ರೈಲು ನಿಲ್ದಾಣದಲ್ಲಿ ಸೈಕಲ್ ಪ್ಯೂರ್ ಅಗರ್‌ಬತ್ತೀಸ್ ಮಳಿಗೆ ಆರಂಭ
Team Udayavani, Mar 10, 2020, 3:00 AM IST
ಮೈಸೂರು: ವಿಶ್ವದ ಅತಿದೊಡ್ಡ ಅಗರಬತ್ತಿ ಮತ್ತು ಪೂಜಾ ಉತ್ಪನ್ನ ತಯಾರಿಕಾ ಸಂಸ್ಥೆಯಾಗಿರುವ ಸೈಕಲ್ ಪ್ಯೂರ್ ಅಗರ್‌ಬತ್ತೀಸ್ ಇದೀಗ ಮೈಸೂರು ರೈಲು ನಿಲ್ದಾಣದಲ್ಲಿ ಸೈಕಲ್ ಇನ್ ಹೆಸರಿನಲ್ಲಿ ಸ್ಟೋರ್ ತೆರೆದಿದೆ. ಸ್ಟೋರನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ಮ್ಯಾನೇಜರ್ ಅಪರ್ಣ ಗಾರ್ಗ್ ಮತ್ತು ಸೈಕಲ್ ಪ್ಯೂರ್ ಅಗರಬತ್ತೀಸ್‌ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಉದ್ಘಾಟಿಸಿದರು.
ಬಳಿಕ ಮಾತನಾಡಿದ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ಮ್ಯಾನೇಜರ್ ಅಪರ್ಣ ಗಾರ್ಗ್, ರೈಲು ನಿಲ್ದಾಣದಲ್ಲಿ ಸ್ಟೋರ್ ಆರಂಭಿಸಿರುವ ಸೈಕಲ್ ಪ್ಯೂರ್‌ನ ಕ್ರಮ ಶ್ಲಾಘನೀಯ. ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ಸಂಸ್ಥೆಯು ಉತ್ಪನ್ನಗಳನ್ನು ಪೂರೈಸುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೈಕಲ್ ಪ್ಯೂರ್ ಅಗರ್‌ಬತ್ತೀಸ್‌ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್‌ರಂಗ ಮಾತನಾಡಿ, ನಾವು ಅತ್ಯುತ್ತಮ್ಮ ಗುಣಮಟ್ಟದ ಪೂಜಾ ಉತ್ಪನ್ನಗಳನ್ನು ನೀಡುವುದು ಮತ್ತು ನಮ್ಮ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುವ ಉದ್ದೇಶದಿಂದ ಈ ಸ್ಟೋರ್ ತೆರೆದಿದ್ದೇವೆ. ಮಹಿಳಾ ದಿನಾಚರಣೆ ಸಂಭ್ರಮದಲ್ಲಿ ಸ್ತ್ರೀ ಸಬಲೀಕರಣಕ್ಕೂ ಇದು ದಾರಿ ಮಾಡಕೊಡಲಿದೆ.
ರೈಲ್ವೆ ಸಾರಿಗೆ ದೇಶದ ದೊಡ್ಡ ಸಾರಿಗೆ ವ್ಯವಸ್ಥೆ. ಇಂತಹ ಸ್ಥಳದಲ್ಲಿ ಸ್ಟೋರ್ ತೆರೆಯಲು ಸಂತಸವಾಗುತ್ತಿದೆ. ಸ್ಟೋರ್ ಮೂಲಕ ನಾವು ನಮ್ಮ ಗ್ರಾಹಕರ ಇನ್ನೂ ಉತ್ತಮ ಮತ್ತು ಸರಳವಾದ ರೀತಿಯಲ್ಲಿ ಎಲ್ಲಾ ಬಗೆಯ ಪೂಜಾ ಅಗತ್ಯತೆಗಳನ್ನು ಪೂರೈಸಲಿದ್ದೇವೆ ಎಂದು ಹೇಳಿದರು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂತಹ ಸ್ಟೋರ್ ಆರಂಭವಾಗಿರುವುದು ಇದೇ ಮೊದಲು. ನಗರದ ನಾಗರಿಕರು ಮತ್ತು ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಪೂಜೆಗೆ ಬಳಸುವ ಎಲ್ಲಾ ಸಾಮಗ್ರಿಗಳನ್ನು ಈ ಸ್ಟೋರ್ ಪೂರೈಸಲಿದೆ.
ದೈನಂದಿನ ಪೂಜೆ ಮತ್ತು ಹಬ್ಬಗಳಿಗೆ ಅಗತ್ಯವಾದ ಗುಣಮಟ್ಟದ ಪೂಜಾ ಉತ್ಪನ್ನಗಳನ್ನು ಮತ್ತು ಇತರೆ ಪರಿಕರಗಳನ್ನು ಸ್ಟೋರ್ ಒದಗಿಸಲಿದೆ. ನಗರದ ಹೃದಯ ಭಾಗದಲ್ಲಿ ಆರಂಭವಾಗಿರುವ ಈ ಸ್ಟೋರ್ ಮನೆಯ ಪ್ರಾರ್ಥನಾ ಸೇವೆಗೆ ಬೇಕಾದ ಸಾಮಗ್ರಿಗಳನ್ನು ಗ್ರಾಹಕರಿಗೆ ಪೂರೈಸಲಿದೆ. ಆ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಪ್ರಾರ್ಥನೆಯಲ್ಲಿ ಭಾಗಿಯಾಗಲಿದೆ.
ಏನೇನು ಸಿಗಲಿದೆ: ಸೈಕಲ್ ಇನ್ ಸ್ಟೋರ್‌ನಲ್ಲಿ ಅಗರಬತ್ತಿಗಳು, ಪೂಜಾ ಉತ್ಪನ್ನಗಳು, ಐಆರ್‌ಐಎಸ್‌ನಿಂದ ಮನೆಯ ಸುಗಂಧಗಳು ಸೇರಿದಂತೆ ಮತ್ತಿತರ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುತ್ತದೆ. ವಿವಾಹ ವಾರ್ಷಿಕೋತ್ಸವ ಮತ್ತು ಹುಟ್ಟುಹಬ್ಬಗಳಿಗೆಂದೇ ವಿಶಿಷ್ಟವಾದ ಪೂಜ ಪ್ಯಾಕ್‌ಗಳನ್ನು ಗ್ರಾಹಕರಿಗೆ ಒದಗಿಸಲಿದೆ.
ಬೆಂಗಳೂರು ಮತ್ತು ತಮಿಳುನಾಡಿನ ನಂತರ ಸಂಸ್ಥೆಯು ಮೈಸೂರಿನ ರೈಲು ನಿಲ್ದಾಣದಲ್ಲಿ ತನ್ನ ಎರಡನೇ ಸ್ಟೋರ್ ಆರಂಭಿಸಿದೆ. ಪ್ರಸ್ತುತ ಸೈಕಲ್.ಇನ್ ಮೈಸೂರಿನ ವಾಣಿವಿಲಾಸ ಡಬಲ್ ರೋಡ್, ಬೆಂಗಳೂರಿನ ರಾಜಾಜಿನಗರ, ಜಯನಗರ ಮತ್ತು ಬಸವೇಶ್ವರ ನಗರದಲ್ಲಿ ಸ್ಟೋರ್‌ಗಳನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.