ಕೌಶಲ್ಯತೆ ಇದ್ದಲ್ಲಿ ಮಾತ್ರ ಉತ್ತಮ ಉದ್ಯೋಗ ಸಿಗಲಿದೆ: ಶಾಸಕ ಎಚ್.ಪಿ.ಮಂಜುನಾಥ್
Team Udayavani, Jul 29, 2022, 11:20 AM IST
ಹುಣಸೂರು: ಯುವ ವಿದ್ಯಾರ್ಥಿಗಳು ಚಂಚಲ ಮನಸ್ಸಿಗೆ ಕಡಿವಾಣ ಹಾಕಿಕೊಂಡು, ಕೌಶಲ್ಯತೆಯನ್ನು ರೂಡಿಸಿಕೊಂಡು ಶ್ರಮ ಹಾಕಿದಲ್ಲಿ ಇಂದಿನ ಪೈಪೋಟಿ ಯುಗದಲ್ಲೂ ಯಶಸ್ಸು ಸಾಧ್ಯವೆಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ಹುಣಸೂರಿನ ಸ್ನೇಹ ಜೀವಿ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಕೇಂದ್ರವು ಪದವಿ ವಿದ್ಯಾರ್ಥಿಗಳಿಗಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಒಂದು ದಿನದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬಹುತೇಕ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಕೊರತೆ ಸಾಕಷ್ಟಿದ್ದು, ಪದವಿ ನಂತರದಲ್ಲಿ ಕೆಲಸಗಳ ಸಂದರ್ಶನ ಎದುರಿಸುವಲ್ಲಿ, ಭಾಷಾ ಕೌಶಲ್ಯ, ಸಂವಹನ ಕೊರತೆಯಿಂದ ವಿದ್ಯಾರ್ಥಿಗಳು ವಿಮುಖರಾಗುತ್ತಿರುವುದನ್ನು ಗಮನಿಸಿ ಸ್ನೇಹಜೀವಿ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಕೇಂದ್ರದ ವತಿಯಿಂದ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಕೌಶಲ್ಯತೆ ಕುರಿತ ತರಬೇತಿ ನೀಡಲಾಗುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಕೌಶಲ್ಯತೆಯೊಂದಿಗೆ ನಿಮಗಿಷ್ಟವಾದ ಹುದ್ದೆಗಳನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಬ್ರಾಂಡ್ ಕಸ್ಟಮ್ ಪಬ್ಲಿಕ್ ಸ್ಪೀಕರ್ ಸುಂದ್ರ ಪದವಿ ನಂತರ ಮುಂದೆ ಏನು ಎನ್ನುವ ವಿಷಯದ ಕುರಿತು ಮಾತನಾಡಿ, ಕೇವಲ ಡಾಕ್ಟರ್, ಎಂಜಿನಿಯರ್ ಎನ್ನುವುದಕ್ಕಿಂತ ಕೌಶಲ್ಯ ಅದರಿತ ಬ್ಯಾಂಕಿಂಗ್, ರಿಟೇಲ್, ಕಸ್ಟಮರ್ ಸರ್ವಿಸ್, ಫುಡ್ ಮ್ಯಾನುಫ್ಯಾಕ್ಚರಿಂಗ್, ಮಾರ್ಕೆಟಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್, ಫ್ಯಾಶನ್ ಡಿಸೈನಿಂಗ್ ಇನ್ನಿತರ ಇಂಡಸ್ಟ್ರಿ ಅವಕಾಶಗಳ ಮೂಲಕ ಅಪ್ಪುವಿನ ಜೀವನಾಧಾರಿತ ಪಿಪಿಟಿ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಯೂತ್ಸ್ ವ್ಯಾಲ್ಯೂ ಕುರಿತು ಡಾ.ರವೀಶ್, ಮ್ಯಾಜಿಕ್ ಮಂಜು ಕಿರಣ್ ಸಾಮಾಜಿಕ ಜಾಲತಾಣದ ಕುರಿತು ಸಂದರ್ಶನದ ಕೌಶಲ್ಯದ ಕುರಿತು ಡಾ. ಜಗದೀಶ್ ರಂಗ ತಿಳಿಸಿಕೊಟ್ಟರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.