ಬಿಎಸ್ ವೈ ಮತ್ತು ನನ್ನ ನಡುವೆ ವೈಯಕ್ತಿಕ ಮೈತ್ರಿಯಾಗಿದೆ: ಕುಮಾರಸ್ವಾಮಿ
Team Udayavani, Dec 5, 2021, 1:19 PM IST
ಮೈಸೂರು: ಬಿಎಸ್ ಯಡಿಯೂರಪ್ಪ ಮತ್ತು ನನ್ನ ನಡುವೆ ವೈಯಕ್ತಿಕ ಮೈತ್ರಿಯಾಗಿದೆ. ಈವರೆಗೆ ಬಿಎಸ್‌ವೈ ಮಾತ್ರ ನನಗೆ ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಸಿಎಂ ಬೊಮ್ಮಾಯಿ ಕೂಡ ಅದು ಅವರ ವೈಯಕ್ತಿಕ ಹೇಳಿಕೆ ಎಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಹಿರಂಗವಾಗಿಯೇ ನಮಗೆ ಯಾರ ಬೆಂಬಲ ಬೇಡ ಎಂದಿದ್ದಾರೆ. ಬೇಡ ಎಂದವರಿಗೆ ನಾವೇ ಹೋಗಿ ಬೆಂಬಲ ಕೊಡಲು ಸಾಧ್ಯವಿಲ್ಲ. ಈ ಎಲ್ಲಾ ಅಂಶ ಮುಂದಿಟ್ಟುಕೊಂಡು ನಾಳೆ ಬೆಂಬಲದ ತೀರ್ಮಾನ ಮಾಡುವೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳುತ್ತೇನೆ ಎಂದರು.
ನಮಗೆ ಆರು ಕ್ಷೇತ್ರಗಳು ಪ್ರತಿಷ್ಠೆಯಾಗಿ ಪರಿಣಮಿಸಿವೆ. ಆರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವ ಸನ್ನಿವೇಶವಿದೆ. ಮೈಸೂರಿನಲ್ಲಿ ಮೊದಲ ಬಾರಿ ಕಾರ್ಯಾಗಾರದ ಅಂಶಗಳನ್ನು ಅಳವಡಿಕೆ ಮಾಡಲಾಗಿದೆ. ಹಿಂದೆ ಇಲ್ಲಿ ಎರಡು ಬಾರಿ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದಾರೆ. ಈ ಬಾರಿ ಕೂಡ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ನನಗಿದೆ. ವರುಣಾ ಕ್ಷೇತ್ರದಲ್ಲೂ ನಾಯಕರ ಕೊರತೆ ನಡುವೆಯೂ ಸಭೆ ಯಶಸ್ವಿಯಾಗಿದೆ. ಇದೆಲ್ಲವನ್ನು ಗಮನಿಸಿದರೆ ಜೆಡಿಎಸ್ ಮುಂದಿನ ಚುನಾವಣೆಯಲ್ಲೂ ಉತ್ತಮ ಫಲಿತಾಂಶ ಕಾಣಲಿದೆ ಎಂದು ಎಚ್ ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮುಂದಿನ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿಯವರೇ ಸಿಎಂ: ಸಚಿವ ಈಶ್ವರಪ್ಪ
ಚಾಮುಂಡೇಶ್ವರಿ ಕೈ ಟಿಕೆಟ್ ಜಿಟಿ ದೇವೇಗೌಡರಿಗೆ ಕೊಡಬೇಕಾಗುತ್ತದೆ ಎಂಬ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಶಾಸಕರು ಏನೇ ಹೇಳಲಿ, ಯಾರು ಯಾವ ಪಕ್ಷಕ್ಕಾದರೂ ಹೋಗಲಿ. ಈಗಾಗಲೇ ನಾನು ಹೇಳಿರುವಂತೆ ಹೊಸ ನಾಯಕತ್ವಕ್ಕೆ ನಾನು ಬದ್ದ. ಕಾರ್ಯಕರ್ತರೇ ಹೊಸ ನಾಯಕತ್ವವನ್ನ ಹುಟ್ಟುಹಾಕಲಿದ್ದಾರೆ. ನಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೊಸ ನಾಯಕರ ಹುಡುಕಾಟದಲ್ಲಿ ಇದ್ದೇವೆ. ಇದೇ ಅಂಶಕ್ಕೆ ನಾನು ಬದ್ದನಿದ್ದೇನೆ ಎಂದರು.
ನಮ್ಮ ಕಾರ್ಯಾಕರ್ತರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೊಸ ನಾಯಕರನ್ನು ಹಾಕುವಂತೆ ಕೇಳಿದ್ದಾರೆ. ನಾನು ಅದೇ ಕೆಲಸದಲ್ಲಿ ಇದ್ದೇನೆ. ಹಿಂದೆ ಇದ್ದವರಿಗೂ ರಾಜಕೀಯ ಉಳಿವು ಮುಖ್ಯ ಅಲ್ಲವೆ. ಅದಕ್ಕೆ ಅವರು ಅವರ ತಂಡ ಸಿದ್ದ ಮಾಡಿಕೊಳ್ಳುತ್ತಿದ್ದಾರೆ. ಅವರಂತೆ ಮೂರೂ ಪಕ್ಷಗಳಲ್ಲೂ ನಮ್ಮ ಪರ ಕೆಲಸ ಮಾಡುವವರು ಇದ್ದಾರೆ. ಕಾಂಗ್ರೆಸ್, ಬಿಜೆಪಿಯಲ್ಲೂ ನಮ್ಮ ಪರ ಇರುವವರು ಇದ್ದಾರೆ. ನಾಯಕರು ಏನೇ ಹೇಳಿದರೂ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಎರಡನೇ ಪ್ರಾಶಸ್ತ್ಯ ಮತ ಜೆಡಿಎಸ್‌ಗೆ ಕೊಡುತ್ತಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡನೇ ಅಭ್ಯರ್ಥಿ ಗೆಲ್ಲಲು ಜೆಡಿಎಸ್ ಪಾತ್ರ ಬಹಳ ಮುಖ್ಯವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.