟ್ಟದ ಸಂಘರ್ಷದಲ್ಲಿ ಸಂದರ್ಭದಲ್ಲಿ ಸಮನ್ವಯ ಕವಿಗಳಾಗಿ ಉಳಿದವರು ಕೆ.ಎಸ್.ನಿಸಾರ್ ಅಹ್ಮದ್ ಮತ್ತು ಸಿ.ಪಿ.ಕೃಷ್ಣಕುಮಾರ್ ಎಂದು ಸಾಹಿತಿ ಮಳಲಿ ವಸಂತಕುಮಾರ್ ಬಣ್ಣಿಸಿದರು.
ಮೈಸೂರು ಕನ್ನಡ ಚಳವಳಿಗಾರರ ಸಂಘದಿಂದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ನವೋದಯ ಮತ್ತು ನವ್ಯಸಾಹಿತ್ಯದ ಸಂಘರ್ಷದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ 2 ಭಾಗವಾಗಿತ್ತು. ಹೀಗಾಗಿ ಕವಿಗಳು ಬೇರೆ ಬೇರೆ ಸಾಹಿತ್ಯದಲ್ಲಿ ಗುರುತಿಸಿಕೊಂಡಿದ್ದರು. ಇಂತಹ ಸನ್ನಿವೇಶದಲ್ಲಿ ಕೆ.ಎಸ್.ನಿಸಾರ್ ಅಹಮದ್ ಮತ್ತು ಸಿಪಿಕೆ ಸಮನ್ವಯ ಕವಿಗಳಾಗಿ, ಎಲ್ಲರ ಪ್ರೀತಿಗೆ ಪಾತ್ರರಾದರು ಎಂದು ಹೇಳಿದರು.
ನಿಸಾರ್ ಅಹಮ್ಮದ್ ಅವರು ಕನ್ನಡದ ಹಮ್ಮಿàರರಾಗಿದ್ದು, ಅವರಷ್ಟು ಪ್ರಶಸ್ತಿ ಪಡೆದ, ಸಮ್ಮೇಳನಗಳಲ್ಲಿ ಭಾಗವಹಿಸಿರುವ ಕವಿ ಬೇರೊಬ್ಬರಿಲ್ಲ. ತಮ್ಮ ಗೀತೆಗಳ ಮೂಲಕ ಇಂದಿಗೂ ಜನಮಾನಸದಲ್ಲಿ ನೆಲೆಸಿದ್ದಾರೆ. ಇನ್ನೂ ಹೆಚ್ಚು ವಿಮಶಾ ಸಂಕಲನಗಳನ್ನು ರಚಿಸಿರುವವರು ಸಿಪಿಕೆ ಆಗಿದ್ದಾರೆಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಾಡೋಜ ಡಾ. ಕೆ.ಎಸ್.ನಿಸಾರ್ ಅಹಮದ್, ಕನ್ನಡ ಭಾಷೆಯನ್ನು ಕೀಳರಿಮೆಯಿಂದ ನೋಡುವ ಮನೋಭಾವ ತೊಲಗಬೇಕು. ಕನ್ನಡ ನಾಡಿನ ರಾಜಧಾನಿದಲ್ಲಿ ಕನ್ನಡ ಉಳಿದಿಲ್ಲ, ಎಲ್ಲೆಡೆ ಎಲ್ಲಾ ಭಾಷಿಕರು ಸೇರಿಕೊಂಡಿದ್ದಾರೆ. ಹೀಗಾಗಿ ಇದೊಂದು ಬೆರಕೆ ಸಿಟಿಯಾಗಿದ್ದು, ಇನ್ನೂ ಕೆಲವರು ಕನ್ನಡ ತಿಳಿದಿದ್ದರೂ ಮಾತನಾಡುವುದಿಲ್ಲ ಎಂದು ವಿಷಾದಿಸಿದರು.
ಕನ್ನಡ ನಾಡಿನಲ್ಲಿ ಕನ್ನಡ ಅಗತ್ಯವಿಲ್ಲ ಎಂಬ ಭಾವನೆ ಮೂಡಿದ್ದು, ಇದಕ್ಕೆ ಪೂರಕವಾಗಿ ಕನ್ನಡದಲ್ಲಿ ಸಂವಹನ ನಡೆಸದೆ, ಅವರ ಭಾಷೆಯಲ್ಲಿ ವ್ಯವಹಾರ ಮಾಡುತ್ತಾರೆ. ಆದರೆ ಕನ್ನಡಿಗರಿಗೆ ಕನ್ನಡದ ಬಗ್ಗೆ ಒಲವಿರಬೇಕು, ನಿರಾಭಿಮಾನಿ ಕನ್ನಡಿಗರ ಅನ್ಯಬಾಷಿಕರು ಈ ನಾಡಿನಲ್ಲಿ ವ್ಯಾಪಾರಿಗಳಿಗೆ ಕನ್ನಡ ಕಲಿಸಿದಾಗ ಮಾತ್ರ ನಮ್ಮ ನಾಡಲ್ಲಿ, ನಾಡ ರಾಜಧಾನಿಯಲ್ಲಿ ಕನ್ನಡ ಉಳಿಯಲಿದೆ ಎಂದರು.
ನನ್ನನ್ನೇಕೇ ಆಹ್ವಾನಿಸಲಿಲ್ಲ?: ಇತ್ತೀಚೆಗೆ ಮೈಸೂರಿನಲ್ಲಿ ನಡೆದ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಿಗೆ ನನ್ನನ್ನೇಕೆ ಆಹ್ವಾನಿಸಲಿಲ್ಲ. ಹೀಗೆಂದು ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅವರನ್ನು ಮಾಜಿ ಸಂಸದ ಎಚ್. ವಿಶ್ವನಾಥ್ ಪ್ರಶ್ನಿಸಿದರು. ತಾವು ಈವರೆಗೂ 7 ಕೃತಿಗಳನ್ನು ರಚಿಸಿದ್ದು, ಸಾಹಿತಿಗಳ ನಡುವಿನಲ್ಲಿ ಗುರುತಿಸಿಕೊಂಡಿದ್ದೇನೆ.
ಆದರೆ ಮೈಸೂರಿನಲ್ಲೇ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಯಾರ ಭಯದಿಂದ ಆಹ್ವಾನಿಸಲಿಲ್ಲ. ಆದರೆ ನೀವು ಆಹ್ವಾನಿಸಿಲ್ಲ ಎಂಬ ಕಾರಣಕ್ಕೆ ತಾನು ಬಾರದೇ ಕುಳಿತಿಲ್ಲ. ಕನ್ನಡದ ಕುರಿತ ಹೋರಾಟ, ವಿಚಾರ ಸಂಕಿರಣ ಯಾವುದೇ ಸ್ಥಳದಲ್ಲಿ ನಡೆದರೂ ಹೋಗುವ ಜತೆಗೆ ಸಮ್ಮೇಳನದ ಗೋಷ್ಠಿಗಳನ್ನೂ ಕೇಳಿದ್ದೇನೆಂದರು.
ಇದೇ ವೇಳೆ ಸಾಹಿತಿಗಳಾದ ಪೊ›.ಕೆ.ಸ್.ನಿಸಾರ್‌ಅಹಮದ್, ಪೊ›.ಸಿ.ಪಿ.ಕೃಷ್ಣಕುಮಾರ್‌ರನ್ನು ಸನ್ಮಾನಿಸಲಾಯಿತು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ರಾಮು ಉದ್ಘಾಟಿಸಿದರು. ಮಾಜಿ ಸಂಸದ ಎಚ್.ವಿಶ್ವನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಸಮಾಜ ಸೇವಕ ರಘುರಾಂ ವಾಜಪೇಯಿ, ಬಿ.ಎ.ಶಿವಶಂಕರ್ ಇದ್ದರು.
ಹೋರಾಟಗಾರರಿಂದ ಕನ್ನಡ ಉಳಿವು: ಕನ್ನಡ ಚಳವಳಿಗಾರರನ್ನು ದಗಲಾಜಿಗಳು, ಧಗೆಕೋರರು, ವಸೂಲಿಕೋರರು ಎಂದೆಲ್ಲಾ ವ್ಯಾಖ್ಯಾನಿಸುತ್ತಾರೆ. ಆದರೆ ಕನ್ನಡವನ್ನು ಜ್ವಲಂತವಾಗಿ ಕಾಪಾಡಿಕೊಂಡು ಬಂದಿರುವರು ನಮ್ಮ ಕನ್ನಡ ಹೊರಾಟಗಾರರು. ನಾವು ಸಾಹಿತಿಗಳು ಬರೆಯುತ್ತವೆ. ಆದರೆ ಇಂದು ಕನ್ನಡ ಉಳಿವಿಗೆ ಬರವಣಿಗೆಗಿಂತ ಚಳವಳಿ ಹೋರಾಟವೇ ಮುಖ್ಯವಾಗಲಿದೆ ಎಂದು ಸಾಹಿತಿ ಡಾ.ಕೆ.ಎಸ್.ನಿಸಾರ್ ಅಹಮದ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.