ಜನ ಜೀವ ಬಿಡುತ್ತಿದ್ದರೂ ಜೀವರಕ್ಷಕ ಬಳಸುತ್ತಿಲ್ಲ
Team Udayavani, May 2, 2021, 6:57 PM IST
ಮೈಸೂರು: ಕೊರೊನಾ ಆರಂಭದ ಕಾಲದಲ್ಲಿ ಸರ್ಕಾರಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಿದ್ದವೆಂಟಿಲೇಟರ್‌ಗಳು ಆಪರೇಟರ್ ಮತ್ತು ಅನುಭವಿಸಿಬ್ಬಂದಿಯಿಲ್ಲದೇ ರೋಗಿಗಳ ಬಳಕೆಗೆ ಲಭ್ಯವಾಗದೆನಿರುಪಯುಕ್ತವಾಗಿ ಮೂಲೆ ಸೇರಿವೆ.
ತಾಲೂಕು ಆಸ್ಪತ್ರೆಗಳು ಆರಂಭವಾಗಿ ಹಲವಾರುವರ್ಷಗಳಾದರೂ ವೆಂಟಿಲೇಟರ್ ಹಾಗೂ ಆಕ್ಸಿಜನ್‌ಹಾಸಿಗೆಗಳಿಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದವು. ಕಳೆದಬಾರಿ ಕೊರೊನಾ ಅಬ್ಬರದ ಸಂದರ್ಭದಲ್ಲಿ ಜಿಲ್ಲಾಡಳಿತಗ್ರಾಮೀಣ ಪ್ರದೇಶದ ಸೋಂಕಿತರಿಗೆ ಅನುಕೂಲಮಾಡಿಕೊಡುವ ದೃಷ್ಟಿಯಿಂದ ತಾಲೂಕಿನ ಎಲ್ಲಆಸ್ಪತ್ರೆಗಳಿಗೂ ತಲಾ 04ರಿಂದ 06 ವೆಂಟಿಲೇಟರ್‌ಅಳವಡಿಸಿತ್ತು.
ಆದರೆ ಅಂದಿನಿಂದ ಇಂದಿನವರೆಗೂಹಲವು ಆಸ್ಪತ್ರೆಗಳಲ್ಲಿ ಆ ವೆಂಟಿಲೇಟರ್‌ಗಳ ಸದ್ಬಳಕೆಆಗಿಲ್ಲ. ಹೀಗಾಗಿ ರೋಗಿಗಳು ಆಕ್ಸಿಜನ್, ವೆಂಟಿಲೇಟರ್‌ಬೆಡ್‌ಗಾಗಿ ಮೈಸೂರು ನಗರದ ಆಸ್ಪತ್ರೆಗಳಿಗೆಅಲೆಯುವಂತಾಗಿರುವುದು ಒಂದೆಡೆಯಾದರೆ, ತಜ್ಞಸಿಬ್ಬಂದಿ ಕೊರತೆಯಿಂದ ಲಕ್ಷಾಂತರ ರೂ. ಮೌಲ್ಯದವೆಂಟಿಲೇಟರ್ ನಿರುಪಯುಕ್ತವಾಗಿವೆ.ಆಪರೇಟರ್, ಅನುಭವಿ ಸಿಬ್ಬಂದಿ ಕೊರತೆ: ತುರ್ತುಅಗತ್ಯಕ್ಕಾಗಿ ಜಿಲ್ಲಾಡಳಿತ ಎಲ್ಲ ತಾಲೂಕುಗಳಿಗೂವೆಂಟಿಲೇಟರ್ ನೀಡಿದೆ.
ಆದರೆ, ವೆಂಟಿಲೇಟರ್‌ಆಪರೇಟ್ ಮಾಡುವ ಸಿಬ್ಬಂದಿಯನ್ನಾಗಲಿ ಅಥವಾಅನುಭವ ಇರುವ ಸಿಬ್ಬಂದಿಯನ್ನು ನೇಮಿಸುವಕೆಲಸವನ್ನು ಈವರೆಗೆ ಆರೋಗ್ಯ ಇಲಾಖೆಮಾಡಿರುವುದರಿಂದ ಅಷ್ಟೂ ವೆಂಟಿಲೇಟರ್‌ಗಳುಸದ್ಬಳಕೆಯಾಗುತ್ತಿಲ್ಲ.
ಸಿಬ್ಬಂದಿಯ ಹಿಂದೇಟು: ತಾಲೂಕು ಆಸ್ಪತ್ರೆಗಳಲ್ಲಿಈಗಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ನರ್ಸ್‌ಗಳಿಗೆವೆಂಟಿಲೇಟರ್‌ಗಳ ಬಳಕೆ ಸಂಬಂಧ ಅನುಭವದಕೊರತೆಯಿಂದಾಗಿ ಅದರ ಬಳಕೆಗೆ ಹಿಂದೇಟುಹಾಕುತ್ತಿದ್ದಾರೆ. ಪರಿಣಾಮ ತುರ್ತು ಪರಿಸ್ಥಿತಿಯಲ್ಲಿರುವರೋಗಿಗಳು ಮೈಸೂರು ನಗರದತ್ತ ಮುಖಮಾಡುವಂತಾಗಿದೆ.
ಹೆಚ್ಚಿದ ಒತ್ತಡ: ವೆಂಟಿಲೇಟರ್ ಅಗತ್ಯವಿರುವರೋಗಿಗಳು ತಾಲೂಕು ಆಸ್ಪತ್ರೆಗೆ ಹೋದರೂ, ಅವರಿಗೆವೆಂಟಿಲೇಟರ್ ಬೆಡ್‌ಗಳಿಲ್ಲ ಎಂದು ಸಬೂಬು ಹೇಳಿಮೈಸೂರು ನಗರಕ್ಕೆ ಕಳುಹಿಸುತ್ತಿರುವುದರಿಂದ ತುರ್ತುಚಿಕಿತ್ಸೆ ಅಗತ್ಯವಿರುವ ನೂರಕ್ಕೂ ಹೆಚ್ಚು ಕೊರೊನಾರೋಗಿಗಳು ನಿತ್ಯ ಮೈಸೂರಿಗೆ ಆಗಮಿಸುತ್ತಿದ್ದಾರೆ.ಈಗಾಗಲೇ ಎಲ್ಲ ಆಸ್ಪತ್ರೆಗಳಲ್ಲೂ ವೆಂಟಿಲೇಟರ್ ಹಾಗೂಆಕ್ಸಿಜನ್ ಬೆಡ್‌ಗಳ ಕೊರತೆ ಎದುರಾಗಿರುವುದರಿಂದನಗರದ ಆಸ್ಪತ್ರೆಗಳಿಗೆ ಹೆಚ್ಚು ಒತ್ತಡ ಬಿದ್ದಂತಾಗಿದೆ.
ಜಿಲ್ಲಾ ಹೆಡ್ಕ್ವಾಟ್ರಸ್ನಲ್ಲಿ ವೈದ್ಯರು: ಜಿಲ್ಲೆಯ ಎಲ್ಲತಾಲೂಕು ಆಸ್ಪತ್ರೆಗಳ ಬಹುಪಾಲು ಸರ್ಜನ್‌ಗಳು, ವೈದ್ಯರು ಹಾಗೂ ತಾಲೂಕು ಆರೋಗ್ಯಧಿಕಾರಿಗಳು ಜಿಲ್ಲಾ ಹೆಡ್‌ಕ್ವಾಟ್ರಸ್‌ನಲ್ಲೇ ವಾಸವಿರುವುದರಿಂದ ತುರ್ತು ಚಿಕಿತ್ಸೆ ಲಭ್ಯವಿರುವ ರೋಗಿಗಳಿಗೆವೈದ್ಯರ ಅಲಭ್ಯತೆಯಿಂದ ರೋಗಿಗಳ ಸ್ಥಿತಿ ಗಂಭೀರವಾಗುವುದಲ್ಲದೇ, ಮೈಸೂರಿಗೆ ತೆರಳುವಾಗಮಾರ್ಗ ಮಧ್ಯೆಯೇ ಮೃತಪಡುವ ದುರಂತಗಳುನಡೆಯುತ್ತಿವೆ.
ಕೋಟೆಯಲ್ಲಿ 4 ಯಂತ್ರನಿರುಪಯುಕ್ತ: ಶಾಸಕಎಚ್.ಡಿ.ಕೋಟೆತಾಲೂಕು ಆಸ್ಪತ್ರೆಯಲ್ಲಿ04 ವೆಂಟಿಲೇಟರ್‌ಗಳಿದ್ದರೂ ಆಪರೇಟರ್, ಅನುಭವಿ ವೈದ್ಯರಿಲ್ಲದೇಬಳಕೆಯಾಗದೆ ನಿರುಪಯುಕ್ತವಾಗಿವೆ.ಕೂಡಲೇ ಜಿಲ್ಲಾಡಳಿತ ಅಗತ್ಯ ಸಿಬ್ಬಂದಿ ನೇಮಕ ಮಾಡಿ, ಕೊರೊನಾರೋಗಿಗಳಿಗೆ ವೆಂಟಿಲೇಟರ್ ಸೌಲಭ್ಯಸಿಗುವಂತಾಗಬೇಕು ಎಂದು ಎಚ್.ಟಿ. ಕೋಟೆಶಾಸಕ ಅನಿಲ್ ಚಿಕ್ಕಮಾದು ತಿಳಿಸಿದ್ದಾರೆ.
ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!
Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.