ಗುಲಾಬಿ ನೀಡಿ ಜಾಗೃತಿ ಮೂಡಿಸಿದ ಅಧಿಕಾರಿಗಳು
Team Udayavani, Jun 21, 2017, 1:01 PM IST
ಹುಣಸೂರು: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಪಟ್ಟಣವನ್ನು ಬಯಲು ಶೌಚಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಬಯಲಿನಲ್ಲಿ ಮಲ ವಿಸರ್ಜಿಸುವವರಿಗೆ ಗುಲಾಬಿ ಹೂ ನೀಡಿ, ಹಣ ಕೊಡುತ್ತೇವೆ ಶೌಚಾಯಲ ಕಟ್ಟಿಸಿರಿ ಹಾಗೂ ಶೌಚ ಬಳಸಿರೆಂಬ ಜಾಗೃತಿ ಮೂಡಿಸುವ ಹೊಸ ಕಾರ್ಯ ಕ್ರಮವನ್ನು ಹುಣಸೂರು ನಗರಸಭೆ ಕಳೆದೊಂದು ವಾರದಿಂದ ಹಮ್ಮಿಕೊಂಡು ನದಿ ತೀರಕ್ಕೆ ಶೌಚಕ್ಕೆ ಬರುತ್ತಿದ್ದವರಲ್ಲಿ ಅರಿವು ಮೂಡಿಸುತ್ತಿದೆ.
ಮುಂಜಾನೆಯಿಂದಲೇ ಕೆಲ ನಾಗರಿಕರು ಮಲ ವಿಸರ್ಜನೆ ಮಾಡುವ ಪದ್ಧತಿಗೆ ಕೊನೆ ಹಾಡುವ ನಿಟ್ಟಿನಲ್ಲಿ ನಗರಸಭೆ ಪರಿಸರ ಎಂಜಿನಿಯರ್ ರವಿಕುಮಾರ್ ನೇತತ್ವದಲ್ಲಿ ಆರೋಗ್ಯ ಶಾಖೆಯ ಮೋಹನ್, ಸತೀಶ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜವಾಬ್ದಾರಿ ಹೊತ್ತಿರುವ ಭಗೀರಥ ಸಂಸ್ಥೆಯ ನಂಜುಂಡಸ್ವಾಮಿ, ಜಗದೀಶ್ ಒಗ್ಗೂಡಿ ಕಾವೇರಿ ಉಪನದಿಗಳಲ್ಲೊಂದಾಗಿರುವ ನಗರದ ಲಕ್ಷ್ಮಣತೀರ್ಥ ನದಿಯಿಂದ ನೀರು ಪೂರೈಸುವ ಪಂಪ್‌ಹೌಸ್‌ನ ಅಕ್ಕ-ಪಕ್ಕದಲ್ಲೇ ವಾರದಿಂದ ನಿತ್ಯ ಬೆಳಗಿನ ಜಾವ ಮಲ ವಿಸರ್ಜನೆ ಮಾಡಲು ನದಿತೀರಕ್ಕೆ ಬರುವ ಮಂದಿಯನ್ನು ತಡೆದು ಹೂ ನೀಡಿ ಮನವೊಲಿಸಿ ಅವರಲ್ಲಿ ಆರೋಗ್ಯ ಜಾಗತಿಯುಂಟುಮಾಡಿ ವಾಪಾಸ್ ಕಳುಹಿಸುವ ಹಾಗೂ ಜಾಗತಿಯುಂಟು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೂ ಕಂಡು ನಾಚಿ ಓಡಿದರು: ಆರಂಭದಲ್ಲಿ ಹಲವರು ಅಧಿಕಾರಿಗಳು ಗುಲಾಬಿ ಹೂ ನೀಡುವುದನ್ನು ಕಂಡು ನಾಚಿಕೊಂಡು ಓಡಿ ಹೋದವರು ಅನೇಕರಿದ್ದಾರೆ. ಬಹುಮಂದಿ ಇನ್ಮುಂದೆ ಇಲ್ಲಿಗೆ ಶೌಚಕ್ಕಾಗಿ ಬರುವುದಿಲ್ಲವೆಂಬ ವಾಗ್ಧಾನ ಮಾಡಿ ತೆರಳಿದರು. ಏನೂ ಅರಿಯದ ಕೆಲ ಮಂದಿ ನಮಗೇಕೆ ಹೂವು ಕೊಡ್ತಿರಾ, ನಮ್ಮ ಮನೆ ಬಳಿ ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳವಿಲ್ಲ, ಕಟ್ಟಿಕೊಂಡರೆ ಸರಿಯಾಗಿ ಹಣ ಕೊಡಲ್ಲವೆಂದು ಸಬೂಬು ಹೇಳಿದರಾದರೂ ಅವರಿಗೆ ತಿಳಿವಳಿಕೆ ಹೇಳಿ ಮನವೊಲಿಸುವಲ್ಲಿ ತಂಡ ಯಶಸ್ವಿಯಾಗಿದೆ. ವಾರದ ನಂತರ ನಿತ್ಯ ಬಯಲು ಶೌಚಕ್ಕೆ ಬರುತ್ತಿದ್ದ ಜನರು ತಮ್ಮ ತಪ್ಪು ಅರಿತು ಬರುವುದನ್ನೇ ಬಿಟ್ಟಿರುವುದು ಗುಲಾಬಿ ಹೂವು ಪರಿಣಾಮಕಾರಿ ಕೆಲಸ ಮಾಡಿದೆ.
ಸ್ವಚ್ಛತೆ ಕಾಪಾಡಿ: ಮೆಸೂರು ಜಿಲ್ಲೆಯಲ್ಲಿ ಡೆಂ à ಜ್ವರ ಮತ್ತು ಚಿಕನ್ ಗೂನ್ಯಾ ರೋಗಗಳು ಹರಡುತ್ತಿರುವುದರಿಂದ ಸಾರ್ವಜನಿಕರು ಈ ರೋಗ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ನೀರಿನ ತೊಟ್ಟಿಗಳು, ಡ್ರಮ್‌ಗಳು, ಬ್ಯಾರೆಲ್‌ಗಳು, ಏರುಕೂಲರ್ ಕುಂಡಗಳು ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ತೊಳೆದು ಒಣಗಿಸಿ ನೀರನ್ನು ಮತ್ತೆ ಭರ್ತಿಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ .
9 ಶೌಚಮುಕ್ತ ವಾರ್ಡ್: ನಗರದಲ್ಲಿ 27 ವಾರ್ಡ್‌ಗಳ ಪೆಕಿ ಕೇವಲ 9 ವಾರ್ಡ್‌ಗಳು ಮಾತ್ರ ಬಯಲು ಶೌಚಮುಕ್ತ ವಾರ್ಡ್‌ಗಳಾಗಿವೆ. ಮುಂದಿನ ದಿನಗಳಲ್ಲಿ ಇನ್ನುಳಿದ ಎಲ್ಲ ವಾರ್ಡ್‌ಗಳನ್ನು ಮಲ ಬಯಲು ಮುಕ್ತವಾಗಿಸಲು ಕಾರ್ಯಕ್ರಮ ರೂಪಿಸಿದ್ದು, ಜಾಥಾ ನಡೆಸುವುದು, ಮನೆಗಳಿಗೆ ಕರಪತ್ರ ತಲುಪಿಸುವುದು, ಬೀದಿ ನಾಟಕ ಹಾಗೂ ವಿಶೇಷವಾಗಿ ಬಯಲು ಬಳಸುವ ಜನರಿಗೆ ಗುಲಾಬಿ ಹೂ ನೀಡುವ ಕಾರ್ಯಕ್ರಮದ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಇದು ಸಾಕಷ್ಟು ಪರಿಣಾಮಕಾರಿಯಾಗಿದೆ. ಹೂ ನೀಡುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅಧಿಕಾರಿಗಳ ತಂಡದೊಂದಿಗೆ ನಗರ ಸಭೆಯ ಸಿಬ್ಬಂದಿ ಕೃಷ್ಣೇಗೌಡ, ಸೋಮಯ್ಯ, ಸುಧೀರ್ ಭಾಗವಹಿಸಿದ್ದರು.
ಪ್ರತಿಯೊಬ್ಬರು ಕಡ್ಡಾಯವಾಗಿ ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯವನ್ನು ಕಟ್ಟಿಸಿಕೊಳ್ಳಲೇಬೇಕಿದ್ದು, ಶೌಚಾಲಯ ನಿರ್ಮಿಸಿಕೊಳ್ಳಲು ನಗರಸಭೆಯಿಂದ ಸಹಾಯಧನ ಕೊಡುತ್ತಿದ್ದೇವೆ ಸಾರ್ವಜನಿಕರು ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು.
-ರವಿಕುಮಾರ್, ಪರಿಸರ ಎಂಜಿನಿಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ಹೊಸ ಸೇರ್ಪಡೆ
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.