ಸುತ್ತೂರು ಜಾತ್ರೆಗೆ ಭತ್ತ, ಕಾಣಿಕೆ ಸಂಗ್ರಹ

Team Udayavani, Dec 31, 2019, 3:00 AM IST

sutturu-ja

ನಂಜನಗೂಡು: ಮಾದಯ್ಯನ ಹುಂಡಿಯಲ್ಲಿ ಸೋಮವಾರ ಭತ್ತ ಹಾಗೂ ಕಾಣಿಕೆ ಸಂಗ್ರಹಿಸುವ ಮೂಲಕ ಸುತ್ತೂರು ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಈ ಸಾಲಿನ 2020ರ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರೆಗೆ ಭತ್ತ ಹಾಗೂ ಕಾಣಿಕೆ ಸಂಗ್ರಹಿಸುವ ಧಾರ್ಮಿಕ ಪರಂಪರೆಗೆ ಈ ಬಾರಿ ಛತ್ರ ಹೋಬಳಿಯ ಮಾದಯ್ಯನ ಹುಂಡಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

ಗ್ರಾಮಕ್ಕೆ ಆಗಮಿಸಿದ ಸುತ್ತೂರು ಶ್ರೀಗಳನ್ನು ಮಾದಯ್ಯನಹುಂಡಿ ಗ್ರಾಮಸ್ಥರಲ್ಲದೇ ಸುತ್ತಮುತ್ತಲಿನ ಹಳ್ಳಿಗಳ‌ ಸಹಸ್ರಾರು ಮಂದಿ ಬರಮಾಡಿಕೊಂಡರು. ಗ್ರಾಮದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಅದ್ಧೂರಿ ಮಾದೇಶ್ವರ ಉತ್ಸವನ್ನು ಉದ್ಘಾಟಿಸಿದ ಶ್ರೀಗಳು ಉತ್ಸವದ ಜೊತೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತಾವೂ ಸಹ ಸಾಗಿ ಬಂದರು.

ನಂತರ ಗ್ರಾಮದ ಜಗದೀಶ‌ ಅವರ ಮನೆಯ ಧಾರ್ಮಿಕ (ಭಿಕ್ಷೆ) ಕಾರ್ಯಕ್ರಮದಲ್ಲಿ ಭಾಗಿಯಾದ ದೇಶಿಕೇಂದ್ರ ಸ್ವಾಮೀಜಿಗಳು ಅಲ್ಲಿ ಭತ್ತ ಹಾಗೂ ಕಾಣಿಕೆ ಸ್ವಿಕರಿಸುವುದರ ಮುಖಾಂತರ ಭಕ್ತರಿಂದಲೇ ಸುತ್ತೂರು ಜಾತ್ರೆ ಎಂಬ ಸಂಪ್ರದಾಯಕ್ಕೆ ಮೆರುಗು ನೀಡಿದರು. ಜಾತ್ರೆಗಾಗಿ ಈ ಭಾಗದ ಪ್ರಮುಖ ಬೆಳೆ ಭತ್ತ ಹಾಗೂ ನಗದನ್ನು ಕಾಣಕೆಯಾಗಿ ಸಂಗ್ರಹಿಸುವುದು ಸುತ್ತೂರು ಮಠದ ಐತಿಹಾಸಿಕ ಪರಂಪರೆಯಾಗಿದೆ. ಸುತ್ತೂರು ಮಠವಿರುವ ತಾಲೂಕಿನ ಬಿಳಗೆರೆ ಹಾಗೂ ಛತ್ರ ಹೋಬಳಿಯಲ್ಲಿ ಈ ಕಾಣಿಕೆ ಸಂಗ್ರಹ ಪ್ರತಿ ವರ್ಷ ನಡೆಯುತ್ತಿರುವುದು ವಿಶೇಷವಾಗಿದೆ.

ಪ್ರತಿ ವರ್ಷ ಹೋಬಳಿಯ ಯಾವುದಾದರೂ ಒಂದು ಗ್ರಾಮವನ್ನು (ಸರದಿಯ ಮೇಲೆ ) ಆಯ್ಕೆ ಮಾಡಿಕೊಂಡು ಶ್ರೀಗಳು ಚಾಲನೆ ನೀಡಿದ ನಂತರ ಮಠದ ಶಿಷ್ಯರು, ಕಿರಿಯ ಶ್ರೀಗಳು ಹಾಗೂ ಭಕ್ತರು ಈ ಎರಡು ಹೋಬಳಿಗಳ ಸುಮಾರು 36 ಗ್ರಾಮಗಳಲ್ಲಿನ 3000ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಈ ಭತ್ತ ಹಾಗೂ ನಗದು ಸಂಗ್ರಹಿಸುವರು. ಜಾತ್ರೆ ಭತ್ತ ಸಂಗ್ರಹ ಚಾಲನೆ ಸಂದರ್ಭದಲ್ಲಿ ಜಿಪಂ ಸದಸ್ಯ ಗುರುಸ್ವಾಮಿ, ಹದಿನಾರು ನಂಜಪ್ಪ, ನಂಜುಂಡಸ್ವಾಮಿ ದೇವಯ್ಯ, ಸಿದ್ಧಲಿಂಗಪ್ಪ, ಜಗದೀಶ, ನಾಗಣ್ಣ, ರೇವಣ್ಣ, ಪುಟ್ಟರಾಜು, ಮಹೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿ ವರ್ಷ 500 ಕ್ವಿಂಟಲ್‌ ಭತ್ತ ಸಂಗ್ರಹ: ಸುತ್ತೂರು ಜಾತ್ರಾ ಮಹೋತ್ಸವಕ್ಕೆ ನೀಡಲೆಂದು ಬಿಳಗೆರೆ ಹಾಗೂ ಛತ್ರ ಹೋಬಳಿಯ ಭಕ್ತರು ತಾವು ಬೆಳೆದ ಭ‌ತ್ತವನ್ನು ಶೇಖರಿಸಿ ಇಟ್ಟುಕೊಂಡು ಮಠದ ಶಿಷ್ಯರು ಬಂದಾಗ ಅವರಿಗೆ ಅರ್ಪಿಸುವುದು ಇಲ್ಲಿನ ಸಂಪ್ರದಾಯವಾಗಿದೆ. ರಾಶಿ ಪೂಜೆ ಮಾಡದ ಭತ್ತವನ್ನು ಹೊಲದಿಂದ ಮನೆಗೆ ತಾರದೆ ಗದ್ದೆಯಿಂದಲೇ ಮಾರಾಟ ಮಾಡುವ ರೈತರು ಹಾಗೂ ಭತ್ತ ಬೆಳೆಯದೆ ಇದ್ದವರು ನಗದನ್ನು ಜಾತ್ರಾ ಮಹೋತ್ಸವಕ್ಕೆ ಕಾಣಿಕೆಯಾಗಿ ಅರ್ಪಿಸುವರು. ಈ ರೀತಿ ಸಂಹ್ರಹವಾಗುವ ಭ‌ತ್ತವೇ ಸುಮಾರು 500 ರಿಂದ 600 ಕ್ವಿಂಟಲ್‌ ಆಗಿರುತ್ತದೆ. ನಗದು ಸುಮಾರು 5 ರಿಂದ 6 ಲಕ್ಷ ರೂ. ಸಂಗ್ರಹವಾಗುತ್ತದೆ ಎಂದು ಜಾತ್ರಾ ಸಮತಿ ಮುಖ್ಯಸ್ಥ ಬೊಕ್ಕಳ್ಳಿ ಸುಬ್ಬಪ್ಪ ತಿಳಿಸಿದರು.

ಜ.21ರಿಂದ 6 ದಿನ ಅದ್ಧೂರಿ ಜಾತ್ರೆ: ಜ.21ರಿಂದ ಆರು ದಿನಗಳ ಕಾಲ ಸುತ್ತೂರು ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗುತ್ತದೆ. ಪ್ರತಿದಿನ ಒಂದರಿಂದ ಒಂದೂವರೆ ಲಕ್ಷ ಮಂದಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗುತ್ತದೆ. ಏಳು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ಪ್ರದರ್ಶನಗಳು ಅಹೋರಾತ್ರಿ ನಡೆಯುತ್ತವೆ. ವೈಜ್ಞಾನಿಕ, ಕೃಷಿ ವಸ್ತು ಪ್ರದರ್ಶನ ಇರುತ್ತದೆ. ಧಾರ್ಮಿಕ ಕಾರ್ಯಕ್ರಮಗಳು, ರೈತರೊಂದಿಗೆ ಸಂವಾದ, ಸಾಮೂಹಿಕ ವಿವಾಹ ಮಹೋತ್ಸವ, ದನಗಳ ಜಾತ್ರೆ, ಕುಸ್ತಿ ಸೇರಿದಂತೆ ದೇಸಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಸಚಿವರು, ಶಾಸಕರು ಮತ್ತಿರರ ಗಣ್ಯರು ಭಾಗಿಯಾಗುವರು.

ಟಾಪ್ ನ್ಯೂಸ್

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

3-hunsur

Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

2

Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.