ಚಿನ್ನ ಖರೀದಿಸಲು ಮುಗಿಬಿದ್ದ ಜನರು
Team Udayavani, May 8, 2019, 3:00 AM IST
ಮೈಸೂರು: ಚಿನ್ನ ಖರೀದಿಸಲು ಅಕ್ಷಯ ತದಿಗೆ ಪ್ರಶಸ ದಿನ ಎಂದು ನಂಬಿರುವ ಮಂದಿ ಮಂಗಳವಾರ ಅಕ್ಷಯ ತೃತೀಯ ದಿನದಂದು ನಗರದ ಚಿನ್ನಾಭರಣ ಅಂಗಡಿಗಳಲ್ಲಿ ಚಿನ್ನ ಖರೀದಿಸಿದರು.
ಅಕ್ಷಯ ತದಿಗೆ ದಿನ ಚಿನ್ನ ಖರೀದಿಸುವುದರಿಂದ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆ ಬಹತೇಕ ಜನರಲ್ಲಿದ್ದು, ಅಂದು ಗುಲಗಂಜಿಯಷ್ಟಾದರೂ ಚಿನ್ನ ಖರೀದಿಸಬೇಕು ಎಂಬ ಸಂಪ್ರದಾಯದಿಂದ ಮಂಗಳವಾರ ನಗರದಲ್ಲಿನ ಎಲ್ಲಾ ಚಿನ್ನಾಭರಣ ಅಂಗಡಿಗಳು ಹೌಸ್‌ಫುಲ್ ಆಗಿದ್ದವು. ಬೆಳಗ್ಗೆಯಿಂದಲೇ ಜನರು ಚಿನ್ನ ಕೊಳ್ಳಲು ಮುಗಿಬಿದ್ದಿದ್ದರು.
ಜನರ ನಂಬಿಕೆಯನ್ನು ಬಂಡವಾಳವಾಗಿಸಿಕೊಂಡ ಜ್ಯುವೆಲ್ಲರಿ ಮಾಲೀಕರು ಗ್ರಾಹಕರನ್ನು ಸೆಳೆಯಲು ವಿವಿಧ ಕೊಡುಗೆ ಮತ್ತು ರಿಯಾಯಿತಿ ಪ್ರಕಟಿಸಿದ್ದರು. ಚಿನ್ನಾಭರಣ ಅಂಗಡಿಗಳು ಹೆಚ್ಚಾಗಿರುವ ಡಿ.ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಬಿ.ಎನ್.ರಸ್ತೆಯಲ್ಲಿ ಪ್ರತಿಷ್ಟಿತ ಶೋ ರೂಂ ಹಾಗೂ ಚಿನ್ನದಂಗಡಿಗಳಲ್ಲಿ ಚಿನ್ನ ಖರೀದಿಸಲು ಜನತೆ ಮುಗಿಬಿದ್ದಿದ್ದರು.
ಮಿತವಾಗಿ ಚಿನ್ನ ಖರೀದಿಸಿ, ಪ್ರದರ್ಶನ ಬೇಡ
ಮೈಸೂರು: ಅಕ್ಷಯ ತೃತೀಯ ಪ್ರಯುಕ್ತ ಚಿನ್ನ ಖರೀದಿಸುವ ಸಾರ್ವಜನಿಕರಿಗೆ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಅರಿವು ಮೂಡಿಸಲಾಯಿತು.
ನಗರದ ಡಿ. ದೇವರಾಜ ಅರಸು ರಸ್ತೆಯಲ್ಲಿರುವ ಭೀಮ ಜ್ಯೂವೆಲ್ಲರ್ಸ್ ಮುಂಭಾಗ ಮಂಗಳವಾರ ಚಿನ್ನ ಖರೀದಿಸುವ ಸಾರ್ವಜನಿಕರಿಗೆ ಮಿತವಾಗಿ ಚಿನ್ನ ಖರೀದಿಸಿ, ಅತಿಯಾಗಿ ಪ್ರದರ್ಶನ ಮಾಡದಿರಿ ಎಂದು ಕರಪತ್ರ ಹಂಚುವ ಮೂಲಕ ಅರಿವು ಮೂಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಸಾಮಾನ್ಯ. ಆದರೆ ಅತಿಯಾಗಿ, ಅಗತ್ಯಕ್ಕಿಂತ ಹೆಚ್ಚು ಚಿನ್ನ ಖರೀದಿಸದೇ ಮಿತವಾಗಿ ಖರೀದಿಸಿ. ಹೆಚ್ಚು ಪ್ರದರ್ಶನವಾಗುವಂತೆ ಚಿನ್ನಭಾರಣ ಧರಿಸಬೇಡಿ.
ಬೆಳಗ್ಗೆ ವಾಯುವಿಹಾರದ ಸಂದರ್ಭದಲ್ಲಿ ಚಿನ್ನವನ್ನು ಮನೆಯಲ್ಲಿಟ್ಟು ವಾಯು ವಿಹಾರಕ್ಕೆ ತೆರಳಿ. ಹೆಚ್ಚು ಚಿನ್ನಾಭರಣ ಧರಿಸಿ ಕಳ್ಳರಿಗೆ ಅವಕಾಶ ಮಾಡಿ ಕೊಡಬೇಡಿ. ಮಹಿಳೆಯರು ಒಂಟಿಯಾಗಿ ಹೆಚ್ಚು ಓಡಾಡಬೇಡಿ. ಸರಗಳ್ಳರನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿ ಎಂದರು.
ಅಂಕಣಕಾರ ಗುಬ್ಬಿಗೂಡು ರಮೇಶ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಬಿಎಸ್‌ಪಿ ನಗರಾಧ್ಯಕ್ಷ ಬಸವರಾಜು, ಬಿಜೆಪಿ ಮಹಿಳಾ ಕಾರ್ಯದರ್ಶಿ ಲಕ್ಷ್ಮೀದೇವಿ ಹಾಗೂ ವೇದಿಕೆ ಪ್ರಧಾನ ಕಾರ್ಯದರ್ಶಿ ಹರೀಶ್ ನಾಯ್ಡು, ಕುಮಾರ್ ಗೌಡ, ಸಂದೇಶ್ ಪವಾರ್, ಟಿ.ಎಸ್.ಅರುಣ್, ರಂಗನಾಥ್, ಜಯಸಿಂಹ, ಪ್ರಮೋದ್ ಗೌಡ, ಗುರುಪ್ರಸಾದ್, ಶ್ರೀನಿವಾಸ್, ಸುರೇಂದ್ರ, ಮಂಜು, ರವಿ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.