ಮನೆಯಂದ್ರೆ ಬೋರ್, ಕಾಲೇಜೇ ಬೆಸ್ಟ್
ಮತ್ತೆ ಶಾಲಾ-ಕಾಲೇಜು ಬಂದ್‌ಗೆ ವಿದ್ಯಾರ್ಥಿಗಳ ಬೇಸರ
Team Udayavani, Mar 24, 2021, 6:20 PM IST
ಸಾಂದರ್ಭಿಕ ಚಿತ್ರ
ಮೈಸೂರು: ಕೋವಿಡ್ ಎರಡನೇ ಅಲೆ ರಾಜ್ಯದಲ್ಲೂ ಸದ್ದು ಮಾಡುತ್ತಿರುವ ಬೆನ್ನಲ್ಲೆ ಶಾಲೆ ಹಾಗೂ ಕಾಲೇಜುಗಳನ್ನು ಮತ್ತೆ ಬಂದ್ ಮಾಡಬೇಕೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಈ ನಡುವೆ ವಿದ್ಯಾರ್ಥಿ ಗಳು ಮಾತ್ರ ತರಗತಿ ಮುಂದುವರಿಸುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕೋವಿಡ್ ಲಾಕ್‌ಡೌನ್‌ನಿಂದ ಶಾಲಾ-ಕಾಲೇಜುಗಳು ವರ್ಷಗಟ್ಟಲೆ ಮುಚ್ಚಿದ್ದ ಹಿನ್ನೆಲೆ ಮನೆಯಲ್ಲೇ ಕುಳಿತು ಬೇಸವಾಗಿದ್ದು, ದಿನಪೂರ್ತಿ ಮನೆಯಲ್ಲಿರಲು ಆಗುವುದಿಲ್ಲ. ಜೊತೆಗೆ ಆನ್‌ಲೈನ್‌ತರಗತಿಗಳಿಗೆ ನಾವು ಹೊಂದಿಕೊಳ್ಳಲಾಗುತ್ತಿಲ್ಲಎಂಬುದು ಗ್ರಾಮಾಂತರ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ಅಳಲು.
ತರಗತಿಗೆ ಬರಲು ಉತ್ಸುಕ: ಸರ್ಕಾರದ ಮಾರ್ಗಸೂಚಿ ಪಾಲಿಸಿ ನಾವು ತರಗತಿಗೆ ಹಾಜರಾಗುತ್ತೇವೆ. ತರಗತಿಯಲ್ಲಿ ಸಾಮಾಜಿಕ ಅಂತರ ಪಾಲಿಸಿಯೇ ಪಾಠ ಆಲಿಸುತ್ತೇವೆ. ಆದರೆ, ಶಾಲಾ,ಕಾಲೇಜುಗಳನ್ನು ಮಾತ್ರ ಬಂದ್ ಮಾಡಬೇಡಿ. ಇದು ವಿದ್ಯಾರ್ಥಿಗಳ ಮನವಿಯಾಗಿದೆ. ಇದಲ್ಲದೆಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಶಾಲೆ ಮತ್ತು ಕಾಲೇಜುಗಳು ಪುನಾರಂಭವಾದಗಿನಿಂದಲೂ ವಿದ್ಯಾರ್ಥಿಗಳು ಉತ್ಸಾಹದಿಂದ ತರಗತಿಗೆ ಹಾಜರಾಗುತ್ತಿದ್ದು, ಹಾಜರಾತಿ ಪ್ರಮಾಣ ಶೇ.90 ಕಂಡುಬಂದಿದೆ. ಜೊತೆಗೆ ಕೊರೊನಾ ಎರಡನೇ ಅಲೆ ಭೀತಿ ರಾಜ್ಯದೆಲ್ಲೆಡೆ ಆವರಿಸಿದ್ದರೂ, ಸೋಂಕಿಗೆಹೆದರದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಉತ್ಸುಕರಾಗಿರುವುದು ವಿಶೇಷ.
ಮತ್ತೆ ರಜೆ ಆತಂಕ: ಈಗಾಗಲೇ ಜಿಲ್ಲಾದ್ಯಂತ ಗ್ರಾಮಾಂತರ ಮತ್ತು ನಗರ ಪ್ರದೇಶದ ಎಲ್ಲಾಶಾಲಾ-ಕಾಲೇಜುಗಳಲ್ಲಿ ತರಗತಿಗಳು ಸುಸೂತ್ರವಾಗಿ ನಡೆಯುತ್ತಿದ್ದು, ಶೇ.90 ವಿದ್ಯಾರ್ಥಿಗಳು ತರಗತಿಗೆಹಾಜರಾಗುತ್ತಿದ್ದಾರೆ. ಈ ನಡುವೆ ಕೊರೊನಾಎರಡನೇ ಅಲೆ ಎದ್ದಿರುವುದರಿಂದ ಸರ್ಕಾರ ಮತ್ತೆ ರಜೆ ಘೋಷಣೆ ಮಾಡಲಿದೆ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳಿದ್ದಾರೆ.
ಪೋಷಕರಲ್ಲಿ ಎದುರಾದ ಆತಂಕ: ಕೋವಿಡ್ ಎರಡನೇ ಅಲೆ ಹಿನ್ನೆಲೆ ಪೋಷಕರು ಮತ್ತೆಆತಂಕಗೊಂಡಿದ್ದರೆ. ಮಕ್ಕಳು ಮನೆಯಲ್ಲಿರದೆ ತರಗತಿಗೆ ಹಾಜರಾಗುತ್ತೇವೆ ಎದು ಹಠಕ್ಕೆ ಬಿದ್ದಿದ್ದಾರೆ.ಇದರಿಂದ ಪೇಚಿಗೆ ಸಿಲುಕಿರುವ ಪೋಷಕರು, ಸರ್ಕಾರದ ನಿರ್ಧಾರ ಏನೆಂಬುದನ್ನು ಎದುರುನೋಡುತ್ತಿದ್ದು, ಶಾಲಾ-ಕಾಲೇಜಿಗೆ ರಜೆ ನೀಡುವುದೆಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಎಸ್‌ಒಪಿ ಪಾಲನೆಗೆ ಸೂಚನೆ: ಜಿಲ್ಲಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಲ್ಲಿ
ಕೋವಿಡ್ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸ್ಯೂಜರ್ (ಮಾಸ್ಕ್ ಬಳಕೆ, ಸಾಮಾಜಿಕ ಅಂತರಪಾಲನೆ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್‌ಪ್ರಕ್ರಿಯೆ) ನಡೆಸುವಂತೆ ಜಿಲ್ಲಾಡಳಿತ ಶಿಕ್ಷಣ ಇಲಾಖೆಗೆಸೂಚನೆ ನೀಡಿದ್ದು, ಅದರಂತೆ ಮತ್ತೆ ಎಲ್ಲಾಶಾಲಾ-ಕಾಲೇಜುಗಳಲ್ಲಿ ಎಸ್‌ಒಪಿ ಪ್ರಕ್ರಿಯೆ ಪುನಾರಂಭಗೊಂಡಿದೆ.
ಎಸ್‌ಒಪಿ ವೇಳೆ ವಿದ್ಯಾರ್ಥಿಗಳಲ್ಲಿ ಜ್ವರ, ಕೆಮ್ಮು ಅಥವಾ ದೇಹದಲ್ಲಿ ಉಷ್ಣಾಂಶ ಹೆಚ್ಚಿದ್ದರೆ ಅವರನ್ನೂಕೂಡಲೇ ಕೋವಿಡ್ ಟೆಸ್ಟ್‌ಗೆ ಒಳಪಡಿಸಿ, ತರಗತಿಯನ್ನು ಸ್ಯಾನಿಟೈಸ್ ಮಾಡಲು ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದ್ದು, ತಮ್ಮ ವ್ಯಾಪ್ತಿಯಶಾಲೆಗಳಲ್ಲಿ ಕೋವಿಡ್ ಪ್ರಕರಣ ಪತ್ತೆಯಾದಲ್ಲಿ ಪರಿಸ್ಥಿತಿ ಅವಲೋಕಿಸಿ ಅಂತಹ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಲಾಗಿದೆ.
ಜೊತೆಗೆ ಒಂದು ಕೊಠಡಿಯಲ್ಲಿ 20 ಮಕ್ಕಳುಮೀರದಂತೆ ತರಗತಿ ನಡೆಸುವುದು, ಬಿಸಿ ನೀರಿನವ್ಯವಸ್ಥೆ, ಶೌಚಾಲಯ ಶುಚಿತ್ವ ಕಾಪಾಡಿಕೊಳ್ಳುವುದುಸೇರಿ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುವಮೂಲಕ ಕೋವಿಡ್ ಸೋಂಕು ಹರಡದಂತೆ ಶಿಕ್ಷಣ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಕೋವಿಡ್ ಎರಡನೇ ಅಲೆ ಹಿನ್ನೆಲೆ ಜಿಲ್ಲೆಯಾ ಎಲ್ಲಾ ಶಾಲೆಗಳಲ್ಲೂ ಸ್ಟಾಂಡರ್ಡ್ ಆಪರೇಟಿಂಗ್‌ಪ್ರೊಸ್ಯೂಜರ್ ಪಾಲನೆ ಮಾಡಲಾಗುತ್ತಿದ್ದು, ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುವಮಕ್ಕಳನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸ ಲಾಗುವುದು. ಮಕ್ಕಳಿಗೆ ಸೋಂಕುಹರಡದಂತೆ ಮುಂಜಾಗ್ರತ ಕ್ರಮಗಳನ್ನುಕೈಗೊಳ್ಳಲಾಗಿದ್ದು, ಪೋಷಕರು ತಮ್ಮಮಕ್ಕಳನ್ನು ಭಯ ಪಡದೆ ಶಾಲೆಗೆ ಕಳುಹಿಸಬಹುದು. – ಡಾ.ಪಾಂಡುರಂಗ, ಡಿಡಿಪಿಐ ಮೈಸೂರು
– ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.