ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳು
Team Udayavani, Jul 4, 2017, 12:41 PM IST
ಪಿರಿಯಾಪಟ್ಟಣ: ಭಾರಿ ಪ್ರಮಾಣದ ಸಿಡಿಮದ್ದು ಸಿಡಿಸಿ ಗ್ರಾಮದ ಜನರ ನಿದ್ರೆಗೆಡಿಸುತ್ತಿರುವ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಬೆಟ್ಟದಪುರ ಸುತ್ತಮುತ್ತಲ ಗ್ರಾಮಗಳ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬೆಟ್ಟದಪುರದ ಪಕ್ಕದಲ್ಲಿ ಇರುವ ಸೀತೆಬೆಟ್ಟವೆಂಬ ತಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇಲ್ಲಿ ಪ್ರತಿದಿನ ಸಿಡಿಲಿಗೂ ಮಿಗಿಲಾಗಿ ಸಿಡಿಮದ್ದು ಸಿಡಿಸುತ್ತಿದ್ದು, ಈ ಬಗ್ಗೆ ಸ್ಥಳಿಯ ರೈತರು ಹಾಕಿರುವ ಬೋರ್ವೆಲ್ ಮತ್ತು ಸಮೀಪವೆ ಇರುವ ವೃದ್ಧರು ಮತ್ತು ಮಕ್ಕಳು ಶಬ್ದ ಮಾಲಿನ್ಯದ ನೋವನ್ನು ತಡೆದುಕೊಳ್ಳದೆ ಜನರಿಗೆ ಎಲೆಕ್ಟ್ರಾನಿಕ್ ವಸ್ತುಗಳು, ಟೀವಿ, ಮತ್ತು ಫ್ರಿಜ್ಗಳು ಶಬ್ದಕ್ಕೆ ಸುಟ್ಟುಹೋಗುತ್ತಿದ್ದು ಇದರಿಂದ ಜನರಿಗೆ ತುಂಬಾ ತೊಂದರೆಯಾಗಿದೆ ಎಂದು ಸಂಬಂಧಪಟ್ಟ ಗಣಿ ಇಲಾಖೆಗೆ ಹಲವಾರು ಬಾರಿ ರೈತರು ದೂರು ನೀಡುತ್ತಿದ್ದು ಇದುವರೆಗೂ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ.
ಅಲ್ಲದೇ ರಾತ್ರಿ ಎಂಟು ಗಂಟೆಯ ನಂತರ ಸಿಡಿಮದ್ದು ಸಿಡಿಸುವುದರಿಂದ ಯಾವುದೇ ಅಧಿಕಾರಿಗಳು ರಾತ್ರಿ ವೇಳೆ ಬರುವುದಿಲ್ಲ ಮತ್ತು ಯಾವುದೇ ಗಣಿಗಾರಿಕೆಗೆ ಸುಪ್ರೀ ಕೋರ್ಟ್ ರಾತ್ರಿ ವೇಳೆಯಲ್ಲಿ ಗಣಿಗಾರಿಕೆ ನಡೆಸಿ ವನ್ಯ ಜೀವಿಗಳಿಗೆ ಮತ್ತು ಯಾವುದೇ ಶಬ್ದ ಮಾಲಿನ್ಯ ಮಾಡದಂತೆ ಆದೇಶವಿದ್ದರೂ ರಾತ್ರಿಯೆಲ್ಲ ಗಣಿಗಾರಿಕೆ ಮಾಡಿ ಜನರಿಗೆ ನಿದ್ದೆ ಬಾರದಂತೆ ತೊಂದರೆಯಾಗಿದೆ.
ಕೂಡಲೇ ಸಂಬಂಧಿಸಿದ ಗಣಿ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಮೈಸೂರಿನ ಗಣಿಗಾರಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಬೆಟ್ಟದಪುರ ಮತ್ತು ಸುತ್ತಮುತ್ತಲ ಗ್ರಾಮಗಳಾದ ಕೂರಗಲ್ಲು, ಬ್ಯಾಡರಬಿಳಗುಲಿ, ಮಂಟಿಬಿಳಗೂಲಿ, ಜೋಗನಹಳ್ಳಿ, ಸಾಲುಕೊಪ್ಪಲು ಜನರು ಮತ್ತು ರೈತರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.