ಔಷಧ ಮಾರಾಟ ಬಂದ್: ರೋಗಿಗಳ ಪರದಾಟ
Team Udayavani, May 31, 2017, 1:13 PM IST
ಮೈಸೂರು: ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡುವುದನ್ನು ವಿರೋಧಿಸಿ ಅಖೀಲ ಭಾರತ ಔಷಧ ವ್ಯಾಪಾರಿಗಳ ಸಂಘ, ದೇಶವ್ಯಾಪಿ ಕರೆ ನೀಡಿದ್ದ ಔಷಧ ಮಾರಾಟ ಬಂದ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲೆಯ ಸುಮಾರು 950 ಔಷಧ ಅಂಗಡಿಗಳು ಬಂದ್ ಆಗಿದ್ದವು, ಇದರಿಂದ ರೋಗಿಗಳು ಪರದಾಡುವಂತಾಯಿತು.
ಮೈಸೂರಿನ ಸುತ್ತಮುತ್ತಲಿನ ಊರುಗಳ ಜನತೆಯ ಪಾಲಿಗೆ ದೊಡ್ಡಾಸ್ಪತ್ರೆಯೆಂದೇ ಹೆಸರುವಾಸಿಯಾಗಿರುವ ನಗರದ ಕೆ.ಆರ್.ಆಸ್ಪತ್ರೆ ಸುತ್ತಮುತ್ತಲಿನ ನೂರಾರು ಔಷಧ ಅಂಗಡಿಗಳ ಮಾಲೀಕರು ವ್ಯಾಪಾರ ಬಂದ್ ಮಾಡಿದ್ದರಿಂದ ದೂರದ ಊರುಗಳಿಂದ ರೋಗಿಗಳನ್ನು ಕರೆತಂದಿದ್ದ ಜನರು ಔಷಧಗಳಿಗಾಗಿ ಪರದಾಡಿದರು. ಕೆ.ಆರ್.ಆಸ್ಪತ್ರೆ ಸುತ್ತಮುತ್ತಲಿನ ಧನ್ವಂತ್ರಿ ರಸ್ತೆ, ನ್ಯೂ ಸಯ್ನಾಜಿರಾವ್ ರಸ್ತೆಯಲ್ಲಿನ ನೂರಾರು ಔಷಧ ಅಂಗಡಿಗಳು ಬಂದ್ ಆಗಿದ್ದವು.
ಹೀಗಾಗಿ ನೂರಾರು ಸಂಖ್ಯೆಯಲ್ಲಿ ಅಂಗಡಿ ಮುಂದೆ ಸರತಿಯಲ್ಲಿ ನಿಂತಿದ್ದ ಜನರಿಗೆ ಔಷಧ ಪೂರೈಸಲು ಕೆ.ಆರ್.ಆಸ್ಪತ್ರೆ ಆವರಣದಲ್ಲಿನ ಒಂದೇ ಒಂದು ಜನರಿಕ್ ಔಷಧ ಮಳಿಗೆ ಹಾಗೂ ಬೆರಳೆಣಿಕೆಯ ಜನತಾ ಬಜಾರ್ ಔಷಧ ಮಳಿಗೆಗಳಿಂದ ಸಾಧ್ಯವಾಗಲೇ ಇಲ್ಲ. ಕೆ.ಆರ್.ಆಸ್ಪತ್ರೆಯ ಆವರಣದಲ್ಲಿರುವ ಜನರಿಕ್ ಔಷಧ ಮಳಿಗೆಯಲ್ಲಿ ಪ್ರತಿದಿನ ದಿನಗಳಲ್ಲೇ ವೈದ್ಯರು ಬರೆದುಕೊಟ್ಟ ಔಷಧಗಳು ನಮ್ಮಲ್ಲಿಲ್ಲ ಎಂದು ಹೊರಗೆ ಕಳುಹಿಸುತ್ತಾರೆ.
ಜತೆಗೆ ಖರೀದಿಸಿದ ಔಷಧವನ್ನು ಮತ್ತೆ ವೈದ್ಯರಿಗೆ ತೋರಿಸುತ್ತೀರಾ ಎಂದು ಕೇಳುವ ಔಷಧ ಮಳಿಗೆಯ ಸಿಬ್ಬಂದಿ, ವೈದ್ಯರಿಗೆ ತೋರಿಸುತ್ತೇವೆ ಎಂದರೆ ಒಂದು ರೀತಿಯ ಹಾಗೂ ತೋರಿಸುವುದಿಲ್ಲ ಎಂದರೆ ಒಂದು ರೀತಿಯ ಔಷಧ ನೀಡುತ್ತಾರೆ. ಅಲ್ಲದೆ, ಈ ಔಷಧ ನಮ್ಮಲ್ಲಿಲ್ಲ ಎಂಬ ಸಿದ್ಧ ಉತ್ತರ ಕೇಳಲು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾಗಿದೆ ಎಂದು ತಮ್ಮ ಸಂಬಂಧಿಯನ್ನು ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ಕರೆತಂದು ಔಷಧಕ್ಕಾಗಿ ಜನರಿಕ್ ಔಷಧ ಮಳಿಗೆಯಲ್ಲಿ ಸರತಿಯಲ್ಲಿ ನಿಂತಿದ್ದ ಎಚ್.ಡಿ.ಕೋಟೆಯ ಚಿಕ್ಕಣ್ಣ, ಮೈಸೂರು ತಾಲೂಕಿನ ಜಯರಾಮ, ಸಿದ್ದಮ್ಮ ಇತರರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆ: ಔಷಧ ವ್ಯಾಪಾರ ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಮೈಸೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಆನ್‌ಲೈನ್‌ನಲ್ಲಿ ಔಷಧ ಮಾರಾಟ ಹಾಗೂ ಸಿ-ಪೋರ್ಟಲ್ ವ್ಯವಸ್ಥೆ ಕೈಬಿಡುವಂತೆ ಒತ್ತಾಯಿಸಿದರು. ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದರಿಂದ ಯಾವುದೇ ಅಡೆತಡೆ ಇಲ್ಲದೆ ಜನರ ಕೈಗೆ ಮಾದಕ ಹಾಗೂ ಪ್ರತಿಬಂಧಕ ವಸ್ತುಗಳು ಸಿಗಲಿದ್ದು, ಇದರಿಂದ ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ ಉಂಟಾಗಲಿದೆ.
ಜತೆಗೆ ಕಳಪೆ ಗುಣಮಟ್ಟದ ಔಷಧ ಹಾಗೂ ಬಳಕೆಯ ವಿಧಿ ವಿಧಾನದ ಮಾಹಿತಿಯ ಕೊರತೆಯಿಂದ ರೋಗಿಯ ಮೇಲೆ ಮಾರಕ ಪರಿಣಾಮ ಉಂಟಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಜೀವ ರಕ್ಷಕ ಔಷಧಗಳ ಕೊರತೆ ಉಂಟಾಗಲಿದೆ. ಜತೆಗೆ ಔಷಧ ವ್ಯಾಪಾರವನ್ನೇ ನಂಬಿಕೊಂಡಿರುವ ಲಕ್ಷಾಂತರ ಜನರ ಕುಟುಂಬ ಬೀದಿಗೆ ಬೀಳಲಿದೆ. ಹೀಗಾಗಿ ಆನ್‌ಲೈನ್ ಔಷಧ ಮಾರಾಟ-ಖರೀದಿ ವ್ಯವಸ್ಥೆ ಜಾರಿಗೆ ತರಬಾರದು.
ಸಿ-ಪೋರ್ಟಲ್ ಮೂಲಕ ವಹಿವಾಟಿನ ಲೆಕ್ಕಪತ್ರ ನೀಡುವುದು ಸಮಸ್ಯೆಯಾಗಲಿದೆ. ಹೀಗಾಗಿ ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಕುಮಾರಸ್ವಾಮಿ ಎಸ್., ಕಾರ್ಯದರ್ಶಿ ರವೀಂದ್ರ ಬಾಬು ಆರ್, ಖಜಾಂಚಿ ರಾಜು ಎಂ. ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.