ಮಹಾರಾಜ ಮೈದಾನದಲ್ಲಿ ಜನಸ್ತೋಮ
Team Udayavani, Feb 20, 2018, 12:15 PM IST
ಮೈಸೂರು: ನಗರದಲ್ಲಿ ನಡೆದ ಬಿಜೆಪಿ ಸಮಾವೇಶದ ಹಿನ್ನೆಲೆಯಲ್ಲಿ ಇದೇ ಮೊದಲಬಾರಿಗೆ ಮಹಾರಾಜ ಕಾಲೇಜು ಮೈದಾನದ ತುಂಬಾ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ಶಾಮಿಯಾನದ ವ್ಯವಸ್ಥೆ ಮಾಡದಿದ್ದರೂ, ಅಸಂಖ್ಯಾತ ಮಂದಿ ಕಾರ್ಯಕರ್ತರು, ಬಿಜೆಪಿ ಬೆಂಬಲಿಗರು ಹಾಗೂ ಸಾರ್ವಜನಿಕರು ಸುಡುಬಿಸಿಲಿನ ನಡುವೆಯೇ ಮೈದಾನದಲ್ಲಿ ಕುಳಿತು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಆಲಿಸಿದರು.
ಪುಟ್ಟಣ್ಣಯ್ಯ ನಿಧನಕ್ಕೆ ಸಂತಾಪ: ಅಕಾಲಿನ ಮರಣಕ್ಕೆ ತುತ್ತಾದ ಪಾಂಡವಪುರ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ನಿಧನಕ್ಕೆ ಬಿಜೆಪಿ ನಾಯಕರು ಸಂತಾಪ ಸೂಚಿಸಿದರು. ನಗರದಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಮೊದಲೇ ಆರಂಭಗೊಂಡಿದ್ದ ಸಮಾವೇಶದ ವೇಳೆ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ನಿಧನದ ಹಿನ್ನೆಲೆಯಲ್ಲಿ ಒಂದು ನಿಮಿಷಗಳ ಮೌನಾಚರಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇನ್ನಿತರ ನಾಯಕರು ಹಾಜರಿದ್ದರು.
ಮೋದಿಗೆ ಆತ್ಮೀಯ ಸನ್ಮಾನ: ಬಿಜೆಪಿ ಸಮಾವೇಶಕ್ಕೆಂದು ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸ್ಥಳೀಯ ಬಿಜೆಪಿ ನಾಯಕರು ಆತ್ಮೀಯವಾಗಿ ಅಭಿನಂದಿಸಿದರು. ಸಾಂಸ್ಕೃತಿಕ ನಗರಿಗೆ ಆಗಮಿಸಿದ ಮೋದಿ ಅವರಿಗೆ ಮೈಸೂರು ಮಲ್ಲಿಗೆ ಹೂವಿನಹಾರ ಹಾಕಿ, ಕೇಸರಿ ಬಣ್ಣದ ರೇಷ್ಮೆ ಶಾಲು ಹೊದಿಸುವ ಜತೆಗೆ ಮೂರು ಕೆ.ಜಿ.ತೂಕದ ಬೆಳ್ಳಿಯ ಗಣೇಶಮೂರ್ತಿಯ ವಿಗ್ರಹವನ್ನು ನೀಡಿ ಗೌರವಿಸಲಾಯಿತು. ಮೈಸೂರು ಪೇಟದ ಆಕರ್ಷಣೆಗೆ ಮನಸೋತ ಪ್ರಧಾನಿ ಮೋದಿ ಸಮಾವೇಶ ಮುಗಿಯುವವರೆಗೂ ಮೈಸೂರು ಪೇಟವನ್ನು ಧರಿಸಿಕೊಂಡು ಗಮನ ಸಳೆದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.