Tiger: ಅರಣ್ಯ ಸಿಬ್ಬಂದಿಯನ್ನು ಕಾಡಿಸುತ್ತಿರುವ ಹುಲಿರಾಯ
Team Udayavani, Dec 11, 2023, 10:31 AM IST
ಹುಣಸೂರು: ನಾಗರಹೊಳೆ ಉದ್ಯಾನದಂಚಿನ ನೇಗ ತ್ತೂರು ಬಳಿಯ ಶೆಟ್ಟಳ್ಳಿ-ಲಕ್ಕಪಟ್ಟಣ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿ ಪತ್ತೆಗಾಗಿ ಅಳವಡಿಸಿರುವ ಕ್ಯಾಮೆ ರಾದಲ್ಲಿ ಹುಲಿಯ ಛಾಯಾಚಿತ್ರ ಸೆರೆಯಾಗಿದ್ದರೆ, ಇತ್ತ ಕೂಂಬಿಂಗ್ ನಡೆಸುತ್ತಿರುವ ಸಿಬ್ಬಂದಿಯನ್ನು ಕಾಡಿಸುತ್ತಿದೆ.
ತಾಲೂಕಿನ ಹನಗೋಡು ಹೋಬಳಿ ನೇಗತ್ತೂರಿನ ಲಕ್ಷ್ಮಮ್ಮ ಚಂದ್ರೇಗೌಡರಿಗೆ ಸೇರಿದ 2 ಹಸುಗಳನ್ನು ಬಲಿ ಪಡೆದ ನಂತರ ಹುಲಿ ಪತ್ತೆಗಾಗಿ ಎಸಿಎಫ್ ದಯಾನಂದ್ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಸುಬ್ರಹ್ಮಣ್ಯರ ನೇತೃತ್ವದಲ್ಲಿ ಡಿಆರ್‌ಎಫ್‌ಒಗಳಾದ ಸಿದ್ದರಾಜು, ವೀರಭದ್ರಯ್ಯ, ಅರಣ್ಯ, ಆರ್‌ಆರ್‌ಟಿ ಸಿಬ್ಬಂದಿ ಹಾಗೂ ಸಾಕಾನೆಗಳಾದ ಗಣೇಶ, ಶ್ರೀರಂಗ ಸಹಾಯದಿಂದ 3 ದಿನಗಳಿಂದ ಕೂಂಬಿಂಗ್ ನಡೆಸುತ್ತಿ ದ್ದರೂ ಹುಲಿ ಮಾತ್ರ ಪತ್ತೆಯಾಗುತ್ತಿಲ್ಲ.
ಕ್ಯಾಮೆರಾದಲ್ಲಿ ಹುಲಿ ಚಿತ್ರ ಸೆರೆ: ಹುಲಿ ಕಾಣಿಸು ತ್ತಿಲ್ಲವಾದರೂ ಹುಲಿಯ ಹೆಜ್ಜೆ ಪತ್ತೆಯಾಗಿದೆ. ಕ್ಯಾಮೆ ರಾಕ್ಕೆ ಎರಡನೇ ಬಾರಿಗೆ ಹುಲಿ ಸೆರೆಯಾಗಿದೆ. ಅರಣ್ಯ ದಂಚಿನ ಜಮೀನುಗಳಲ್ಲಿ ಕೆಲಸ ಮಾಡುತ್ತಿರುವ ರೈತ ರಿಗೆ ಹುಲಿ ಇರುವಿಕೆ ಕುರಿತು, ರಾತ್ರಿ ವೇಳೆ ಒಂಟಿಯಾಗಿ ತಿರುಗಾಡಬಾರದು ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡ ಲಾಗಿದೆ ಎಂದು ಆರ್‌ಎಫ್‌ಒ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಚಳ್ಳೆಹಣ್ಣು ತಿನ್ನಿಸುತ್ತಿರುವ ಹುಲಿ: ಹನಗೋಡು ಭಾಗದಲ್ಲಿ 6 ತಿಂಗಳಿನಿಂದ ಈ ಹುಲಿಯು ಒಮ್ಮೆ ಹನ ಗೋಡು, ಮತ್ತೂಮ್ಮೆ ನೇಗತ್ತೂರು, ಕಾಳಬೂಚನಹಳ್ಳಿ, ಉಡುವೆಪುರ ಹೀಗೆ ಸುತ್ತಮುತ್ತಲ ಗ್ರಾಮಗಳಲ್ಲಿ ಬೇಟೆ ಯಾಡಿ ಕಾಣದಂತೆ ಮಾಯವಾಗುವ ಈ ಹುಲಿಯ ಬಗ್ಗೆ ರೈತರು ದೂರು ನೀಡಿದ್ದರು. ಇತ್ತೀಚೆಗೆ ಹನ ಗೋಡು ಗ್ರಾಮದ ರಸ್ತೆ ದಾಟಿರುವ ಹುಲಿಯನ್ನು ಕಂಡವರು ಮಾಹಿತಿ ನೀಡಿದ್ದರು. ಹೀಗಾಗಿ ಸಿಬ್ಬಂದಿ ಪರಿಶೀಲನೆ ನಡೆಸಿದ ವೇಳೆ ಇದು ಹುಲಿ ಹೆಜ್ಜೆ ಎಂದು ದೃಢಪಡಿಸಿದ್ದರು.
ಇದೀಗ ನೇಗತ್ತೂರು ಭಾಗಕ್ಕೆ ಹುಲಿ ಶಿಫ್ಟ್ ಆಗಿದೆ. 3 ದಿನಗಳ ಹಿಂದೆ 2 ಹಸುಗಳನ್ನು ಬಲಿ ಪಡೆದು ಪಕ್ಕದ ಶೆಟ್ಟಹಳ್ಳಿ-ಲಕ್ಕಪಟ್ಟಣ ಅರಣ್ಯ ಪ್ರದೇಶ ದಲ್ಲಿ ಸೇರಿಕೊಂಡಿತ್ತು. 3 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿ ಕಣ್ಣಿಗೆ ಕಾಣಿಸುತ್ತಿಲ್ಲ, ಆದರೆ, ಇಲಾಖೆಯು ಹುಲಿ ಪತ್ತೆಗಾಗಿ ಅಳವಡಿಸಿರುವ ಕ್ಯಾಮರಾ ಟ್ರಾಪಿಂಗ್‌ನಲ್ಲಿ ತನ್ನ ಇರುಕೆಯನ್ನು ತೋರ್ಪಡಿಸಿ ಜಾಣತನ ಮೆರೆಯುತ್ತಾ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ.
ಸೆರೆಗೆ ಹೆಚ್ಚಿದ ಒತ್ತಾಯ: ಶೆಟ್ಟಳ್ಳಿ-ಲಕ್ಕಪಟ್ಟಣ ಮೀಸಲು ಅರಣ್ಯ ಪ್ರದೇಶದ ರೈತರು, ಸಾರ್ವಜನಿಕರು ಜಮೀನಿಗೆ ತೆರಳಲು ಹೆದರುತ್ತಿದ್ದರೆ ಇನ್ನು ದ್ವಿಚಕ್ರವಾಹನಗಳಲ್ಲಿ ಶಾಲಾ -ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಮುಂಜಾ ನೆಯೇ ಕಾಲೇಜು ಸೇರಿದಂತೆ ಕೆಲಸಕಾರ್ಯಗಳಿಗೆ ತೆರಳಬೇಕಿದ್ದು, ಹುಲಿ ಎಲ್ಲಿಂದ ಬರುತ್ತೋ,ಯಾವ ಕಡೆಯಿಂದ ರಸ್ತೆಗೆ ಬರುವುದೋ ಎಂಬು ಜೀವ ಭಯದಲ್ಲೇ ಓಡಾಡುವಂತಾಗಿದೆ. ಬೇಗ ಹುಲಿ ಸೆರೆ ಹಿಡಿಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಹುಣಸೂರು ತಾಲೂಕಿನ ಹನಗೋಡು ಬಾಗದಲ್ಲಿ ಅಡ್ಡಾಡುತ್ತಾ ಉಪಟಳ ನೀಡುತ್ತಿರುವ ಹುಲಿಯನ್ನು ಸೆರೆ ಹಿಡಿಯಬೇಕೆಂಬ ಗ್ರಾಮಸ್ಥರ ಒತ್ತಾಯದಂತೆ ಚೀಪ್ ವೈಲ್ಡ್ ಲೈಫ್ ವಾರ್ಡ್‌ನ್‌ರವರಿಗೆ ಮಾಡಿದ್ದ ಮನವಿಯಂತೆ ಸೆರೆ ಹಿಡಿಯಲು ಅನುಮತಿ ಸಿಕ್ಕಿದೆ. ಸೋಮವಾರ ಅಧಿಕೃತ ಆದೇಶ ಕೈ ತಲುಪುವ ನಿರೀಕ್ಷೆಯಲ್ಲಿದ್ದೇವೆ. ಶೆಟ್ಟಳ್ಳಿ-ಲಕ್ಕಪಟ್ಟಣ ಅರಣ್ಯ ಪ್ರದೇಶದಲ್ಲಿ ಸೇರಿಕೊಂಡಿರುವ ಈ ಹುಲಿ ಸೆರೆಗೆ ಅಗತ್ಯ ಕ್ರಮವಹಿಸಲಾಗುವುದು. ● ಹರ್ಷಕುಮಾರ್ ಚಿಕ್ಕನರಗುಂದ, ಹುಲಿಯೋಜನೆ ನಿರ್ದೇಶಕ
–ಸಂಪತ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.