ಪುರಾತನ ದೇವಾಲಯ ಜೀರ್ಣೋದ್ದಾರದಿಂದ ಗ್ರಾಮಗಳಲ್ಲಿ ಸುಖ,ಶಾಂತಿ: ಸೂತ್ತೂರು ಶ್ರೀ
Team Udayavani, Feb 23, 2022, 5:55 PM IST
ಹುಣಸೂರು: ಭಾರತವು ಆಧ್ಯಾತ್ಮಿಕವಾಗಿ ವಿಶ್ವದ ಗಮನಸೆಳೆದ ದೇಶ, ಆಧ್ಯಾತ್ಮಿಕತೆ ನಮ್ಮ ಅಸ್ಮಿತೆಯೂ ಹೌದು, ಇಂದು ವಿಜ್ಞಾನ-ಖಗೋಳ, ಗಣಿತ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದಿದೆ ಎಂದು ಸೂತ್ತೂರು ಮಠದ ಶ್ರೀಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಾಗರಹೊಳೆ ಉದ್ಯಾನದಂಚಿನ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕೊಳುವಿಗೆಯ ಲಕ್ಷ್ಮಣತೀರ್ಥ ನದಿಯ ದಂಡೆಯಲ್ಲಿನ ಜೀರ್ಣೋದ್ದಾರಗೊಳಿಸಿರುವ ಚೋಳರ ಕಾಲದ ಶ್ರೀರಾಮಲಿಂಗೇಶ್ವರ ದೇವಾಲಯ ಉದ್ಘಾಟಿಸಿ, ವಿಶೇಷ ಪೂಜೆ ಸಲ್ಲಿಸಿದ ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಭಾರತವು ದೇವಾಲಯಗಳ ಬೀಡಾಗಿದ್ದು ಜನರಲ್ಲಿ ಭಕ್ತಿ ಭಾವನೆಗಳು ಇಂದಿಗೂ ಉಳಿದಿರುವುದರಿಂದಲೇ ಪುರಾತನ ದೇವಾಲಯಗಳ ಜೀರ್ಣೋದ್ದಾರಗೊಳಿಸಿ ಪೂಜಾ ಕಾರ್ಯ ನಡೆಸುತ್ತಿದ್ದಾರೆ. ವಿದೇಶಿಗರು ಭಾರತದ ಸಂಸ್ಕೃತಿ ಜೊತೆಗೆ ಪವಿತ್ರ ಗ್ರಂಥಗಳ ಸಂದೇಶಗಳಿಗೆ ಪ್ರಭಾವಿತರಾಗುತ್ತಿರುವ ದಿನಮಾನಸದಲ್ಲೇ ಆಧುನಿಕತೆಗೆ ಮಾರು ಹೋಗುತ್ತಿರುವ ಯುವ ಜನಾಂಗವು ನಮ್ಮ ಸಂಸ್ಕೃತಿ, ಆಚಾರ,ವಿಚಾರದಿಂದ ವಿಮುಖರಾಗುತ್ತಿರುವುದು ಬೇಸರದ ಸಂಗತಿ. ಆದರೂ ಸಹ ಹಳ್ಳಿಗಳಲ್ಲಿ ಆತ್ಯಾತ್ಮಿಕತೆ, ಆಚಾರ ವಿಚಾರ,ಸಂಸ್ಕೃತಿ ಉಳಿವಿಗೆ ಒಂದಿಲ್ಲೊಂದು ಕಾರ್ಯಕ್ರಮಗಳು, ದೇವಾಲಯಗಳ ಜೀರ್ಣೋದ್ದಾರ ಕೈಗೊಂಡು ನಮ್ಮ ಸಂಸ್ಕೃತಿ ಉಳಿವಿಗಾಗಿ ಶ್ರಮ ಹಾಕುತ್ತಿರುವುದು ತುಸು ನೆಮ್ಮದಿ ಎನಿಸಿದೆ. ಇವೆಲ್ಲಾ ಗ್ರಾಮದ ಒಳಿತಿಗಾಗಿ ಎಂದರು.
ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಮಾತನಾಡಿ ಚೋಳರ ಕಾಲದ ಪುರಾಣ ಪ್ರಸಿದ್ದ ಶ್ರೀ ರಾಮಲಿಂಗೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರಗೊಂಡಿರುವುದು ಸಂತಸದ ವಿಷಯ. ದೇವಾಲಯವು ಮನುಕುಲದ ಏಳಿಗೆ ಹಾಗೂ ಭಕ್ತರ ಬೀಡಾಗಿ ನೆಲಸಲಿ ಎಂದು ಶುಭ ಹಾರೈಸಿದರು.
ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಭವಸ್ವಾಮೀಜಿ, ಗಾವಡಗೆರೆ ಗುರುಲಿಂಗಜಂಗಮ ಮಠಾಧೀಶರಾದ ಶ್ರೀ ನಟರಾಜಸ್ವಾಮೀಜಿ, ಹುಣಸೂರು ಸಾಯಿಬಾಬಾ ಟ್ರಸ್ಟ್ ನ ಅಧ್ಯಕ್ಷ ಎಚ್.ಎನ್.ಪೇಮಕುಮಾರ್, ಮಾಜಿ ಸಂಸದ ವಿಜಯ್‌ಶಂಕರ್, ಅರ್ಪಿತಪ್ರತಾಪ್‌ಸಿಂಹ ಮಾತನಾಡಿದರು. ಸಮಾರಂಭದಲ್ಲಿ ಉದ್ಯಮಿ ಎಚ್.ಪಿ.ಅಮರ್‌ನಾಥ್, ಸಾಯಿ ಮಂದಿರದ ಧರ್ಮದರ್ಶಿ ರತ್ನಪ್ರೇಮಕುಮಾರ್, ಎಪಿಎಂಸಿ ಆದ್ಯಕ್ಷ ಮುದಗನೂರುಸುಭಾಷ್, ಗ್ರಾ,ಪಂ ಅಧ್ಯಕ್ಷರಾದ ಶಿವಶಂಕರ್, ಉದಯ್, ಮಾಜಿ ಅಧ್ಯಕ್ಷ ಕೊಳುವಿಗೆದೇವರಾಜ್, ಮಹೇಶ್, ಜಿ.ಪಂ.ಮಾಜಿ ಸದಸ್ಯರಾದ ರಮೇಶ್‌ಕುಮಾರ್ ಕಟ್ಟನಾಯಕ, ಮುಖಂಡರಾದ ಹಂದನಹಳ್ಳಿ ಸೋಮಶೇಖರ್, ಎಚ್.ಆರ್.ರಮೇಶ್, ಹನಗೋಡುಮಂಜುನಾಥ್, ಕಿರಂಗೂರು ಬಸವರಾಜು, ಗಣಪತಿ, ದೇವರಾಜ್, ಭಾಗ್ಯಕುಮಾರ್, ನೇರಳಕುಪ್ಪೆ ಮಹದೇವ್, ಚಂದ್ರಶೇಖರ್, ರಂಜಿತಾ, ಅಣ್ಣಯ್ಯನಾಯಕ ಸೇರಿದಂತೆ ಸುತ್ತ ಮುತ್ತಲ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇಡೀ ಗ್ರಾಮವನ್ನು ಸಿಂಗರಿಸಲಾಗಿತ್ತು. ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Mysore: ಮೊಬೈಲ್ ಜೂಜಾಟ; ನಾಲ್ವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.