ಭಾರತ ಗಡಿಯಲ್ಲಿ ಶಾಂತಿ ನೆಲೆಸಲಿ
Team Udayavani, Jul 27, 2020, 9:00 AM IST
ಮೈಸೂರು: ಕಾಂಗ್ರೆಸ್ ನಗರ ಮತ್ತು ಗ್ರಾಮಂತರ ಘಟಕದ ವತಿಯಿಂದ 21ನೇ ಕಾರ್ಗಿಲ್ ವಿಜಯ ದಿವಸವನ್ನು ಮೈಸೂರಿನ ಮಹಾತ್ಮ ಗಾಂಧಿ ಚೌಕದಲ್ಲಿ ಆಚರಿಸಲಾಯಿತು. ಕಾರ್ಗಿಲ್ ಕದನದಲ್ಲಿ ಮಡಿದ ವೀರ ಯೋಧರಿಗೆ ವಂದೇ ಮಾತರಂ ಗೀತೆ ಹಾಡಿ ವೀರ ಸೇನಾನಿಗಳಿಗೆ ನಮನ ಸಲ್ಲಿಸಿ, ಒಂದು ನಿಮಿಷ ನ್ಯಾಷನಲ್ ಸೆಲ್ಯೂಟ್ ಮಾಡುವ ಮೂಲಕ ಗೌರವ ಸಮರ್ಪಣೆ ಮತ್ತು ವಿಜಯೋತ್ಸವ ಆಚರಿಸಲಾಯಿತು.
ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಚೀನಾ ಮತ್ತು ಭಾರತದ ಗಡಿಯಲ್ಲಿ ಶಾಂತಿ ನೆಲೆಸಬೇಕು ಮತ್ತು ದೇಶ ಹಾಗೂ ಪ್ರಪಂಚ ಶಾಂತಿಯತ್ತ ಸಾಗಬೇಕು. ಭಾರತ ಬಹುರಾಷ್ಟ್ರೀಯ ಪಕ್ಷ ಹಾಗೂ ರಾಜಕೀಯ ಪಕ್ಷಗಳು ಕೂಡ ಭಾರತದ ಸೇನೆಯನ್ನು ತಮ್ಮ ಚುನಾವಣೆ ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು ಎಂದು ಹೇಳಿದರು. ದೇಶದ ಏಕತೆ ಮತ್ತು ಭಾತೃತ್ವ ವಿಚಾರದಲ್ಲಿ ದೇಶವೇ ಮೊದಲು, ರಾಜಕಾರಣವಲ್ಲ. ಗಡಿಭಾಗದ ಯೋಧರಿಗೆ ನೈತಿಕ ಸ್ಥೈರ್ಯ ತುಂಬುವ ಹೊಣೆಗಾರಿಕೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಭಾರತ ವಿಶ್ವದಲ್ಲಿ ಅತಿ ಶಾಂತಿ ಬಯಸುವ ಬಹುದೊಡ್ಡ ಪ್ರಜಾತಂತ್ರ ರಾಷ್ಟ್ರ. ಆದರೆ ನೆರೆಹೊರೆಯ ರಾಷ್ಟ್ರಗಳು ನಮ್ಮ ಐಕ್ಯತೆಗೆ ಪ್ರತಿ ಬಾರಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ವಿಶ್ವದಲ್ಲಿ ಭಯೋತ್ಪಾದಕರ ಶಕ್ತಿ ದ್ವಿಗುಣವಾಗುತ್ತಿದೆ. ಇದನ್ನ ಒಟ್ಟಾರೆಯಾಗಿ ಇಡೀ ವಿಶ್ವ ಸದೆಬಡೆ ಯುವ ಅನಿವಾರ್ಯತೆ ವಿಶ್ವಸಂಸ್ಥೆಯ ಮುಂದಿದೆ ಎಂದು ಹೇಳಿದರು. ಈ ವೇಳೆ ಪಕ್ಷದ ಮುಖಂಡರು ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.