Kharge ಪ್ರಧಾನಿಯಾದರೆ ಜನರೊಂದಿಗೆ ಸಂತಸ ಪಡುವೆ: ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ
ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಪ್ರಧಾನಿಯಾಗಲೆಂದು ಹೇಳಿದ್ದಾರೆ. ಆದರೆ...
Team Udayavani, Jan 4, 2024, 8:17 PM IST
ಹುಣಸೂರು: ರಾಹುಲ್ ಗಾಂಧಿಯವರು ಪಕ್ಷ ಸಂಘಟನೆ ಮಾಡುತ್ತಿದ್ದಾರೆಯೇ ಹೊರತು, ಅಧಿಕಾರ ನಡೆಸಿದ ಅನುಭವವಿಲ್ಲ. ಮೋದಿಯವರಿಗೆ ಸಾಟಿಯೂ ಅಲ್ಲ, ಖರ್ಗೆ ಪ್ರಧಾನಿಯಾದರೆ ನನ್ನನ್ನೂ ಸೇರಿದಂತೆ ರಾಜ್ಯದ ಜನರು ಸಂತಸ ಪಡಲಿದ್ದಾರೆ ಎಂದು ಜೆಡಿಎಸ್‌ನ ಕೋರ್ ಕಮಿಟಿ ಅಧ್ಯಕ್ಷ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.
ಹುಣಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಟಿ.ಡಿ.ಯವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಈ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಪ್ರಧಾನಿಯಾಗಲೆಂದು ಹೇಳಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆಯವರು, ರಾಜ್ಯ, ರಾಷ್ಟ್ರ ರಾಜಕಾರಣ ಹಾಗೂ ಸರಕಾರದಲ್ಲೂ ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದಾರೆ. ದೇಶದ ಏಕೈಕ ವಿರೋಧ ಪಕ್ಷದ ಯಶಸ್ವಿ ನಾಯಕರಾಗಿದ್ದಾರೆ. ಇವರು ಮುಖ್ಯಮಂತ್ರಿಯಾಗಬೇಕಿತ್ತು, ಆಗಲಿಲ್ಲ. ಪ್ರಧಾನಿಯಾದರೆ ಸಂತೋಷಪಡುವೆ ಎಂದರು.
ಜಾತಿ ಮೇಳೈಸುತ್ತಿದೆ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಕುರುಬರೊಬ್ಬರೇ ಓಟ್ ಹಾಕಿದ್ದಾರಾ? ಒಕ್ಕಲಿಗ ನಾಯಕ ಎಚ್.ಡಿ.ದೇವೇಗೌಡರಿಗೆ ಒಕ್ಕಲಿಗರು ಮಾತ್ರ ಮತ ಹಾಕಿದ್ದರೇ? , ಯಡಿಯೂರಪ್ಪ ಸಿಎಂ ಆಗಲು ವೀರಶೈವರು ಮಾತ್ರ ಮತಹಾಕಿದ್ದಾರಾ? ಎಲ್ಲರ ಸಹಕಾರ ಬೇಕೆಂದುದನ್ನು ಎಲ್ಲ ರಾಜರಾರಣಿಗಳು ಅರಿಯಬೇಕು. ರಾಜ್ಯಕ್ಕೆ ಅದಿಕಾರ ಸಿಗುತ್ತದೆಂದರೆ ಎಲ್ಲರೂ ಸಂತೋಷ ಪಡಬೇಕು. ದ್ವೇಷ,ಅಸೂಯೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಸುದ್ದಿ ಮಾಡುವ ದಾವಂತದಲ್ಲಿ ಮತ್ತೊಬ್ಬರಿಗೆ ನೋವುಂಟುಮಾಡಬೇಡಿ
ಹುಣಸೂರಿನ ತಾಲೂಕು ಪತ್ರಕರ್ತರ ಸಂಘದ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆಗೊಳಿಸಿದ ಮಾತನಾಡಿದ ಜಿ.ಟಿ.ದೇವೇಗೌಡ, ಯಾರೋ ಹೇಳಿದ್ದು, ಯಾರೋ ಕೊಟ್ಟಿದ್ದನ್ನು ಬರೆದು ಮತ್ತೊಬ್ಬರಿಗೆ ನೋವುಂಟು ಮಾಡುವುದರ ಬದಲು ನೈಜ ಸುದ್ದಿ ಪ್ರಕಟಿಸುವ ಮೂಲಕ ಪತ್ರಿಕಾ ಧರ್ಮ ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ ಎಂದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆ ದುರ್ಬಲಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಪತ್ರಿಕಾ ರಂಗವು ಸಹ ದುರ್ಬಲಗೊಂಡರೆ ಸಮಾಜಕ್ಕೆ ಸತ್ಯದ ಅರಿವಾಗುವುದಿಲ್ಲ. ಇದರಿಂದ ದೊಡ್ಡ ಪೆಟ್ಟು ಬೀಳಲಿದೆ. ಪತ್ರಿಕಾ ರಂಗದ ಮೇಲೆ ಜನರು ವಿಶ್ವಾಸವಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಪತ್ರಿಕಾ ಧರ್ಮ ಕಾಪಾಡಬೇಕಾದ್ದು ಪತ್ರಿಕಾ ರಂಗದ ಕರ್ತವ್ಯವಾಗಿದೆ ಎಂದರು.
ಮುಖ್ಯಮಂತ್ರಿಗಳಿಗೆ ಪತ್ರಕರ್ತರು ಸಲಹೆಗಾರರು
ಹಿಂದೆಲ್ಲಾ ಮುಖ್ಯಮಂತ್ರಿಗಳಿಗೆ ಹಿರಿಯ ಪತ್ರಕರ್ತರು ಮಾರ್ಗದರ್ಶನ ಮಾಡುತ್ತಿದ್ದರು. ಈಗ ಅಂತ ವ್ಯವಸ್ಥೆ ಕಾಣದಾಗಿದೆ. ಇಂದಿನ ಯುವ ಪತ್ರಕರ್ತರಿಗೆ ಹಿರಿಯ ಪತ್ರಕರ್ತರ ಮಾರ್ಗದರ್ಶನ, ತರಬೇತಿ ಅವಶ್ಯವಿದೆ ಎಂದ ಅವರು ಸಹಕಾರ ಮಹಾ ಮಂಡಲದವತಿಯಿಂದ ಇಂತ ತರಬೇತಿಗೆ ಸಹಕಾರ ನೀಡುವುದಾಗಿ ಪ್ರಕಟಿಸಿ, ಇಲ್ಲಿನ ಪತ್ರಕರ್ತರ ಭವನ ನಿರ್ಮಾಣ ಶೀಘ್ರವಾಗಲೆಂದು ಆಶಿಸಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್ ಸಂಘದ ಪ್ರಗತಿಯನ್ನು ತಿಳಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಅಭ್ಯುದಯ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ದೀಪಕ್, ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರನಾರಾಯಣ್, ತಾಲೂಕು ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆಮಹದೇವ್, ಹಿರಿಕ್ಯಾತನಹಳ್ಳಿಸ್ವಾಮಿಗೌಡ ಮಾತನಾಡಿದರು.
ಇದೇ ವೇಳೆ ಸಂಘದ ವತಿಯಿಂದ ತಾಲೂಕು ಕಸಾಪ ಅಧ್ಯಕ್ಷ ಹರವೆಮಹದೇವ್, ಪಿರಿಯಾಪಟ್ಟಣ ತಾಲೂಕು ಕಸಾಪ ಅಧ್ಯಕ್ಷ ನವೀನ್‌ರನ್ನು ಸ್ಮಾನಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಘವೇಂದ್ರ, ದಾ.ರಾ.ಮಹೇಶ್, ಚೆಲುವರಾಜು, ಶಂಕರ್ ಸೇರಿದಂತೆ ಸಂಘದ ಸದಸ್ಯರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.