ಅಹಿಂದ ಚಳುವಳಿಗೆ ಆರ್.ಎಲ್.ಜಾಲಪ್ಪ ಪ್ರೇರಣೆ: ಪಿ.ವೈ.ಮಲ್ಲೇಶ್
Team Udayavani, Dec 20, 2021, 7:31 PM IST
ಪಿರಿಯಾಪಟ್ಟಣ: ರಾಜ್ಯದಲ್ಲಿ ಅಹಿಂದ ಚಳುವಳಿಗಳು ಜಾಗೃತವಾಗಲು ಅಡಿಪಾಯ ಹಾಕಿದವರಲ್ಲಿ ಆರ್.ಎಲ್.ಜಾಲಪ್ಪನವರು ಅಗ್ರಗಣ್ಯರು ಎಂದು ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಪಿ.ವೈ.ಮಲ್ಲೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಕಮಲಮ್ಮ ಕರಿಗೇಗೌಡ ಕಲ್ಯಾಣ ಮಂಟಪದಲ್ಲಿ ಇತ್ತಿಚಿಗೆ ನಿಧನರಾದ ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪನವರಿಗಾಗಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾಲಪ್ಪನವರು ಚಿಂತನಶೀಲ, ಜಾತ್ಯತೀತ ನಾಯಕತ್ವದ ಉಳ್ಳ ಹಿಂದುಳಿದ ವರ್ಗದ ಆಶಾಕಿರಣ, ಇವರು ಮೊದಲಿಗೆ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿ ಅರಸು ರವರು ಹೋರಾಟದ ಹಾದಿಯಲ್ಲಿ ಮುಂದುವರಿದು, ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಸಹಕಾರ ಹಾಗೂ ಕಂದಾಯ ಸಚಿವರಾಗಿ, ಮಾಜಿ ಪ್ರಧಾನಿ ದೇವೆಗೌಡರ ಸಚಿವ ಸಂಪುಟದಲ್ಲಿ ಕೇಂದ್ರ ಜವಳಿ ಖಾತೆ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು. ದೇವರಾಜ ಅರಸು ಅವರೊಂದಿಗೆ ಬೆಳೆದು ಬಂದ ಇವರು 1979 ರಲ್ಲಿ ಕರ್ನಾಟಕ ಕ್ರಾಂತಿ ರಂಗ ಹಾಗೂ ಅರಸು ಅವರೊಂದಿಗೆ 1980 ರಲ್ಲಿ ಜನತಾ ಪಾರ್ಟಿಗೆ ಸೇರ್ಪಡೆ ಆಗಿದ್ದರು. 1989 ರಲ್ಲಿ ಜನತಾ ದಳಕ್ಕೆ ಸೇರ್ಪಡೆ ಆಗಿದ್ದರು. ರಾಜಕಾರಣಿ, ಕೃಷಿಕ, ಶಿಕ್ಷಣ ಕ್ಷೇತ್ರದಲ್ಲೂ ಅವರು ಆಸಕ್ತಿ ಹೊಂದಿದ್ದ ಇವರು ಪ್ರಸ್ತುತ ದೇವರಾಜ ಅರಸ್ ಮೆಡಿಕಲ್ ಕಾಲೇಜು ಹಾಗೂ ಅರ್.ಎಲ್ ಜಾಲಪ್ಪ ಅಸ್ಪತ್ರೆ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿ ಶ್ರೀಮತಿ ವಿಜಯಲಕ್ಷ್ಮಿ ಆರ್.ಎಲ್.ಜಾಲಪ್ಪ ಪೌಂಡೇಶನ್ ಸಂಸ್ಥಾಪಕರಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗಾಗಿ ಸೇವೆ ಸಲ್ಲಿಸುತ್ತಿದ್ದ ಇವರು ವಯೋಸಹಜದಿಂದ ಅಕಾಲೀಕ ಮರಣಕ್ಕೆ ತುತ್ತಾಗಿರುವುದು ಅಹಿಂದ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಈಡಿಗ ಸಮಾಜದ ಮುಖಂಡ ಜೆ.ಮೋಹನ್ ಮಾತನಾಡಿ ಉತ್ತಮ ಆಡಳಿತಗಾರರಾಗಿ ಮೇರು ವ್ಯಕ್ತಿತ್ವದ ನಾಯಕರಾಗಿದ್ದ ಜಾಲಪ್ಪನವರು ಹಿಂದುಳಿದ ಸಮುದಾಯಗಳ ಸಮಸ್ಯೆಗಳನ್ನು ಮನದಲ್ಲಿಟ್ಟು ಕೊಂಡು ಅಂದೇ ಅಹಿಂದ ಚಳುವಳಿಯನ್ನು ಪೋಷಿಸುಸುತ್ತ ಬಂದು ವೀರಪ್ಪಮೊಯ್ಲಿ, ಬಂಗಾರಪ್ಪ, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕ ನಾಯಕರಿಗೆ ಮಾರ್ಗದರ್ಶನ ಮಾಡುವ ಮೂಲಕ ರಾಜಕೀಯವಾಗಿ ಶಕ್ತರಾಗಲು ಕಾರಣೀಭೂತರಾದರು. ರಾಜಕೀಯ, ಶಿಕ್ಷಣ ಕ್ಷೇತ್ರಕ್ಕೆ ಜಾಲಪ್ಪನವರ ಕೊಡುಗೆ ಅಪಾರವಾಗಿದೆ. ಈಡಿಗ ಜನಾಂಗಕ್ಕೆ ಮಾತ್ರವಲ್ಲದೆ ಎಲ್ಲ ಜನಾಂಗದವರ ಪ್ರೀತಿ ಪಾತ್ರರಾಗಿದ್ದ ಇವರು 4 ಲೋಕಸಭೆ ಸದಸ್ಯರಾಗಿ 4 ಬಾರಿ ವಿಧಾನಸಭಾ ಸದಸ್ಯರಾಗುವ ಮೂಲಕ ದೇಶದ ರಾಜಕಾರಣದಲ್ಲಿ ತಮ್ಮದೆಯಾದ ಚಾಪು ಮೂಡಿಸಿದ್ದಾರೆ ಎಂದರು.
ಜಾಗೃತವಾಗಬೇಕಿದೆ:
ಜಾಲಪ್ಪನವರು ಈಡಿಗ ಜನಾಂಗಕ್ಕೆ ಸೇರಿದವರಾಗಿದ್ದು, ಅಹಿಂದ ಚಳುವಳಿಯ ಮೂಲಕ ಶೋಷಿತ ಸಮುದಾಯಗಳ ಸರ್ವತೋಮುಖ ಏಳಿಗೆಗಾಗಿ ದುಡಿಯವ ಮೂಲಕ ಅನೇಕ ನಾಯಕರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಿಕೊಟ್ಟಿದ್ದರ ಫಲವಾಗಿ ಇಂದು ಅನೇಕ ಹಿಂದುಳಿದ ವರ್ಗದ ನಾಯಕರು ಪ್ರಕಾಶಿಸುತ್ತಿದ್ದಾರೆ ಆದರೆ ಏಡಿಗ ಸಮುದಾಯ ಮಾತ್ರ ಒಳಜಗಳ ಮತ್ತು ಕಿತ್ತಾಟದಿಂದ ರಾಜಕೀಯವಾಗಿ ಕ್ಷೀಣಿಸುತ್ತಿದ್ದು ಎಚ್ಚರಿಕೆಯ ಹೆಜ್ಜೆಯನ್ನಿಡುವ ಮೂಲಕ ಜಾಗೃತರಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ವೈ.ವೆಂಕಟಯ್ಯ ಈಡಿಗರ ಸಂಘದ ಉಪಾಧ್ಯಕ್ಷ ಸಿ.ಎನ್.ನಾರಾಯಣ, ಶಿಕ್ಷಕ ಪಿ.ಟಿ.ಮಹಾದೇವ, ಮುಖಂಡರಾದ ಎಸ್. ನಿಂಗರಾಜ್, ಕುಮಾರ್,ಪಿ.ಎಂ.ಗಿರೀಶ್, ಬಾರ್ ರಾಜಶೇಖರ್, ಅಬಕಾರಿ ಕೆಂಪ್ಪಣ್ಣ, ಕೃಷ್ಣಪ್ಪ ವಿದ್ಯಾರ್ಥಿ ಗಳಾದ ಗಗನ್ ಸಂದೇಶ್, ಪ್ರೀತಿ ದೇವರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.