ಸೂರು, ನೀರು,ರಸ್ತೆ, ಚರಂಡಿ ನಿರ್ಮಾಣಕ್ಕೆ ಬೇಡಿಕೆ
Team Udayavani, Feb 22, 2022, 1:54 PM IST
ಮೈಸೂರು: ಸೂರು, ಕುಡಿಯುವ ನೀರು, ರಸ್ತೆ, ಚರಂಡಿ ನಿರ್ಮಾಣ ಬೇಡಿಕೆವಿ, ಕೆರೆ ಒತ್ತುವರಿ ತೆರವು ಸೇರಿಹಲವು ಸಮಸ್ಯೆಗಳು ಜಿಲ್ಲಾ ಮಟ್ಟದ ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳಿಬಂದವು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರನಡೆದ ಜಿಲ್ಲಾ ಮಟ್ಟದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಕರೆ ಮಾಡಿದಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಜಿಪಂ ಸಿಇಒ ಎ.ಎಂ.ಯೋಗೇಶ್ ಆಲಿಸಿದರು.
ಎಚ್.ಡಿ.ಕೋಟೆ ತಾಲೂಕಿನ ಕಂಚಮಹಳ್ಳಿಯ ವ್ಯಕ್ತಿಯೊಬ್ಬರು ಮನೆ ಕೊಡುವಂತೆ ಮನವಿಗೆ ಸ್ಪಂದಿಸಿದಉಪ ಕಾರ್ಯದರ್ಶಿ, ಮುಂದಿನ ಆರ್ಥಿಕ ವರ್ಷದಲ್ಲಿಮನೆ ನೀಡುವಂತೆ ಗ್ರಾಪಂಗೆ ಸೂಚಿಸುವುದಾಗಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ನಂದಿಪುರದ ಚಂದ್ರು ಹೊಸದಾಗಿ ಚರಂಡಿ ನಿರ್ಮಿಸುವಂತೆ ಮನವಿ ಮಾಡಿದರೆ, ನಂಜನಗೂಡು ತಾಲೂಕು ನವಿಲೂರಿನಮಹೇಶ್ ರಸ್ತೆ ಅಗಲೀಕರಣಕ್ಕೆ ಮನವಿ ಮಾಡಿದರು. ಬನ್ನೂರು ಹೋಬಳಿ ಕೊಡಗಳ್ಳಿದ ರಾಮಕೃಷ್ಣ ,ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಲುಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದುದೂರಿದರು. ತಿ.ನರಸೀಪುರ ಇಒ ಕೃಷ್ಣ ಅವರಿಗೆ ನಿಮ್ಮಸಮಸ್ಯೆ ಬಗೆಹರಿಸಲು ಸೂಚಿಸುವುದಾಗಿ ಉಪ ಕಾರ್ಯದರ್ಶಿ ಭರವಸೆ ನೀಡಿದರು.
ತಿ.ನರಸೀಪುರ ಸೋಸಲೆ ಮಹದೇವಶೆಟ್ಟಿ, ಜನನ ಮರಣ ಪ್ರಮಾಣಪತ್ರವನ್ನು ಗ್ರಾಪಂಗಳಲ್ಲಿಯೇನೀಡಿದರೆ ಅನುಕೂಲ ಎಂದರು. ಇದೇ ತಾಲೂಕಿನಹಿರಿಯೂರು ಗ್ರಾಮದ ವೀರಪ್ಪಸ್ವಾಮಿ ಅವರುಹಿರಿಯೂರು-ಕೊತ್ತೇಗಾಲ ರಸ್ತೆ ಅಭಿವೃದ್ಧಪಡಿಸಿ ಮತ್ತುಸರ್ವೆ ನಂ.9ರ ಕೆರೆ ಏರಿ ಒತ್ತುವರಿಯಾಗಿದ್ದು, ತೆರವು ಮಾಡಿಸುವಂತೆ ಕೋರಿದರು.
ಧನಗಳ್ಳಿಯಲ್ಲಿ ನಿವೇಶನದ 11 ಬಿ ಪಡೆಯುಲು ನನ್ನ ಬಳಿ ಲಂಚ ಪಡೆದರು. ಬಡವರನ್ನು ಈ ಪರಿ ಗೋಳಾಡಿಸುವುದು ನ್ಯಾಯವೇ? ಬಡವರಿಗೆಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಅನುಪಮಾ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಉಪ ಕಾರ್ಯರ್ದಶಿ ದೇವರಾಜೇಗೌಡ ಪ್ರತಿಕ್ರಿಯಿಸಿ, ಲಂಚ ಸ್ವೀಕರಿಸುವುದು ಹೇಗೆ ಅಪರಾಧದವೋ ಲಂಚ ನೀಡುವುದು ಅಪರಾಧ. ನಿಮಗೆ ಅನ್ಯಾಯವಾಗಿದ್ದರೆ ಮೇಲಿನ ಸಂಸ್ಥೆಗಳಿಗೆ ದೂರು ನೀಡಬಹುದು. ನಿಮ್ಮ ಸಮಸ್ಯೆಯನ್ನುಸಂಬಂಧಪಟ್ಟವರ ಗಮನಕ್ಕೆ ತರಲಿದೆ ಎಂದರು. ಮಾನಸಿನಗರದ ನಿವಾಸಿ ವಿಜಯ್ ಕುಮಾರ್, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ಟೆರೇಷಿಯನ್ ಕಾಲೇಜಿಂದ ಮಾನಸಿನಗರಕ್ಕೆ ಬಸ್ ಬಿಡುವಂತೆಕೋರಿದರೆ, ಮೈಸೂರಿನ ಶ್ರೀನಗರದ ರಸ್ತೆಗಳನ್ನುಅಭಿವೃದ್ಧಿಪಡಿಸಬೇಕೆಂಬ ವಾಣಿ ಎಂಬವರು ಮನವಿಗೆಸ್ಪಂದಿಸಿದ ಅಧಿಕಾರಿಗಳು, ನಿಮ್ಮ ಬಡಾವಣೆ ಮುಡಾವ್ಯಾಪ್ತಿಗೆ ಬರುತ್ತದೆ. ಮುಡಾಗೆ ಮನವಿ ಸಲ್ಲಿಸುವಂತೆ ಸಲಹೆ ನೀಡಿದರು.
ಮೈಸೂರು ತಾಲೂಕು ದಡದಹಳ್ಳಿಯ ಸುನಿಲ್ ಅವರು ಸಿಂಧುವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 5 ವರ್ಷದ ಹಿಂದೆ 20×30 ನಿವೇಶನ ಖರೀದಿಸಿದ್ದೇವೆ. ಆ ಜಾಗ ಸರ್ವೆ ನಂಬರ್‌ನಲ್ಲಿದೆ. ಅಕ್ರಮ ಸಕ್ರಮದಲ್ಲಿಬದಲಾಯಿಸಿಕೊಳ್ಳಬಹುದೇ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಉಪ ಕಾರ್ಯದರ್ಶಿ ಸರ್ವೆನಂಬರ್‌ನಲ್ಲಿರುವ ಆಸ್ತಿ ಕ್ರಮಬದ್ಧವಲ್ಲ. ಸರ್ಕಾರ ಅಕ್ರಮ ಸಕ್ರಮಕ್ಕೆ ಅರ್ಜಿ ಕರೆದಾಗ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಸಹಾಯಕ ಕಾರ್ಯದರ್ಶಿ ಕುಲದೀಪ್, ಡಿಎಚ್‌ಒ ಡಾ.ಕೆ.ಎಚ್.ಪ್ರಸಾದ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರುದ್ರೇಶ್ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.
ಅರ್ಧ ಗಂಟೆಗೆ ಫೋನ್ ಇನ್ ಮುಕ್ತಾಯ: ಸಾರ್ವಜನಿಕರ ಆಹವಾಲು ಆಲಿಸಿ ಪರಿಹರಿಸುವಮಹತ್ವಾಕಾಂಕ್ಷೆಯ ಜಿಲ್ಲಾ ಮಟ್ಟದ ಫೋನ್ ಇನ್‌ಕಾರ್ಯಕ್ರಮ ಅರ್ಧ ಗಂಟೆಗೆ ಸೀಮಿತವಾಯಿತು.ವಿವಿಧ ಭಾಗಗಳಿಂದ 15 ಕರೆಗಳು ಬಂದವು. ಸಮಸ್ಯೆಆಲಿಸಿದ ಅಧಿಕಾರಿಗಳು ಶೀಘ್ರ ಬಗೆಹರಿಸುವ ಭರವಸೆ ನೀಡಿದರು.
15 ಇಲಾಖೆಗಳಂತೆ ಸೇರಿ 15 ದಿನಕ್ಕೊಮ್ಮೆ ಫೋನ್ ಇನ್ ಕಾರ್ಯಕ್ರಮ ನಡೆಸಬೇಕು. ಕಡ್ಡಾಯವಾಗಿಜಿಲ್ಲಾ ಮಟ್ಟದ ಅಧಿಕಾರಿ ಇರಬೇಕು. ಸಮಸ್ಯೆಗಳನ್ನು ಬಗೆಹರಿಸಲು ನಿರ್ಲಕ್ಷಿಸಬಾರದು–ಎ.ಎಂ. ಯೋಗೇಶ್, ಸಿಇಒ, ಜಿಪಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.