30 ವರ್ಷ ಬಳಿಕ ಅಲೆಮಾರಿಗಳಿಗೆ ನಿವೇಶನ ಹಕ್ಕುಪತ್ರ ಭಾಗ್ಯ
Team Udayavani, May 7, 2021, 3:59 PM IST
ಸಾಂದರ್ಭಿಕ ಚಿತ್ರ:
ಹುಣಸೂರು: ಈ ಅಲೆಮಾರಿಗಳ ಮೂರು ದಶಕದ ಹೋರಾಟಕ್ಕೆ ಜಯ ಸಿಕ್ಕ ಸಂಭ್ರಮ. ನೈಜ ಫಲಾನುಭವಿಗಳಿಗೆ ಸವಲತ್ತು ತಲುಪಿಸಿದ ತೃಪ್ತಿ ಜನಪ್ರತಿನಿ ಗಳದ್ದು..ಇದು ಹುಣಸೂರು ತಾಲೂಕಿನ ಮರದೂರುಗ್ರಾಮ ಪಂಚಾಯ್ತಿಯ ದೊಂಬಿ ದಾಸರ ಕಾಲೋನಿನಲ್ಲಿ ಕಳೆದ ಮೂರ್‍ನಾಲ್ಕು ದಶಕದಿಂದ ಹರಕು-ಮುರುಕು ಮಟ್ಟಾಳೆ ಗರಿಯ ಗುಡಿಸಿಲಿನಲ್ಲಿ ಬದುಕು ಕಟ್ಟಿಕೊಂಡಿದ್ದ ದೊಂಬಿ ದಾಸರ ಕುಟುಂಬಗಳಿಗೆ ಹಕ್ಕುಪತ್ರ ದೊರೆಯುತ್ತಿದ್ದಂತೆ ಇಲ್ಲಿನಗುಡಿಸಿನೊಳಗಿದ್ದ ವೃದ್ಧರು ಉಸ್ಸಪ್ಪ ಎಂದು ನಿಟ್ಟುಸಿರು ಬಿಟ್ಟರೆ, ಕೊಟ್ಟ ಮಾತು ಈಡೇರಿಸಿದೆನೆಂಬ ತೃಪ್ತಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಡಾ|ಪುಷ್ಪಾಅಮರ್‌ನಾಥ್ ಅವರದ್ದು.ತಾಲೂಕು ಆಡಳಿತದೊಂದಿಗೆ ಕಾಲೋನಿಗೆ ತೆರಳಿದ ಶಾಸಕ ಎಚ್.ಪಿ.ಮಂಜುನಾಥ್, ಡಾ|ಪುಷ್ಪಾ ಅಮರ್‌ನಾಥ್ ಅವರು ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆ ನಿವಾಸಿಗಳು ತಮ್ಮ ಗುಡಿಸಲುಗಳ ಮುಂದೆಯೇ ನಿಂತುಕೊಂಡಲ್ಲಿ ಸರ್ಕಾರದ ಹಕ್ಕುಪತ್ರ ವಿತರಿಸುವುದಾಗಿ ಘೋಷಣೆ ಮಾಡುತ್ತಿದ್ದಂತೆ ಖುಷಿಯಿಂದಲೇ ಅವರವರು ಕಟ್ಟಿಕೊಂಡಿದ್ದ ಮಟ್ಟಾಳೆಗರಿ (ತೆಂಗಿನ ಗರಿ)ಜೋಪಡಿ ಮುಂದೆ ನಿಂತಿದ್ದರು.
ಶಾಸಕ ಮಂಜುನಾಥ ರೊಂದಿಗೆಮರದೂರು ಗ್ರಾಪಂ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷೆ ಸಿದ್ದಮ್ಮ, ತಹಶೀಲ್ದಾರ್ ಬಸವರಾಜ್, ತಾಪಂ ಇಒಗಿರೀಶ್ ಇತರೆ ಅಧಿಕಾರಿಗಳು ಪ್ರತಿ ಗುಡಿಸಲು ಬಳಿಗೆ ತೆರಳಿ ರಾಜೀವಗಾಂಧಿ ವಸತಿ ನಿಗಮದಿಂದ ಕೊಡಮಾಡಿದ 30×40 ಅಳತೆಯ ನಿವೇಶನದಹಕ್ಕುಪತ್ರ ವಿತರಿಸಿದರು. ಹಕ್ಕು ಪತ್ರ ಪಡೆದ ಅಲೆಮಾರಿಗಳು ತಮ್ಮ ಕಷ್ಟಕ್ಕೆ ನೆರವಾದ ಜನಪ್ರತಿನಿಧಿಗಳಿಗೆ ಹೂ ಮಾಲೆ ಹಾಕಿ, ಜೈಕಾರ ಹಾಕಿಧನ್ಯತಾಭಾವ ಮೆರೆದರು.ನಂತರ ಮಾತನಾಡಿದ ಶಾಸಕರು, ಈಅಲೆಮಾರಿಗಳ ಬಹುದಿನದ ಕನಸು ನನಸಾಗಿದೆ. ತಾವು ವಸತಿ ಸಚಿವ ವಿ.ಸೋಮಣ್ಣ ಅವರ ಮೇಲೆ ಒತ್ತಡ ಹಾಕಿದ ಪರಿಣಾಮ ಸಚಿವರು ಸಕಾಲದಲ್ಲಿ ಸ್ಪಂದಿಸಿದ್ದರಿಂದ ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ ನಿವೇಶನ ಮಂಜೂರಾಗಿದೆ.
ಅಲ್ಲದೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ತಾಪಂ ಇಒ ಹಾಗೂ ಕಚೇರಿ ಸಿಬ್ಬಂದಿಗಳ ಸಹಕಾರ ಸ್ಮರಿಸಿ, ಅಭಿನಂದಿಸಿದರು.ಕೋವಿಡ್ ಮುಗಿದ ನಂತರ ಇನ್ನು ಮೂರ್‍ನಾಲ್ಕು ತಿಂಗಳುಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ಅನುದಾನ ಬಿಡುಗಡೆ ಮಾಡಿಸಲಾಗುವುದು. ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡಬೇಡಿ, ಸರ್ಕಾರದಅನುದಾನದ ಜೊತೆಗೆ ಫಲಾನುಭವಿಗಳು ಸಹಹಣ ಹಾಕಿ ಉತ್ತಮ ಮನೆ ನಿರ್ಮಿಸಿಕೊಳ್ಳಬೇಕೆಂದುಸಲಹೆ ನೀಡಿದರು.ತಾಲೂಕು ಪಂಚಾಯ್ತಿ ಇಒ ಎಚ್.ಡಿ.ಗಿರೀಶ್ ಮಾತನಾಡಿ, ಇಲ್ಲಿನ ಪೋಷಕರನ್ನುಕಳೆದುಕೊಂಡ ಹೆಣ್ಣುಮಗಳಿಗೆ ಆಧಾರ್ ಕಾರ್ಡ್‌ಸಮಸ್ಯೆಯಿಂದ ಹಕ್ಕುಪತ್ರ ಸಿಕ್ಕಿಲ್ಲ, ಶೀಘ್ರ ದೊರೆಯಲಿದೆ ಎಂದರು.
ಈ ವೇಳೆ ತಹಶೀಲ್ದಾರ್ ಬಸವರಾಜ್, ತಾಪಂಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಸನ್ನ,ತಾಲೂಕು ವಸತಿ ಯೋಜನೆ ನೋಡಲ್ ಅಧಿಕಾರಿಲೋಕೇಶ, ಮರದೂರು ಗ್ರಾಪಂ ಅಧ್ಯಕ್ಷ ಕುಮಾರ್,ಉಪಾಧ್ಯಕ್ಷೆ ಸಿದ್ದಮ್ಮ, ಗ್ರಾಪಂ ಸದಸ್ಯರಾದವೆಂಕಟೇಶಾಚಾರಿ, ಸಾವಿತ್ರಮ್ಮ, ಪವಿತ್ರ, ಶಿವರಾಜ್,ಸಾವಿತ್ರಮ್ಮ, ಗೀತಾ, ಶಿವರಾಜ್, ಕುಮಾರ್, ಪಿಡಿಒಧರ್ಮೇಂದ್ರ ಹಾಗೂ ಕಾಲೋನಿ ನಿವಾಸಿಗಳು ಉಪಸ್ಥಿತರಿದ್ದರು.
ಸಂಪತ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.