ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸಮಸ್ಯೆ
Team Udayavani, Apr 29, 2019, 3:00 AM IST
ಮೈಸೂರು: ಪ್ರತಿನಿತ್ಯ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡುವವರು ತಮ್ಮ ವಾಹನಗಳನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಲು ಸ್ಥಳಾವಕಾಶವಿಲ್ಲದೇ ಪರದಾಡುವ ಸ್ಥಿತಿ ಒಂದೆಡೆಯಾದರೆ, ಚಿಕ್ಕದಾದ ನಿಲ್ದಾಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಪ್ರಯಾಣಿಕರು ಪರದಾಡುವಂತಾಗಿದೆ.
ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಿಂದ ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಕರು ಉದ್ಯೋಗಕ್ಕೆ ಬೇರೆ ಊರುಗಳಿಗೆ ತೆರಳಿ ವಾಪಸ್ಸಾಗುವುದಿದೆ. ಆದರೆ, ಪ್ರಯಾಣಿಕರು ತಾವು ತಂದ ಬೈಕ್, ಸ್ಕೂಟರ್‌ಗಳನ್ನು ನಿಲ್ದಾಣದಲ್ಲಿ ನಿಲ್ಲಿಸಲು ಸ್ಥಳವಿಲ್ಲದೇ ಸಮಸ್ಯೆ ಎದುರಿಸುವಂತಾಗಿದೆ.
ಜೊತೆಗೆ ನಗರದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಈ ಗ್ರಾಮಾಂತರ ಬಸ್ ನಿಲ್ದಾಣಲ್ಲಿ ಸ್ಥಳವಕಾಶ ಸಮಸ್ಯೆ ಎದುರಾಗಿದ್ದು, ದಿನೆ ದಿನೇ ವಾಹನ ಹಾಗೂ ಜನದಟ್ಟಣೆ ಹೆಚ್ಚಾಗುತ್ತಿದೆ.
1500 ವಾಹನ ನಿಲುಗಡೆ: ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ವಿವಿಧ ಸ್ಥಳಗಳಿಗೆ ನಿತ್ಯ ಸಾವಿರಕ್ಕೂ ಹೆಚ್ಚಿನ ಬಸ್‌ಗಳು ಸಂಚಾರ ನಡೆಸುತ್ತವೆ. ಜೊತೆಗೆ ಸಾವಿರಾರು ಪ್ರಯಾಣಿಕರು ನಿತ್ಯ ಪ್ರಯಾಣಿಸುತ್ತಾರೆ. ಈ ಪೈಕಿ ಬೆಂಗಳೂರು ಸೇರಿದಂತೆ ವಿವಿಧ ಊರುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮೈಸೂರಿನಲ್ಲಿ ವಾಸವಿರುವ 4 ಸಾವಿರ ಪ್ರಯಾಣಿಕರು ನಿತ್ಯವೂ ಸಂಚರಿಸುತ್ತಾರೆ.
ಇವರಲ್ಲಿ ಬಹುತೇಕ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ತಮ್ಮ ಬೈಕ್, ಸ್ಕೂಟರ್‌ಗಳನ್ನು ಪಾರ್ಕಿಂಗ್ ಮಾಡಿ ನಂತರ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಆದರೆ, ಬಸ್ ನಿಲ್ದಾಣದ ತಳ ಅಂತಸ್ತಿನಲ್ಲಿ ಮಾಡಿರುವ ಪಾರ್ಕಿಂಗ್‌ನಲ್ಲಿ ಕೇವಲ 1500 ವಾಹನಗಳನ್ನು ನಿಲ್ಲಿಸಬಹುದಾಗಿದೆ. ಹೀಗಾಗಿ, ಬಹುತೇಕ ಪ್ರಯಾಣಿಕರು ತಮ್ಮ ಬೈಕ್‌ಗಳನ್ನು ನಿಲ್ಲಿಸಲು ಜಾಗದ ಸಮಸ್ಯೆಯಿಂದ ಪರದಾಡುವಂತಾಗಿದೆ.
ಕಿರಿದಾದ ಬಸ್ ನಿಲ್ದಾಣ: ಮೈಸೂರು ಗ್ರಾಮಾಂತರ ಸಾರಿಗೆ ಬಸ್ ನಿಲ್ದಾಣದಲ್ಲಿ ಜನ ಹಾಗೂ ಬಸ್‌ಗಳ ದಟ್ಟಣೆ ದಿನೇ ದಿನೆ ಹೆಚ್ಚಾಗುತ್ತಿದ್ದು, ನಿಲ್ದಾಣದಲ್ಲಿ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಪ್ರತಿನಿತ್ಯ ರಾಜ್ಯ, ಹೊರರಾಜ್ಯ ಬಸ್‌ಗಳು ಸೇರಿದಂತೆ 2450ಕ್ಕೂ ಹೆಚ್ಚು ಬಸ್‌ಗಳು ಓಡಾಡುತ್ತವೆ. ಆದರೆ, ಈಗಿರುವ ಸ್ಥಳಾವಕಾಶದಲ್ಲಿ ಇಷ್ಟು ಪ್ರಮಾಣದ ಬಸ್‌ಗಳು ಓಡಾಡುವುದು ಸಾಹಸದ ಕೆಲಸವಾಗಿದೆ. ಇದರಿಂದ ಟ್ರಾಫಿಕ್ ಜಾಮ್ ಸೇರಿದಂತೆ ಇತರೆ ಸಮಸ್ಯೆಗಳನ್ನು ಪ್ರಯಾಣಿಕರು ಹಾಗೂ ಬಸ್ ಚಾಲಕರು ಎದುರಿಸುವಂತಾಗಿದೆ.
ನಿಲುಗಡೆಗೆ ಜಾಗವಿಲ್ಲ: ಕಳೆದ 3-4 ತಿಂಗಳಿಂದ ಮೈಸೂರು ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆಯ¨ªೆ ದೊಡ್ಡ ಸಮಸ್ಯೆಯಾಗಿ ಪ್ರಯಾಣಿಕರಿಗೆ ಕಾಡುತ್ತಿದೆ. ಶೇ.40 ರಷ್ಟು ಪಾರ್ಕಿಂಗ್ ಪ್ರದೇಶವನ್ನು ಬಸ್ ನಿಲ್ದಾಣದಲ್ಲಿರುವ ಶಾಪಿಂಗ್ ಮಾಲ್‌ನ ಗ್ರಾಹಕರಿಗೆ ಮೀಸಲಿರಿಸಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಬೆಳಗ್ಗೆ 8 ಗಂಟೆಯಾಗುವಷ್ಟರಲ್ಲೇ ಬಸ್ ನಿಲ್ದಾಣದಲ್ಲಿರುವ ಪಾರ್ಕಿಂಗ್ ಸ್ಥಳ ಭರ್ತಿಯಾಗುತ್ತಿದ್ದು, ದೂರದ ಸ್ಥಳಗಳಿಗೆ ತೆರಳುವ ನೌಕರರು ಹಾಗೂ ಪ್ರಯಾಣಿಕರಿಗೆ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸಮಸ್ಯೆಯಾಗುತ್ತಿದೆ. ಬೇರೆ ಊರುಗಳಿಗೆ ಅನಿವಾರ್ಯವಾಗಿ ತೆರಳಬೇಕಾದವರು ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಮತ್ತೆ ವಾಪಸ್ ಬಸ್ ನಿಲ್ದಾಣಕ್ಕೆ ಬಂದು ಬಸ್‌ನಲ್ಲಿ ತೆರಳುವ ಪರಿಸ್ಥಿತಿ ಎದುರಾಗಿದೆ.
ಪಾರ್ಕಿಂಗ್ ವ್ಯವಸ್ಥೆ: 10 ಗಂಟೆಗೆ ಕೆಲಸಕ್ಕೆ ತೆರಳಲು ಬೆಳಗ್ಗೆ 6 ಗಂಟೆಗೆ ಬಸ್‌ಗೆ ಹೋಗಲು ಬರುತ್ತಿದ್ದ ಪ್ರಯಾಣಿಕರು, ಈಗ ಒಂದು ಗಂಟೆ ಮುಂಚಿತವಾಗಿಯೇ ಬಸ್ ನಿಲ್ದಾಣಕ್ಕೆ ಬಂದು ಪಾರ್ಕಿಂಗ್‌ನಲ್ಲಿ ತಮ್ಮ ವಾಹನ ನಿಲ್ಲಿಸುವಂತಾಗಿದೆ. ಹೀಗಾಗಿ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಬೈಕ್ ತರುತ್ತಿಲ್ಲ: ಮೈಸೂರಿನ ಕುವೆಂಪು ನಗರದ ನಿವಾಸಿ ವಸಂತರಾಜು ತಲಕಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದು, ನಿತ್ಯ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ತೆರಳುತ್ತಿದ್ದರು. ಆದರೆ, ಇದೀಗ ಕಳೆದ 3 ತಿಂಗಳಿಂದ ತಮ್ಮ ವಾಹನ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ.
ಸ್ನೇಹಿತನ ಬಳಿ ಬಸ್ ನಿಲ್ದಾಣಕ್ಕೆ ಡ್ರಾಪ್ ಪಡೆಯುತ್ತಿದ್ದಾರೆ. ಕೆಲಸ ಮುಗಿಸಿಕೊಂಡು ಮನೆಗೆ ಬರಲು ಕೂಡ ನಿಲ್ದಾಣದಲ್ಲಿ ಸ್ನೇಹಿತನಿಗಾಗಿ ಕಾಯುವಂತಾಗಿದೆ. ಇದು ಕೇವಲ ವಸಂತ್‌ರಾಜು ಒಬ್ಬರ ಸ್ಥಿತಿಯಲ್ಲ. ನಿತ್ಯ ಮೈಸೂರಿನಿಂದ ಬೆಂಗಳೂರು, ಹಾಸನ, ಚಾಮರಾಜನಗರ, ಮಡಿಕೇರಿ, ತಿ.ನರಸೀಪುರ ಸೇರಿದಂತೆ ವಿವಿಧೆಡೆ ತೆರಳುವ ನೂರಾರು ಅಧಿಕಾರಿಗಳು, ನೌಕರರ ಮತ್ತು ಪ್ರಯಾಣಿಕರ ಸಮಸ್ಯೆಯಾಗಿದೆ.
ಕೆಲವು ಸಂದರ್ಭದಲ್ಲಿ ಸಮಸ್ಯೆಯಾಗುತ್ತದೆ. ಆದರೆ, ಬಸ್ ನಿಲ್ದಾಣದಲ್ಲಿ ಇರುವುದು ಕಡಿಮೆ ಸ್ಥಳ. ಇಲ್ಲಿ ಬೇರೆ ಯಾವುದೇ ಖಾಲಿ ಜಾಗವಿಲ್ಲ. ಬೆಂಗಳೂರು ಪ್ಲಾಟ್‌ಫಾರಂನ್ನು ಬೇರೆಡೆ ಸ್ಥಳಾಂತರ ಮಾಡಲು ಚಿಂತಿಸಲಾಗಿದೆ. ಸರಕಾರಿ ಜಾಗ ಸಿಕ್ಕರೆ ಸ್ಥಳಾಂತರ ಮಾಡುತ್ತೇವೆ. ಇದರಿಂದ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ವಾಹನ ದಟ್ಟಣೆಯನ್ನೂ ಕಡಿಮೆ ಮಾಡಬಹುದಾಗಿದೆ.
-ಅಶೋಕ್ ಕುಮಾರ್, ಡೀಸಿ ಕೆಎಸ್‌ಆರ್‌ಟಿಸಿ ಗ್ರಾಮಾಂತರ ವಿಭಾಗ.
* ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.