ಗೌತಮ ದೊಡ್ಡರಥವಿಲ್ಲ, ಚಿಕ್ಕತೇರಿನಲ್ಲೇ ಎಲ್ಲ


Team Udayavani, Mar 22, 2021, 1:18 PM IST

ಗೌತಮ ದೊಡ್ಡರಥವಿಲ್ಲ, ಚಿಕ್ಕತೇರಿನಲ್ಲೇ ಎಲ್ಲ

ನಂಜನಗೂಡು: ಕೋವಿಡ್ ದಿಂದ ಕಳೆದ ವರ್ಷ ರದ್ದಾಗಿದ್ದ ಶ್ರೀಕಂಠೇಶ್ವರನ ಗೌತಮ ಪಂಚ ಮಹಾ ರಥೋತ್ಸವ ಈ ವರ್ಷ ಕೂಡ ಗೊಂದಲದಗೂಡಾಗಿದೆ. ಮಾ.26ರಂದು ಗೌತಮ ಪಂಚ ಮಹಾರಥೋತ್ಸವ ನಡೆಸಲು ಉದ್ದೇಶಿಸಿದ್ದು, ಇನ್ನು 4 ದಿನ ಮಾತ್ರ ಬಾಕಿ ಇದೆ. ಆದರೆ, ಚಿಕ್ಕ ತೇರಿನಲ್ಲಿ ಪಂಚ ಮಹಾ ರಥೋತ್ಸವ ನಡೆಸಲು ಮಾತ್ರ ಜಿಲ್ಲಾಧಿಕಾರಿಆದೇಶಿಸಿದ್ದಾರೆ. ಇತ್ತ ಭಕ್ತರು ದೊಡ್ಡ ತೇರಿನಲ್ಲಿ ಉತ್ಸವ ನಡೆಸಲು ಬಿಗಿ ಪಟ್ಟು ಹಿಡಿದಿದ್ದಾರೆ.

ಪ್ರತಿ ವರ್ಷ ಮಾರ್ಚ್‌ನಲ್ಲಿ ನಡೆಯುತ್ತಿದ್ದ ದೊಡ್ಡ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು.ಆದರೆ, ಕಳೆದ ವರ್ಷ ಲಾಕ್‌ಡೌನ್‌ ಘೋಷಿಸಿದ್ದರಿಂದ ಜಾತ್ರೆಯನ್ನು ರದ್ದುಪಡಿಸಲಾಗಿತ್ತು.

ಭಕ್ತರು, ಸ್ಥಳೀಯರ ಬೇಡಿಕೆ: ಇತ್ತ ಭಕ್ತ ಮಂಡಳಿ ಹಾಗೂ ಸ್ಥಳೀಯ ನಾಗರಿಕರು ದೊಡ್ಡ ತೇರುಎಳೆಯಲು ಅವಕಾಶ ನೀಡಬೇಕು, ಬೇರೆ ಕಡೆನಿರ್ಬಂಧಗಳೊಂದಿಗೆ ಜಾತ್ರೆ ನಡೆಸಲು ಅನುಮತಿನೀಡಲಾಗಿದೆ. ಇದೇ ರೀತಿ ಶ್ರೀಕಂಠೇಶ್ವರನ ಗೌತಮ ಪಂಚ ಮಹಾ ರಥೋತ್ಸವ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿಸಚಿವರಿಗೆ ಮುತ್ತಿಗೆ ಹಾಕಿದ್ದರು. ಜೊತೆಗೆಶ್ರೀಕಂಠೇಶ್ವರನ ಭಕ್ತ ಮಂಡಳಿ, ಯುವ ಬ್ರಿಗೇಡ್‌,ಕನ್ನಡ ಪರ ಸಂಘಟನೆಗಳ ಮುಖಂಡರುಶನಿವಾರನಂಜನಗೂಡ್‌ ಬಂದ್‌ ಯಶಸ್ವಿಯಾಗಿ ನಡೆಸಿ ಬಿಸಿ ಮುಟ್ಟಿಸಿದ್ದರು.

ಶ್ರೀಕಂಠೇಶ್ವರನ ದೊಡ್ಡ ಜಾತ್ರೆಯಲ್ಲಿ ದೊಡ್ಡ ರಥವೇ ಬೇಕು, ಗೌತಮ ಮಹರ್ಷಿಗಳ ಹೆಸರಿನ 100ಟನ್‌ ಭಾರದ 80 ಅಡಿ ಎತ್ತರದ ಬೃಹತ್‌ ತೇರಿನಲ್ಲಿಶ್ರೀಕಂಠೇಶ್ವರನ ಜಾತ್ರೆ ನಡೆಸಿದರೆ ಅದಕ್ಕೆ ಶೋಭೆ.ಹೀಗಾಗಿ ದೊಡ್ಡ ತೇರು ಬೇಕೇ ಬೇಕು ಎಂದು ಪಟ್ಟಿಹಿಡಿದಿದ್ದಾರೆ. ಜೊತೆಗೆ ವಾಟಾಳ್‌ ನಾಗರಾಜ್‌ ಕೂಡ ಪ್ರತಿಭಟನೆ ನಡೆಸಿದ್ದು, ಅಂದು ದೊಡ್ಡ ತೇರುನಡೆಸಲು ಅವಕಾಶ ನೀಡದಿದ್ದರೆ ರಥದ ಮುಂದೆಮಲಗಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಕ್ಷೇತ್ರದ ಶಾಸಕ ಹರ್ಷವರ್ಧನ್‌ ಕೂಡ ದೊಡ್ಡ ತೇರು ನಡೆಸಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆದಿದ್ದಾರೆ ಎನ್ನಲಾಗಿದೆ.

ಜಿಲ್ಲಾಧಿಕಾರಿ ಆದೇಶ: ಕೋವಿಡ್‌ 2ನೇ ಅಲೆ ಶುರುವಾಗಿರುವ ಹಿನ್ನೆಲೆಯಲ್ಲಿ ಮಾ.26ರಂದು ನಡೆಯಬೇಕಿರುವ ಗೌತಮ ಪಂಚ ಮಹಾ ರಥೋತ್ಸವನ್ನು ರದ್ದು ಪಡಿಸಲಾಗಿದೆ. ಅದರ ಬದಲಾಗಿ ಅಂದು ದೇವಾಲಯದ ಹೊರ ಆವರಣದಲ್ಲಿ ಅಂದು ಸಾಂಕೇತಿಕವಾಗಿ ಚಿಕ್ಕ ತೇರಿನಲ್ಲಿ ಉತ್ಸವ ನಡೆಸಬೇಕು ಎಂದು ಜಿಲ್ಲಾಧಿಕಾರಿ ಹೊರಡಿಸಿರುವ ಸುತ್ತೋಲೆಯಲ್ಲಿ ಉಲ್ಲೇಖೀಸಲಾಗಿದೆ.

ಈ ನಡುವೆ, ಭಕ್ತರು ಹಾಗೂ ಸ್ಥಳೀಯರು ಈ ಬಾರಿ ಗೌತಮ ಪಂಚ ಮಹಾ ರಥೋತ್ಸವ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕಳೆದ ಶುಕ್ರವಾರ ಭಕ್ತರ ಬೇಡಿಕೆಗೆ ಪ್ರತಿಕ್ರಿಯಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು, ಜಿಲ್ಲಾಧಿಕಾರಿ ತೀರ್ಮಾನವೇ ಅಂತಿಮ ಅಲ್ಲ. ಆರೋಗ್ಯ ಸಚಿವ ಸುಧಾಕರ್‌ ಜೊತೆ ಚರ್ಚಿಸಿ, ದೊಡ್ಡ ತೇರು ನಡೆಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹಾರಿಕೆ ಉತ್ತರ ನೀಡಿದ್ದರು. ಆದರೆ, ಈ ಹೇಳಿಕೆ ನೀಡಿ 3 ದಿನ ಕಳೆದರೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಸಚಿವರ ನಡೆಯಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.

ನಂಜನಗೂಡಿನ ಗೌತಮ ಪಂಚ ಮಹಾ ರಥೋತ್ಸವ ಹೇಗೆ, ಏನು ಎಂಬ ಕುರಿತು ಶ್ರೀಕಂಠೇಶ್ವರನ ಭಕ್ತ ಸಮೂಹದಲ್ಲಿ ಗೊಂದಲ ಮೂಡಿಸಿರುವುದಂತೂ ನಿಜ.

ಎಲ್ಲಾದರೂ ಸರಿ ಉತ್ಸವ: ಶ್ರೀಕಂಠೇಶ್ವರನ ಪಂಚ ಮಹಾರಥೋತ್ಸವ ಕಳೆದ ವರ್ಷ ಲಾಕ್‌ಡೌನ್‌ನಿಂದದೇವಾಲಯದ ಒಳಾವರಣಕ್ಕೆ ಮಾತ್ರ ಸೀಮಿತಗೊಳಿಸಿ, ಧಾರ್ಮಿಕ ಕೈಂಕರ್ಯ ನಡೆಸಲಾಯಿತು. ಈ ವರ್ಷ ಈಗಾಗಲೆ ರಥೋತ್ಸವದ ಧಾರ್ಮಿಕ ಪ್ರಕ್ರಿಯೆ ಗಳು ಆರಂಭವಾಗಿದ್ದು, ಹೊರ ಆವರಣವಾದರೂಸರಿ ಒಳ ಆವರಣವಾದರೂ ಸರಿ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ಹಾಗೂ ದೇವಾಲಯದಅಧಿಕಾರಿಗಳ ಅಣತಿಯ ಮೇರೆಗೆ ನಡೆಸಲಾಗುವುದು ಎಂದು ಇಲ್ಲಿನ ಅರ್ಚಕ ಸಮೂಹ ತಿಳಿಸಿದೆ.

ಹೊರ ತಾಲೂಕು, ಹೊರ ಜಿಲ್ಲೆಯವರಿಗೆ ನಿಷೇಧ : ಕೋವಿಡ್ 2ನೇ ಅಲೆ ತಡೆಗೆ ಮಾ.26ರಂದುನಡೆಯಬೇಕಿದ್ದ ಗೌತಮ ಪಂಚ ಮಹಾರಥೋತ್ಸವವನ್ನುರದ್ದುಪಡಿಸಲಾಗಿದೆ. ಆದರ ಬದಲು ಅಂದುದೇವಾಲಯದ ಹೊರಆವರಣದಲ್ಲಿ ಚಿಕ್ಕತೇರಿನಲ್ಲಿ ಸಾಂಕೇತಿಕವಾಗಿ ಉತ್ಸವ ನಡಸ

ಬೇಕು. ದೇಗುಲದಅರ್ಚಕರು, ಸಿಬ್ಬಂದಿ, ಗಣ್ಯರು, ಸ್ಥಳೀಯರನ್ನು ಹೊರತು ಪಡಿಸಿ ಹೊರ ತಾಲೂಕು ಹಾಗೂ ಹೊರ ಜಿಲ್ಲೆಯ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ನಿಷೇಧ ವಿಧಿಸಲಾಗಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಧಾರ್ಮಿಕ ಕೈಂಕರ್ಯಗಳೊಂದಿಗೆ ಜಾತ್ರೆ ನಡೆಸಬೇಕು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸುತ್ತೋಲೆ ಹೊರಡಿಸಿದ್ದಾರೆ.

ದೊಡ್ಡ ತೇರಿಲ್ಲ, ಚಿಕ್ಕ ತೇರಿನಲ್ಲಿ ನಡೆಸಲು ಅನುಮತಿ :

ಶ್ರೀಕಂಠೇಶ್ವರನ ಪಂಚ ಮಹಾರಥೋತ್ಸವವನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಿಲ್ಲ. ದೊಡ್ಡ ತೇರಿಗೆಅವಕಾಶವಿಲ್ಲ. ಮಾ.26ರಂದು ಶ್ರೀಕಂಠೇಶ್ವರಹಾಗೂ ದೇವಿ ಪಾರ್ವತಿ (ಮನೋನ್ಮಣಿ)ಗಣಪತಿ, ಸುಬ್ರಹ್ಮಣ್ಯ ಹಾಗೂ ಚಂಡೀಕೇಶ್ವರರರನ್ನು ಪ್ರತ್ಯೇಕ ರಥ(ಚಿಕ್ಕ ತೇರುಗಳಲ್ಲಿ )ಪ್ರತಿಷ್ಠಾಪಿಸಿ ರಥಬೀದಿಯಲ್ಲೇ ರಥೋತ್ಸವ ನಡೆಸಲಾಗುವುದು. ರಥೋತ್ಸವದ ಅಂಗವಾಗಿಹಮ್ಮಿಕೊಳ್ಳಬೇಕಾಗಿರುವ ಅಂಕುರಾರ್ಪಣೆಸಹಿತ ಎಲ್ಲ ಧಾರ್ಮಿಕ ಕಾರ್ಯಕ್ರಮಗಳುಈಗಾಗಲೇ ಆರಂಭವಾಗಿವೆ. ಶಾಸ್ತ್ರ ಹಾಗೂಸಂಪ್ರದಾಯಕ್ಕೆ ಚ್ಯುತಿ ಯಾಗದಂತೆ ಸರ್ಕಾರದನಿಯಮಾವಳಿಗಳಿಗೂ ಧಕ್ಕೆ ಬಾರದಂತೆ ಜಾತ್ರೆಯಲ್ಲಿ ನಡೆಸಲಾಗುವುದು ಎಂದು ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ರವೀಂದ್ರ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

 

ಶ್ರೀಧರ್‌ ಆರ್‌.ಭಟ್‌

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.