ವರದಕ್ಷಿಣೆ ಪಡೆದು ಮದುವೆಯಾಗುವರನ್ನು ವಿರೋಧಿಸಿ
Team Udayavani, Oct 12, 2019, 3:00 AM IST
ಮೈಸೂರು: ಪ್ರತಿಯೊಬ್ಬರ ಅಂತರಾಳದಲ್ಲಿ ಸಮಾನತೆಯ ಭಾವ ಮೂಡಿದರೆ ಮಾತ್ರ ಲಿಂಗಸಮಾನತೆ ತೊಲಗಿಸಲು ಸಾಧ್ಯ ಎಂದು ಕರ್ನಾಟಕ ಸರ್ಕಾರ ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಅಂಕಿಅಂಶ ವಿಭಾಗದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಭಿಪ್ರಾಯಪಟ್ಟರು. ನಗರದ ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ “ಭಾರತದಲ್ಲಿ ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಅಭಿವೃದ್ಧಿ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪದಲ್ಲಿ ಮಾತನಾಡಿದರು.
ಸಮಾಜದಲ್ಲಿ ಇಂದಿಗೂ ಹೆಣ್ಣು ಗಂಡಾಗಲು ಬಯಸುತ್ತಾರೆ. ಕಾರಣ ಗಂಡುಮಕ್ಕಳಿಗೆ ಕುಟುಂಬ, ಸಮಾಜ ನೀಡಿರುವ ಸ್ವಾತಂತ್ರ್ಯ. ಆದರೆ, ಗಂಡು ಮಕ್ಕಳು ಹೆಣ್ಣಾಗಲು ಎಂದಿಗೂ ಬಯಸುವುದಿಲ್ಲ. ಇದು ವಿಪರ್ಯಾಸ. ಪ್ರತಿಯೊಬ್ಬರ ಅಂತರಾಳದಲ್ಲಿ ಸಮಾನತೆಯ ಭಾವ ಮೂಡಬೇಕು. ಇದಕ್ಕಾಗಿ ಚರ್ಚೆ, ಜಾಗೃತಿ ಕಾರ್ಯಕ್ರಮಗಳು ಅಗತ್ಯವಾಗಿದ್ದು, ಲಿಂಗಸಮಾನತೆ ತೊಲಗಿಸಲು ಸಾಧ್ಯ ಎಂದರು.
ಇಂದು ಹೆಣ್ಣು ಮಗು ಬೇಕು ಎನ್ನುವ ಪೋಷಕರ ಸಂಖ್ಯೆ ಕಡಿಮೆಯಿದ್ದು, ಬಹುತೇಕ ಪೋಷಕರು ಹೆಣ್ಣು ಮಗುವಾದರೆ ಬ್ರೂಣಹತ್ಯೆ ಮಾಡುತ್ತಾರೆ. ಸಮಾಜದಲ್ಲಿ ಲಿಂಗ ಸಮಾನತೆಯಿಲ್ಲದೆ ಅಭಿವೃದ್ಧಿ ಅಸಾಧ್ಯ. ಲಿಂಗ ಅಸಮಾನತೆ ಎಂಬುದು ಜಗತ್ತಿನ ಎಲ್ಲೆಡೆ ಇದೆ. ಇದು ನೋವಿನ ಸಂಗತಿ. ಇಂದಿಗೂ ವರದಕ್ಷಿಣೆಯಿಲ್ಲದೇ ಮದುವೆಗಳು ನಡೆಯುವುದಿಲ್ಲ. ಯಾವ ಕಾರಣಕ್ಕಾಗಿ ವರದಕ್ಷಿಣೆ ಪಡೆಯುತ್ತಿರಿ ಎಂದು ವಿದ್ಯಾವಂತ ಹೆಣ್ಣುಮಕ್ಕಳು ವರದಕ್ಷಿಣೆ ಪಡೆಯುವವರನ್ನು ಪ್ರಶ್ನಿಸಬೇಕು. ವರದಕ್ಷಿಣೆ ಪಡೆದು ಮದುವೆಯಾಗುವವರನ್ನು ವಿರೋಧಿಸಬೇಕು ಎಂದು ಸಲಹೆ ನೀಡಿದರು.
ಪ್ರಗತಿಪರ ರೈತೆ ಕವಿತಾ ಮಿಶ್ರಾ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಪುರುಷರಷ್ಟೆ ಶ್ರಮಿಸುವಂತಹ ರೈತ ಮಹಿಳೆಯರನ್ನು ಗುರುತಿಸುವ ಕಾರ್ಯವಾಗಬೇಕಿದೆ. ರೈತರು ಕಷ್ಟದಲ್ಲಿರುವಂತಹ ಪರಿಸ್ಥಿತಿಯಲ್ಲಿ ಸರಕಾರಗಳು ಅವರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಬೇಕಿದೆ. ನಾವು ಮಾಡುವ ಯಾವುದೇ ಕಾರ್ಯವು ಕೀಳು, ಮೇಲು ಎಂಬುದಿಲ್ಲ. ಪ್ರಾಮಾಣಿಕವಾಗಿ, ಹೊಂದಾಣಿಕೆಯಿಂದ ಗಂಡು, ಹೆಣ್ಣು ಎಂಬ ಬೇಧವಿಲ್ಲದೇ ನಡೆದರೆ ಎಲ್ಲರಿಗೂ ಮಾದರಿಯಾಗಬಹು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಂ.ಶಿವಲಿಂಗೆಗೌಡ, ಡಾ.ಆರ್.ಲತಾಮಣಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.